ಪಟ್ನಾ:ಒಬ್ಬ ವ್ಯಕ್ತಿಗೆ ಅಂದಾಜು ಎಷ್ಟು ಜನ ಪತ್ನಿಯರಿರಬಹುದು ಒಂದು, ಎರಡು, ಹತ್ತು ಅಥವಾ ಹದಿನೈದು ಜನರನ್ನು ವಿವಾಹವಾಗಿರುವುದನ್ನು ನಾವು ನೋಡಿರುತ್ತೇವೆ ಕೇಳಿರುತ್ತೇವೆ.
ಬಿಹಾರದಲ್ಲಿ ಒಬ್ಬ ವ್ಯಕ್ತಿ 40 ಜನ ಹೆಂಡತಿಯರನ್ನು ಹೊಂದುವ ಮೂಲಕ ಸುದ್ದಿಯಲ್ಲಿದ್ದು ಈ ವಿಚಾರ ಜಾತಿ ಗಣತಿ ವೇಳೆ ಜಗಜ್ಜಾಹೀರಾಗಿದೆ.
ಬಿಹಾರದ ಅಗರ್ವಾಲ್ ಜಿಲ್ಲೆಯ ರೆಡ್‍ಲೈಟ್ ಏರಿಯಾದಲ್ಲಿ ಜಾತಿ ಗಣತಿ ನಡೆಸುವ ವೇಳೆ 40 ಜನ ಮಹಿಳೆಯರು ಹೇಳಿದ ಹೆಸರು ಕೇಳಿ ಅಧಿಕಾರಿಗಳು ಒಮ್ಮೆಲೆಗೆ ಶಾಕ್​ ಆಗಿದ್ದಾರೆ.
ಇದನ್ನೂ ಓದಿ:ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ ಲೈಮ್​ ಸೋಡಾ ಪೋಟೋ; ವಿಶೇಷ ಏನಿರಬಹುದು?
40 ಜನ ಮಹಿಳೆಯರು ತಮ್ಮ ಪತಿಯ ಹೆಸರನ್ನು ರೂಪ್​ಚಂದ್​ ಎಂದು ಹೇಳಿದ್ದಾರೆ. ಅವರ ಮಕ್ಕಳು ಸಹ ತಂದೆಯ ಹೆಸರಿನ ಜಾಗದಲ್ಲಿ ರೂಪ್​ಚಂದ್​ ಹೆಸರನ್ನು ಬರೆದಿರುವುದು ಅಧಿಕಾರಿಗಳಿಗೆ ಆಶ್ಚರ್ಯ ಮೂಡಿಸಿದೆ.
ಅಗರ್ವಾಲ್ ಜಿಲ್ಲೆಯ ವಾರ್ಡ್​ ನಂ 7ರ ರೆಡ್​ಲೈಟ್​ ಏರಿಯಾದಲ್ಲಿ ವಾಸಿಸುವ ಜನರು ತಮ್ಮ ಜೀವನೋಪಾಯಕ್ಕಾಗಿ ಹಾಡುವುದು ಹಾಗೂ ನೃತ್ಯವನ್ನು ಮಾಡುತ್ತಾರೆ. ಆದರೆ, ಇವರ್‍ಯಾರಿಗೂ ಸ್ಥಿರ ವಿಳಾಸ ಇಲ್ಲದ ಕಾರಣ ಇಲ್ಲಿನ ಮಹಿಳೆಯರು ತಮ್ಮ ಪತಿಯ ಹೆಸರಿನ ಜಾಗದಲ್ಲಿ ರೂಪ್​ಚಂದ್​ ಎಂದು ಹೆಸರಿಸಿದ್ದಾರೆ.
ಇದೀಗ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಯಾರು ಈ ರೂಪಚಂದ್​ ಎಂದು ತಲೆಕೆಡಿಸಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + twenty =
Remember me
