ನವದೆಹಲಿ:ರಾಜ್ಯ ಮಾತ್ರವಲ್ಲ ದೇಶಾದ್ಯಂತ ಹೃದಯಾಘಾತಕ್ಕೀಡಾಗಿ ಸಾಯುತ್ತಿರುವ ಪ್ರಕರಣಗಳು ಸಂಭವಿಸುತ್ತಿವೆ. ಇತ್ತೀಚೆಗಷ್ಟೇ ಉಡುಪಿಯಲ್ಲಿ ಯುವತಿಯೊಬ್ಬಳು ಸಮಾರಂಭವೊಂದರಲ್ಲಿ ಹೆಜ್ಜೆ ಹಾಕುತ್ತಲೇ ಕುಸಿದು ಬಿದ್ದು ಸಾವಿಗೀಡಾಗಿದ್ದಳು. ಆ ಮೂಲಕ ಅಂದಿನ ಸಂಭ್ರಮಕ್ಕೂ ಸಾವಿನ ಸೂತಕ ಆವರಿಸಿತ್ತು. ಅಂಥದ್ದೇ ಇನ್ನೊಂದು ಪ್ರಕರಣ ವರದಿಯಾಗಿದೆ.
ಮನೋಜ್ ವಿಶ್ವಕರ್ಮ (40) ಎಂಬಾತ ಮದುವೆ ಸಮಾರಂಭವೊಂದರಲ್ಲಿ ಖುಷಿಯಿಂದ ಕುಣಿಯುತ್ತಲೇ ಕುಸಿದು ಬಿದ್ದ ಪ್ರಕರಣವೊಂದು ನಡೆದಿದೆ. ಈ ಕುರಿತ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಜಸ್ಥಾನದ ಪಿಪ್ಲಾನಿ ಕತ್ರ ಎಂಬಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ನಿನ್ನೆ ಸಂಭ್ರಮದಲ್ಲಿದ್ದ ಯುವತಿ ಇಂದಿಲ್ಲ; ಸಂಬಂಧಿಕರ ಸಮಾರಂಭದಲ್ಲಿ ಕುಸಿದು ಬಿದ್ದು ಸಾವು..
ಸಂಬಂಧಿಯೊಬ್ಬರ ಮದುವೆಗೆ ಹೋಗಿ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಈತ ಸಾವಿಗೀಡಾಗಿದ್ದು, ಅದಾಗಿ ಕೆಲವು ದಿನಗಳ ಬಳಿಕ ವಿಡಿಯೋ ವೈರಲ್ ಆಗಿದ್ದರಿಂದ ಸಾವಿನ ಪ್ರಕರಣ ಬಹಿರಂಗಗೊಂಡಿದೆ. ಇದೇ ರೀತಿ ಅ. 18ರಂದು ರಮೇಶ್ ವಂಜಾರ (51) ಎಂಬಾತ ಗುಜರಾತ್​ನ ದಾಹೊಡ್​ನಲ್ಲಿ ನಡೆದ ಸಮಾರಂಭವೊಂದರಲ್ಲಿ ಕುಸಿದು ಬಿದ್ದು ಸಾವಿಗೀಡಾಗಿದ್ದ. ಮೊನ್ನೆಮೊನ್ನೆಯಷ್ಟೇ ಉಡುಪಿಯಲ್ಲಿ ಜ್ಯೋಸ್ನಾ ಎಂಬ ಯುವತಿ ರೋಸ್ ಸಮಾರಂಭದಲ್ಲಿ ಹೆಜ್ಜೆ ಹಾಕುತ್ತಲೇ ಕುಸಿದು ಬಿದ್ದಿದ್ದು, ಬಳಿಕ ಸಾವಿಗೀಡಾಗಿದ್ದಳು.
ರಾಜ್ಯದಲ್ಲಿ ಒಂದೇ ದಿನ 108 ಇನ್​ಸ್ಪೆಕ್ಟರ್​ಗಳ ವರ್ಗಾವಣೆ; ನಿಮ್ಮೂರಿಗೆ ಯಾರು ಇನ್​ಸ್ಪೆಕ್ಟರ್? ಇಲ್ಲಿದೆ ಪೂರ್ತಿ ಪಟ್ಟಿ..

ನೀರಿಗೆ ಬಿತ್ತು ಪ್ರಪೋಸ್ ಮಾಡಲೆಂದು ತಂದ ಉಂಗುರ; ಸಮುದ್ರಕ್ಕೇ ಧುಮುಕಿದ ಪ್ರಿಯಕರ: ಆಮೇಲೇನಾಯ್ತು!

ಶ್ರದ್ಧಾ ಪ್ರಕರಣದ ಆರೋಪಿ ಅಫ್ತಾಬ್​ನನ್ನು ಕರೆದೊಯ್ಯುತ್ತಿದ್ದ ಪೊಲೀಸ್​ ವ್ಯಾನ್​ ಅಡ್ಡಗಟ್ಟಿದ ಖಡ್ಗಧಾರಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
