ಬೆಂಗಳೂರು:ಪ್ರವಾಸದ ವೇಳೆ ಮುಖ್ಯ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯೊಂದಿಗೆ ರೊಮ್ಯಾಂಟಿಕ್ ಫೋಟೋಶೂಟ್ ಮಾಡಿಸಿಕೊಂಡಿರುವ ವಿಡಿಯೋ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕಿ ಅಮಾನತು ಮಾಡಲಾಗಿತ್ತು.  ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದ್ದಂತೆ ಇತ್ತ 40 ವರ್ಷದ ಶಿಕ್ಷಕಿಯೊಬ್ಬರು ಮತ್ತು 20 ವರ್ಷದ ವಿದ್ಯಾರ್ಥಿಯನ್ನು ಮದುವೆಯಾದ ಹಳೆ ವಿಡಿಯೋ ಕೂಡಾ ವೈರಲ್​​ ಆಗುತ್ತಿದೆ.
ಚಿಕ್ಕಬಳ್ಳಾಪುರದಲ್ಲಿ ಪ್ರವಾಸದ ವೇಳೆ ಮುಖ್ಯ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯೊಂದಿಗೆ ರೊಮ್ಯಾಂಟಿಕ್ ಫೋಟೊ ಶೂಟ್ ಮಾಡಿಸಿಕೊಂಡಿರುವ ವಿಡಿಯೋ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ.ಫೋಟೋಗಳಲ್ಲಿ, ವಿದ್ಯಾರ್ಥಿ ಮತ್ತು ಮುಖ್ಯ ಶಿಕ್ಷಕಿ ಆಕ್ಷೇಪಾರ್ಹ ರೀತಿಯಲ್ಲಿ ವಿವಿಧ ಪೋಸ್ ನೀಡಿರುವುದು ಕಂಡುಬಂದಿದೆ. ವಿದ್ಯಾರ್ಥಿಯು ಶಿಕ್ಷಕಿಯ ಕೆನ್ನೆಗೆ ಮುತ್ತಿಡುವುದು ಮತ್ತು ಹಿಂಬದಿಯಿಂದ ಸೆರಗನ್ನ ಎಳೆದು ಹಿಡಿದಿರುವುದು, ಶಿಕ್ಷಕಿಯನ್ನು ಎತ್ತಿಕೊಂಡಿರುವುದು ಸೇರಿದಂತೆ ವಿವಿಧ ಭಂಗಿಗಳಲ್ಲಿ ಪೋಸ್ ನೀಡಲಾಗಿದೆ. ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ಸುದ್ದಿಯಲ್ಲಿತ್ತು.

2022 ಡಿಸೆಂಬರ್​ 12 ರಂದು ಬಿಹಾರದ ಸಮಸ್ತಿಪುರದಲ್ಲಿ 40 ವರ್ಷದ ಶಿಕ್ಷಕಿಯೊಬ್ಬರು ಮತ್ತು 20 ವರ್ಷದ ವಿದ್ಯಾರ್ಥಿಯನ್ನು ದೇವಾಲಯದಲ್ಲಿ ಮದುವೆ ಮಾಡಿಕೊಂಡರು. ಅದನ್ನು ವಿಡಿಯೋ ಮೂಲಕ ಸೆರೆಹಿಡಿಯಲಾಗಿದ್ದು, ಅದೀಗ ವೈರಲ್ ಆಗಿದೆ.
#Bihar#Marriage#lovepic.twitter.com/2oCo8qCFIN
— RAJ (@Raj19972Raj)December 11, 2022

ಶಿಕ್ಷಕಿ ಮತ್ತು ವಿದ್ಯಾರ್ಥಿಯು ಮದುವೆಯ ವಿಧಿವಿಧಾನಗಳಲ್ಲಿ ಭಾಗವಹಿಸುತ್ತಿರುವುದನ್ನು ವಿಡಿಯೋ ತುಣುಕಿನಲ್ಲಿ ತೋರಿಸಲಾಗಿದೆ ಮತ್ತು ವಿಡಿಯೋ ಕ್ಷಿಪ್ರ ವೇಗದಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ತಮಾಷೆಯಾಗಿ ಕಾಮೆಂಟ್​​ ಮಾಡುತ್ತಿದ್ದಾರೆ.
ಆದರೆ ಇದು ಸಾಮಾಜಿಕ ಕಟ್ಟುಪಾಡುಗಳು ಮತ್ತು ಮನುಷ್ಯರ ನಡುವಣ ಸಂಬಂಧಗಳ ಸಂಕೀರ್ಣತೆಗಳ ಬಗ್ಗೆ ಬಿಸಿ ಚರ್ಚೆಗಳನ್ನು ಹುಟ್ಟುಹಾಕಿದೆ. ಅವರ ಸಂಬಂಧದ ಸ್ವರೂಪದ ಬಗ್ಗೆ ವೈವಿಧ್ಯಮಯ ಅಭಿಪ್ರಾಯಗಳು ಹರಡಿವೆ.
ಚುಂಬನದಿಂದ ರೋಮಾಂಚನ..ಬೆಚ್ಚಿಬೀಳಿಸುವ ಸಂಗತಿ ಬಹಿರಂಗಪಡಿಸಿದ ವೈದ್ಯರು…

ಶ್ವಾನಗಳು ಕಾರಿನ ಟೈರ್‌ ಮೇಲೆ ಏಕೆ ಮೂತ್ರ ವಿಸರ್ಜಿಸುತ್ತವೆ ಎಂದು ನಿಮಗೆ ತಿಳಿದಿದ್ಯಾ?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − ten =
Remember me
