ದೆಹಲಿ:ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸದ ಕಾರಣಕ್ಕಾಗಿ ಕಳೆದ ಎರಡು ತಿಂಗಳುಗಳಲ್ಲಿ ದೇಶಾದ್ಯಂತ ಸುಮಾರು 40 ವೈದ್ಯಕೀಯ ಕಾಲೇಜುಗಳು ಮಾನ್ಯತೆ ಕಳೆದುಕೊಂಡಿವೆ.
ಇದಲ್ಲದೆ, ತಮಿಳುನಾಡು, ಗುಜರಾತ್, ಅಸ್ಸಾಂ, ಪಂಜಾಬ್, ಆಂಧ್ರಪ್ರದೇಶ, ಪುದುಚೇರಿ ಮತ್ತು ಪಶ್ಚಿಮ ಬಂಗಾಳದ ಸುಮಾರು 100 ವೈದ್ಯಕೀಯ ಕಾಲೇಜುಗಳು ತಮ್ಮ ಮಾನ್ಯತೆಯನ್ನು ಕಳೆದು ಕೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ:ಮಲಗುವ ವಿಚಾರಕ್ಕೆ ಗಲಾಟೆ; ಮಗಳಿಗೆ 25 ಬಾರಿ ಚಾಕು ಇರಿದು ಕೊಂದ ಅಪ್ಪ
ಆಯೋಗವು ನಡೆಸಿದ ತಪಾಸಣೆಯಲ್ಲಿ ಕಾಲೇಜುಗಳು ಸಿಸಿಟಿವಿ ಕ್ಯಾಮೆರಾ ಸಂಬಂಧ ಲೋಪಗಳು, ಬಯೋಮೆಟ್ರಿಕ್ ಹಾಜರಾತಿ, ಅಧ್ಯಾಪಕರ ಕಾರ್ಯವಿಧಾನ ಪಟ್ಟಿ ಹೀಗೆ ಎನ್‌ಎಂಸಿಯ ನಿಗದಿತ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎಂದು ಕಂಡು ಬಂದಿದೆ.
2014ರಿಂದ ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು, 2014ರ ಮೊದಲು 387ರಷ್ಟಿದ್ದ ವೈದ್ಯಕೀಯ ಕಾಲೇಜುಗಳು ಈಗ 654ಕ್ಕೆ ತಲುಪಿವೆ. ಇದಲ್ಲದೆ, 51,348ರಷ್ಟಿದ್ದ ಎಂಬಿಬಿಎಸ್ ಸೀಟುಗಳು 99,763ಕ್ಕೆ ಏರಿಕೆಯಾಗಿವೆ. ಆಯೋಗವು ಒಂದು ತಿಂಗಳ ಕಾಲ ಕಾಲೇಜುಗಳಿಗೆ ಭೇಟಿ ನೀಡಿ ನ್ಯೂನತೆಗಳನ್ನು ಗುರುತಿಸಿದ್ದು, ವೈದ್ಯಕೀಯ ಕಾಲೇಜುಗಳು ಆಯೋಗದ ನಿರ್ಧಾರದ ವಿರುದ್ಧ ಪುರಾವೆಗಳೊಂದಿಗೆ 30 ದಿನಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
