ನವದೆಹಲಿ:ಗಂಡ ಒಂದು ಊರಿನಲ್ಲಿ ಹೆಂಡತಿ ಇನ್ನೊಂದು ಊರಿನಲ್ಲಿ ಇರುವುದು ಸಂಸಾರಕ್ಕೆ ನಾವೇ ಇಟ್ಟುಕೊಳ್ಳುವ ಕೊಳ್ಳಿ ಎನ್ನುತ್ತಾರೆ. ಅದೇ ರೀತಿ ಒಂದು ರಾಜ್ಯದಲ್ಲಿ ಹೆಂಡತಿ, ಮಕ್ಕಳನ್ನು ಬಿಟ್ಟು, ಇನ್ನೊಂದು ರಾಜ್ಯದಲ್ಲಿ ತಾನು ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಇದೀಗ ಜೈಲು ಪಾಲಾಗುವಂತಾಗಿದೆ.
ಮುಕೇಶ್​ ಪವಾನ್​ (4) ಹೆಸರಿನ ವ್ಯಕ್ತಿ ಮೂಲತಃ ಬಿಹಾರದವನು. ಅವನಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಹೆಂಡತಿ ಮಕ್ಕಳು ಬಿಹಾರದ ದರ್ಭಂಗದಲ್ಲಿ ವಾಸವಿದ್ದಾರೆ. ಆದರೆ ದುಡಿಮೆಯ ಬೆನ್ನು ಹತ್ತಿದ ಮುಕೇಶ್​ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನೆಲೆಸಿದ್ದ. ಕಾರೊಂದನ್ನು ಇಟ್ಟುಕೊಂಡಿದ್ದು, ಅದರದ್ದೇ ಬಾಡಿಗೆ ಕೆಲಸ ಮಾಡಿಕೊಂಡಿದ್ದ. ಈ ಮಧ್ಯೆ ಅವನಿಗೆ ರೇಷ್ಮಾ (20) ಹೆಸರಿನ ಯುವತಿಯೊಂದಿಗೆ ಪ್ರೀತಿ ಹುಟ್ಟಿದ್ದು, ಕಳೆದ ಎರಡು ವರ್ಷಗಳಿಂದ ಆಕೆಯೊಂದಿಗೆ ಲೀವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದ. ದೆಹಲಿಯಲ್ಲಿ ಸುಭಾಷ್ ಪ್ಲೇಸ್ ಪ್ರದೇಶದಲ್ಲಿ ಇಬ್ಬರು ಒಟ್ಟಿಗೆ ಸಂಸಾರ ನಡೆಸುತ್ತಿದ್ದರು.
ಶುಕ್ರವಾರ ಮಧ್ಯ ರಾತ್ರಿ 1.30ರ ಸಮಯಕ್ಕೆ ಸುಭಾಷ್ ಪ್ಲೇಸ್ ಪೊಲೀಸ್​ ಠಾಣೆಗೆ ಒಂದು ಕರೆ ಬಂದಿದೆ. ಯುವತಿಯೊಬ್ಬಳು ನಾಲ್ಕನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾಳೆ ಎಂದು ಮಾಹಿತಿ ನೀಡಲಾಗಿದೆ. ತಕ್ಷಣ ಸ್ಥಳಕ್ಕೆ ಹೋದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವಳು ಅದಾಗಲೇ ಕೊನೆಯುಸಿರೆಳಿದಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಈ ರೀತಿ ಸಾವಿಗೀಡಾಗಿದ್ದು, ಬೇರಿನ್ನಾರೂ ಅಲ್ಲ, ಮುಕೇಶ್​ನ ಗರ್ಲ್​ಫ್ರೆಂಡ್​ ರೇಷ್ಮಾ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಅಲ್ಲಿದ್ದ ಸಿಸಿಟಿವಿ ಪರಿಶೀಲಿಸಿದ್ದಾರೆ. ಆಗ ಅದರಲ್ಲಿ ಮುಕೇಶ್​ ಕಾಣಿಸಿಕೊಂಡಿದ್ದಾನೆ. ಆತನೇ ರೇಷ್ಮಾಳನ್ನು ಎತ್ತಿ ಕೆಳಗೆ ಹಾಕಿರುವುದು ಕಂಡುಬಂದಿದೆ. ತಕ್ಷಣ ಕಾರ್ಯಚಕಿತರಾದ ಪೊಲೀಸರು ಮುಕೇಶ್​ಗೆ ಬಲೆ ಬೀಸಿದ್ದಾರೆ. ಅದಾಗಲೇ ದೆಹಲಿಯಿಂದ ಬಿಹಾರಕ್ಕೆ ಹೊರಟಿದ್ದ ಆತನನ್ನು ಉತ್ತರ ಪ್ರದೇಶದ ಲಖನೌನಲ್ಲಿ ಬಂಧಿಸಲಾಗಿದೆ. ಯಾವುದೋ ಒಂದು ಜಗಳದಿಂದ ಸಿಟ್ಟಾಗಿ ಈ ರೀತಿ ಮಾಡಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ರೇಷ್ಮಾಳ ಮೃತದೇಹವನ್ನು ಸುಟ್ಟು ಹಾಕಲು ಪ್ರಯತ್ನಿಸಿದೆ, ಆದರೆ ಅಕ್ಕ ಪಕ್ಕದ ಬಿಲ್ಡಿಂಗ್​ನಲ್ಲಿ ಕೆಲವರು ಎಚ್ಚರ ಇದ್ದಾರೆನ್ನುವುದು ಗೊತ್ತಾದ ಹಿನ್ನೆಲೆಯಲ್ಲಿ ಹಾಗೇ ಬಿಟ್ಟು ಓಡಿ ಬಂದೆ ಎಂದು ಆತ ತಿಳಿಸಿದ್ದಾನೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಆಹಾ ಎಷ್ಟು ರುಚಿಯಾಗಿದೆ ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುವವರು ಇಲ್ಲಿ ನೋಡಿ.. ಇದು ಎಂಜಲು ರೊಟ್ಟಿ..!
ಖಾಸಗಿ ವಿಡಿಯೋವನ್ನು ಮಾಧ್ಯಮಗಳಿಗೆ ನೀಡುವ ಬೆದರಿಕೆ! ಯುವಕನನ್ನು ಕೂಡಿ ಹಾಕಿ ಹಲ್ಲೆ ನಡೆಸಿದ ರೌಡಿ ಗ್ಯಾಂಗ್!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:ten − two =
Remember me
