ನವದೆಹಲಿ:ಆಂಡ್ರಾಯ್ಡ್​ ಸ್ಮಾರ್ಟ್​ಫೋನ್​ ಮತ್ತು ಟಾಬ್ಲೆಟ್​ ಹೊಂದಿರುವವರು ಪ್ರಖ್ಯಾತ ಆಪ್​ ಹೊಂದನ್ನು ಇನ್​ಸ್ಟಾಲ್​ ಮಾಡಿಕೊಂಡಿದ್ದರೆ, ಈಗಲೇ ಡಿಲೀಟ್​​ ಮಾಡಿಬಿಡಿ. ಏಕೆಂದರೆ, ಆ್ಯಪ್​ ಹಿಂದೆ ನಿಮಗೇ ಗೊತ್ತಿಲ್ಲದಂತೆ ನಿಮ್ಮ ಬ್ಯಾಂಕ್​ ಖಾತೆಯಲ್ಲಿರುವ ಹಣವನ್ನು ಹಂತ ಹಂತವಾಗಿ ಬರಿದು ಮಾಡಿಬಿಡುತ್ತಾರೆ ಎಚ್ಚರ!
ಸ್ಮಾರ್ಟ್​ ಫೋನ್​ ಅಥವಾ ಟಾಬ್ಲೆಟ್​ ಬಳಕೆದಾರರು ವೈರಸ್​ ದಾಳಿ ಆಗದಿರಲೆಂದು ಪ್ಲೇಸ್ಟೋರ್​ನಲ್ಲಿ ದೊರೆಯುವ ಮಾಲ್ವೇರ್​, ರ್ಯಾನ್​ಸೊಮ್ವೇರ್​ ಮತ್ತು ಫ್ಲೀಸಿವೇರ್​ ಎಂಬ ಸಾಫ್ಟ್​ವೇರ್​ಗಳನ್ನು ಇಟ್ಟುಕೊಂಡು ತಮ್ಮ ಫೋನ್​ ಅನ್ನು ಮ್ಯಾನೇಜ್​ ಮಾಡುತ್ತಿರುತ್ತಾರೆ. ಇದರ ನಡುವೆ ಸಂಶೋಧಕರು ನೀಡಿದ ಅನೇಕ ಎಚ್ಚರಿಕೆಗಳನ್ನೂ ಸಹ ಪಾಲಿಸುತ್ತಾ ಬರುತ್ತಿರುತ್ತಾರೆ. ಆಂಡ್ರಾಯ್ಡ್​ ಹೆಚ್ಚು ಜನಪ್ರಿಯವಾಗಿರುವ ಕಾರಣ ಕೆಲ ಡೆವಲಪರ್ಸ್​ಗಳು ದುರುದ್ದೇಶಪೂರಿತ ಆ್ಯಪ್​ ಮೂಲಕ ವಂಚಿಸಲು ಕಾಯುತ್ತಿರುತ್ತಾರೆ.
ಹೌದು, ಸಂಶೋಧಕರ ಇತ್ತೀಚಿನ ವರದಿಯ ಪ್ರಕಾರ ” ಸ್ನ್ಯಾಪ್​ ಟ್ಯೂಬ್​” (SnapTube) ಆ್ಯಪ್ ಅಪಾಯಕಾರಿ ಎಂದು ತಿಳಿಸಿದೆ. ಯೂಟ್ಯೂಬ್​ ಮತ್ತು ಫೇಸ್​ಬುಕ್​ ಮೂಲಕ ವಿಡಿಯೋ ಡೌನ್​ಲೋಡ್​ ಮಾಡಿಕೊಳ್ಳಲು ಈ ಆ್ಯಪ್​ ಬಳಸಲಾಗುತ್ತದೆ. ಈಗಾಗಲೇ 40 ಮಿಲಿಯನ್​ಗೂ ಹೆಚ್ಚು ಡೌನ್​ಲೋಡ್​ ಸಹ ಆಗಿದೆ. ಸ್ನ್ಯಾಪ್​ ಟ್ಯೂಬ್​ ಒಂದು ಉಚಿತ ಆ್ಯಪ್​. ಹಾಗಂತ ಇದಕ್ಕೆ ಬೆಲೆತೆರಬೇಕಾಗಿಲ್ಲ ಎಂದು ಭಾವಿಸಿದ್ದರೆ, ನಿಮ್ಮ ಊಹೆ ತಪ್ಪು.ಇದನ್ನೂ ಓದಿ:VIDEO| ಮೃತ ಸ್ನೇಹಿತ ಕೊನೇ ಗೋಲು ಬಾರಿಸಲು ಟೀಮ್​ಮೇಟ್ಸ್​​ ಸಹಾಯ: ವಿಡಿಯೋ ನೋಡಿದ್ರೆ ಕಣ್ತುಂಬಿ ಬರುತ್ತೆ!
ಅಪ್​ಸ್ಟ್ರೀಮ್​ ಸಿಸ್ಟಮ್​ (UpStreamSystem) ವರದಿಯ ಪ್ರಕಾರ ಸ್ನ್ಯಾಪ್​ ಟ್ಯೂಬ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡಿದ್ದರೆ, ನಮಗೆ ಗೊತ್ತಿಲ್ಲದಂತೆ ಲಾಗಿನ್​ ಆಗಿ ಪ್ರೀಮಿಯಮ್​ ಸೇವೆಯನ್ನು ಬಳಸಿಕೊಂಡು ನಮ್ಮ ಬ್ಯಾಂಕ್​ ಖಾತಯಿಂದ ಹಣ ಎಗರಿಸುತ್ತಿದೆ. ಆ್ಯಪ್​ನಲ್ಲಿ ನೀಡಿರುವ ಮಾಹಿತಿಯ ಆಧಾರದ ಮೇಲೆ ಬ್ಯಾಂಕ್​ಗೆ ಕನ್ನ ಹಾಕುತ್ತಾರೆ ಹುಷಾರ್​!.
ಸಾಮಾನ್ಯವಾಗಿ ಕೆಲವೊಂದು ಆ್ಯಪ್​ಗಳಲ್ಲಿ ಮೊದಲು ಉಚಿತ ಸೇವೆ ನೀಡಿ ನಂತರ ತಿಂಗಳು ಹಾಗೂ ವರ್ಷಕ್ಕೆ ಇಷ್ಟು ಎಂದು ಚಾರ್ಜ್​ ಮಾಡುತ್ತಾರೆ. ಸೇವೆ ಮುಂದವರಿಯಬೇಕಾದ್ದಲ್ಲಿ ಹಣ ಪಾವತಿ ಮಾಡಿ ಮುಂದುವರಿಸಬಹುದು. ಕೆಲವೊಬ್ಬರು ಉಚಿತ ಅವಧಿಯನ್ನು ಬಳಸಿಕೊಂಡು ಆ್ಯಪ್​ ಕುರಿತು ಆಸಕ್ತಿ ಇಲ್ಲದಿದ್ದರೆ ಅನ್​ಇನ್​ಸ್ಟಾಲ್​ ಮಾಡಿಬಿಡುತ್ತಾರೆ. ಆದರೆ, ಲಾಗ್​ ಆಫ್​ ಮಾಡಿದ್ದೇವೋ ಎಂಬುದನ್ನು ಗಮನಿಸುವುದೇ ಇಲ್ಲ. ಇದೇ ರೀತಿ ಸ್ನ್ಯಾಪ್​ ಟ್ಯೂಬ್​ ಆ್ಯಪ್​ ಡೌನ್​ಲೋಡ್​ ಮಾಡಿ, ಟ್ರಯಲ್​ ವರ್ಷನ್​ ನೋಡಿ ಲಾಗ್​ಆಫ್​ ಮಾಡದೇ ಆ್ಯಪ್​ ತೆಗೆದಿದ್ದರೆ, ಆ್ಯಪ್​ ಡೆವಲಪರ್ಸ್​ ಅವರಾಗಿಯೇ ಲಾಗಿನ್​ ಆಗಿ ನಿಮ್ಮ ಖಾತೆಯಲ್ಲಿ ಹಣವನ್ನು ಎಗರಿಸುತ್ತಾರೆ ಎಂಬ ಆತಂಕಕಾರಿ ಮಾಹಿತಿ ತಿಳಿದುಬಂದಿದೆ.ಇದನ್ನೂ ಓದಿ:VIDEO| ಥೇಟ್​ ರಶ್ಮಿಕಾರನ್ನೇ ಹೋಲುವ ಟಿಕ್​ಟಾಕ್​ ಸುಂದರಿ: ವಿಡಿಯೋ ನೋಡಿದ್ರೆ ಅಚ್ಚರಿಯಾಗೋದು ಖಂಡಿತ!
ಇದೇ ರೀತಿ ವಂಚನಾತ್ಮಕ ಚಟುವಟಿಕೆಯಿಂದಲೇ ಸ್ನ್ಯಾಪ್​ ಟ್ಯೂಬ್​ ಅಂದಾಜು 100 ಮಿಲಿಯನ್​ ಡಾಲರ್ ಹಣವನ್ನು ಈಗಾಗಲೇ​ ಸಂಪಾದಿಸಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಾಕಷ್ಟು ದೂರುಗಳ ಬಂದ ಹಿನ್ನೆಲೆಯಲ್ಲಿ ಪ್ಲೇ ಸ್ಟೋರ್​ನಿಂದ ಆ್ಯಪ್​ ಅನ್ನು ತೆಗೆದುಹಾಕಲಾಗಿದೆ. ಆದರೆ, ಈಗಾಗಲೇ ಡೌನ್​ಲೋಡ್​ ಮಾಡಿಕೊಂಡು ಲಾಗ್​ ಆಫ್​ ಮಾಡದೇ ಅನ್​ಇನ್​ಸ್ಟಾಲ್​ ಮಾಡಿದ್ದರೆ, ಅಂತವರ ಖಾತೆಗೆ ಕನ್ನ ಗ್ಯಾರೆಂಟಿ ಎನ್ನಲಾಗುತ್ತಿದೆ. ಹೀಗಾಗಿ ನೀವೇನಾದರೂ ಒಮ್ಮೆ ಬಳಸಿದ್ದರೆ, ಮತ್ತೊಮ್ಮೆ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.(ಏಜೆನ್ಸೀಸ್)
ಮೂರು ಕಾಡಾನೆ ಸಾವು; ಕರ್ತವ್ಯ ಲೋಪದ ಆರೋಪದ ಮೇರೆಗೆ ನಾಲ್ವರು ಅಧಿಕಾರಿಗಳ ಅಮಾನತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − two =
Remember me
