ಅಗರ್:ದೇವರ ಮೆರವಣಿಗೆ ಸಮಯದಲ್ಲಿ ವಿತರಿಸಲಾದ ಪ್ರಸಾದ ಸೇವಿಸಿ 40 ಜನರು ಅಸ್ವಸ್ಥರಾಗಿರುವ ಘಟನೆ ಮಧ್ಯಪ್ರದೇಶದ ಅಗರ ಜಿಲ್ಲೆಯ ನಲ್ಖೇಡ ತಹಸಿಲ್‌ನ ಮೋಲ್ಯಖೇಡಿ ಗ್ರಾಮದಲ್ಲಿ ನಡೆದಿದೆ.ಇದನ್ನೂ ಓದಿ:ಕಾಡಿನಲ್ಲಿ 14 ವರ್ಷದ ಬಾಲಕನ ನರಬಲಿ ಶಂಕೆ: ಮಹಿಳಾ ಅರ್ಚಕಿ ಸೇರಿ ನಾಲ್ವರ ಬಂಧನಶ್ರಾವಣ ಮಾಸದ ಸೋಮವಾರದಂದು ತಡರಾತ್ರಿ ಶಿವನ ಆರಾಧನೆಯ ಜೊತೆಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಗುತ್ತಿತ್ತು. ಸೋಮವಾರ ಸಂಜೆ 7 ಗಂಟೆಗೆ ಸುಮಾರಿಗೆ ಮಹಾದೇವ ದೇವಸ್ಥಾನದಲ್ಲಿ ಆರತಿ ನೆರವೇರಿಸಿದ ನಂತರ ನೆರೆದ ಭಕ್ತರಿಗೆಲ್ಲ ಕಡಲೆಯನ್ನು ರುಬ್ಬಿ ತಯಾರಿಸಿದ ಪ್ರಸಾದ ವಿತರಿಸಲಾಯಿತು.ಎಲ್ಲಾ ಭಕ್ತಾದಿಗಳು ಪ್ರಸಾದವನ್ನು ಸ್ವೀಕರಿಸಿದ ನಂತರ ಮೆರವಣಿಗೆ ಪ್ರಾರಂಭವಾಗಿದ್ದು, ರಾತ್ರಿ 8.30ರ ಸುಮಾರಿಗೆ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಭಕ್ತರು ಮಧ್ಯದಿಂದಲೇ ಮನೆಗೆ ನಿರ್ಗಮಿಸಲು ಆರಂಭಿಸಿದರು. ಅನೇಕ ಮಹಿಳೆಯರು ಮತ್ತು ಮಕ್ಕಳು ಮೆರವಣಿಗೆಯ ಸಮಯದಲ್ಲೇ ವಾಂತಿ ಮಾಡಲು ಪ್ರಾರಂಭಿಸಿದ್ದು, ಈ ವೇಳೆ ಕೆಲ ಮಕ್ಕಳು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.ಇದನ್ನೂ ಓದಿ:ಸರ್ಕಾರ ರಚನೆಯಾದ ಕೆಲ ದಿನಗಳಲ್ಲೇ ಅಭಿವೃದ್ಧಿಗೆ ಹಣವಿಲ್ಲ ಎಂದ ರಾಜ್ಯ ಸರ್ಕಾರ: ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿಕೂಡಲೇ ಸಂಬಂಧಿಕರು ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಮಾಹಿತಿ ಪಡೆದ ಆರೋಗ್ಯ ಇಲಾಖೆಯು ಗ್ರಾಮಕ್ಕೆ ತಂಡವನ್ನು ಕಳುಹಿಸಿದೆ. ಅಪಾರ ಪ್ರಮಾಣದ ಪ್ರಸಾದ ಸೇವಿಸಿ ಭಕ್ತರ ಆರೋಗ್ಯ ಹದಗೆಟ್ಟಿದೆ ಎಂದು ಹೇಳಲಾಗುತ್ತಿದ್ದು, ಗ್ರಾಮದಲ್ಲಿಯೇ ಜನರಿಗೆ ಚಿಕಿತ್ಸೆ ನೀಡಲಾಯಿತು. 15 ಮಂದಿಯ ಸ್ಥಿತಿ ಸುಧಾರಿಸದ ಕಾರಣ ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸದ್ಯ ಎಲ್ಲರ ಸ್ಥಿತಿ ಸಹಜವಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − twelve =
Remember me
