ಮುಂಬೈ:ರೇಲ್ ವಿಕಾಸ್ ನಿಗಮ್ ಲಿಮಿಟೆಡ್ ಕಂಪನಿಯು 24.01.2003 ರಂದು ಸ್ಥಾಪಿತವಾಯಿತು. ಮಾರ್ಚ್ 2005 ರಲ್ಲಿ ಮಂಡಳಿಯ ಎಲ್ಲಾ ನಿರ್ದೇಶಕರ ನೇಮಕಾತಿಯ ನಂತರ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಆರಂಭಿಸಿತು. ರೇಲ್​ ವಿಕಾಸ್ ನಿಗಮ್ ಲಿಮಿಟೆಡ್ ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮವಾಗಿದೆ. ಯೋಜನೆಯ ಅನುಷ್ಠಾನ ಮತ್ತು ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗಾಗಿ ರೈಲ್ವೆ ಸಚಿವಾಲಯದ ನಿರ್ಮಾಣ ವಿಭಾಗವಾಗಿ ಕಾರ್ಯನಿರ್ವಹಿಸುತ್ತದೆ.
ರೈಲ್ ವಿಕಾಸ್ ನಿಗಮ ಲಿಮಿಟೆಡ್​ ಷೇರುಗಳು ಹೊಸ ವರ್ಷದಲ್ಲಿ ಅದ್ಭುತ ಆರಂಭವನ್ನು ಕಂಡಿವೆ. ಈ ರೈಲ್ವೆಯ ಷೇರು ಬುಲೆಟ್ ರೈಲಿನಂತೆ ಓಡುತ್ತಿದೆ. ಜನವರಿ ತಿಂಗಳಲ್ಲಿ ಇದುವರೆಗೆ ಶೇಕಡಾ 7 ರಷ್ಟು ಹೆಚ್ಚಳ ಕಂಡಿದೆ.
ಬುಧವಾರದಂದು ಈ ಷೇರು ಬೆಲೆ ಶೇ.6.29ಕ್ಕೆ ಹೆಚ್ಚಿದೆ. ಗುರುವಾರ ಕೂಡ 2.50 ರೂಪಾಯಿ ಹೆಚ್ಚಳವಾಗಿ 52 ವಾರಗಳ ಗರಿಷ್ಠ ಮಟ್ಟವನ್ನು ಮುಟ್ಟಿದೆ.
ನಾಲ್ಕು ವರ್ಷಗಳ ಈ ಕಂಪನಿಯ ಷೇರುಗಳಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ತಾಳ್ಮೆಯಿಂದ ಕಾದಿರುವವರು ಈಗ ಗಳಿಸಿರುವ ಮೊತ್ತವು ಅಚ್ಚರಿ ಮೂಡಿಸುವಂತಿದೆ. ನಾಲ್ಕ ವರ್ಷಗಳ ಹಿಂದಿನ 1 ಲಕ್ಷ ರೂಪಾಯಿ ಹೂಡಿಕೆಯು ಈಗ 9.97 ಲಕ್ಷ ರೂಪಾಯಿ ಆಗಿದೆ. ಬಹುತೇಕ 10 ಪಟ್ಟು ಹೆಚ್ಚುವ ಮೂಲಕ ಹೂಡಿಕೆದಾರರನ್ನು ಸಂತಸಪಡುವಂತೆ ಮಾಡಿದೆ.
ಕಳೆದ ವರ್ಷದಲ್ಲಿ ಕೂಡ ಹೂಡಿಕೆ ಮಾಡಿದವರು ಕೂಡ ಉತ್ತಮ ಲಾಭವನ್ನು ಹೊಂದಿದ್ದಾರೆ. ಈ ಕಂಪನಿಯ ಷೇರು ಒಂದು ವರ್ಷದಲ್ಲಿ 172 ಪ್ರತಿಶತಕ್ಕಿಂತ ಹೆಚ್ಚಿನ ಆದಾಯವನ್ನು ನೀಡಿದೆ. ಕಳೆದ ಒಂದೂವರೆ ವರ್ಷದಲ್ಲಿ ಈ ಷೇರು ಬೆಲೆಯು 544.91% ಲಾಭ ತಂದುಕೊಟ್ಟಿದೆ.
ಯಾವುದೇ ರೀತಿಯ ಷೇರು ಖರೀದಿಸುವ ಮೊದಲು ಅದರ ಸಾಮರ್ಥ್ಯಗಳು, ದೌರ್ಬಲ್ಯಗಳು, ಸಂಭಾವ್ಯ ರಿಸ್ಕ್​ಗಳನ್ನು ಪರಿಗಣಿಸಬೇಕು. ಸೂಕ್ತ ಲೆಕ್ಕಾಚಾರ, ಸಮಯದಲ್ಲಿ ಹೂಡಿಕೆ ನಿರ್ಧಾರ ಕೈಗೊಳ್ಳಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − six =
Remember me
