ನವದೆಹಲಿ:ಗಮ್ಯವನ್ನು ಬೇಗ ತಲುಪಬೇಕು ಎಂಬ ಪ್ರಯಾಣಿಕರಿಗೆ ಹಾಗೂ ಅತಿಹೆಚ್ಚು ಪ್ರಯಾಣಿಕರ ಒತ್ತಡ ಇರುವ ಮಾರ್ಗಗಳಲ್ಲಿ ಕ್ಷಿಪ್ರ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಡುವ ಸಲುವಾಗಿ ಭಾರತೀಯ ರೈಲ್ವೇ ಸೋಮವಾರ 40 ತದ್ರೂಪಿ (ಕ್ಲೋನ್​) ರೈಲುಗಳನ್ನು ಹಳಿಗಿಳಿಸಿದೆ.
ಈ ಕ್ಲೋನ್​ ಟ್ರೇನ್​ಗಳು 3-AC ರೈಲುಗಳಾಗಿದ್ದು, ಪೇರೆಂಟ್​ ಟ್ರೇನ್​ಗಿಂತ ಕಡಿಮೆ ನಿಲುಗಡೆ, ಹೆಚ್ಚು ವೇಗ ಹೊಂದಿರಲಿದ್ದು, ಪೇರೆಂಟ್​ ಟ್ರೇನ್​ಗಿಂತ ಮೊದಲೇ ಹೊರಡಲಿವೆ. ಪರಿಣಾಮ, ಪ್ರಯಾಣಿಕರು ಮೂಲ ರೈಲಿಗಿಂತ 2-3 ಗಂಟೆ ಮೊದಲೇ ಗಮ್ಯವನ್ನು ತಲುಪಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕ, ದೆಹಲಿ, ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶಗಳ ಅತಿಹೆಚ್ಚಿನ ಬೇಡಿಕೆಯ ಮಾರ್ಗಗಳಲ್ಲಿ ಈ ಕ್ಲೋನ್​ ಟ್ರೇನ್​ಗಳನ್ನು ಬಿಡಲಾಗಿದೆ. ಈ ರೈಲುಗಳಿಗೆ 10 ದಿನಗಳ ಮೊದಲು ರಿಸರ್ವೇಷನ್​ ಮಾಡಬಹುದಾಗಿದ್ದು, ಸೆ. 19ರ ಬೆಳಗ್ಗೆ 8ರಿಂದಲೇ ಬುಕಿಂಗ್ ಆರಂಭಗೊಂಡಿದೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
