ನವದೆಹಲಿ:ಜೂನ್​ 1ರ ಶನಿವಾರ ಸಂಜೆ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಮುಗಿಯುತ್ತಿದ್ದಂತೆ ಹೊರಬಿದ್ದ ಎಕ್ಸಿಟ್ ಪೋಲ್​​ನಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಭಾರಿ ಬಹುಮತ ಸಾಧಿಸಿ, ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಲಾಗಿತ್ತು. ಅದರಂತೆ ಎನ್​ಡಿಎ ಬಹುಮತ ಗಳಿಸಿದೆ. ಆದರೆ, ಇಲ್ಲಿ ತಲೆಕೆಳಗಾಗಿದ್ದು ಮಾತ್ರ ಎಕ್ಸಿಟ್​ ಫೋಲ್​ ಅಂಕಿ-ಅಂಶ.
ಸುಮಾರು 14 ಎಕ್ಸಿಟ್​ ಪೋಲ್​ಗಳಲ್ಲಿ ಎನ್​ಡಿಎ 365 ಸ್ಥಾನ ಗೆಲ್ಲಲಿದೆ ಎಂದು ಹೇಳಲಾಗಿತ್ತು. ಇದು 2019ರ ಲೋಕಸಭಾ ಚುನಾವಣೆಯ 352 ಸ್ಥಾನಗಳಿಂತಲೂ ಅಧಿಕ. ಅಲ್ಲದೆ, ಇಂಡಿ ಒಕ್ಕೂಟ ಕೇವಲ 146 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದು ಭವಿಷ್ಯ ನುಡಿಯಲಾಗಿತ್ತು. ಇನ್ನು ಎರಡು ಎಕ್ಸಿಟ್​ ಪೋಲ್​ಗಳಂತೂ ಎನ್​ಡಿಎಗೆ 400 ಸ್ಥಾನಗಳನ್ನು ನೀಡಿದ್ದವು. ಪ್ರಧಾನಿ ಮೋದಿ ಅವರ ಅಬ್​ ಕಿ ಬಾರ್​ 400 ಪಾರ್​ ಎಂಬ ಹೇಳಿಕೆ ನಿಜವಾಗಲಿದೆ ಎಂದ್ದಿದ್ದವು. ಬಿಜೆಪಿ ಏಕಾಂಗಿಯಾಗೇ 330 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎನ್ನಲಾಗಿತ್ತು.
ಆದರೆ, ಇಂದು ಪ್ರಕಟವಾಗುತ್ತಿರುವ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ನೋಡಿದರೆ ಇದೆಲ್ಲವೂ ಇದೀಗ ಉಲ್ಟಾ ಆಗಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಸಂಜೆ 4ರ ಹೊತ್ತಿಗೆ ಬಿಜೆಪಿ 296 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಇಂಡಿ ಒಕ್ಕೂಟ 229 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಪಕ್ಷೇತರ ಅಭ್ಯರ್ಥಿಗಳು 18 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್​ ಕೇವಲ 52 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆಗ ಯುಪಿಎ ಒಟ್ಟು 91 ಸ್ಥಾನಗಳಲ್ಲಿ ಮಾತ್ರ ಜಯಿಸಿತ್ತು. ಆದರೆ, ಇದೀಗ ಫಿನಿಕ್ಸ್​ನಂತೆ ಮೇಲೆದ್ದಿರುವ ಇಂಡಿ ಒಕ್ಕೂಟ 229 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಆಡಳಿತರೂಢ ಎನ್​ಡಿಎಗೆ ಟಕ್ಕರ್​ ಕೊಟ್ಟಿದೆ.
ಈ ಚುನಾವಣೆ ಫಲಿತಾಂಶದ ಗಮನಾರ್ಹ ಸಂಗತಿ ಏನೆಂದರೆ, ಉತ್ತರ ಪ್ರದೇಶ. ಇಲ್ಲಿ ಬಿಜೆಪಿ ಕೇವಲ 33 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸುತ್ತಿದೆ. 2019 ರಲ್ಲಿ 62 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಸುಮಾರು ಅರ್ಧಕ್ಕೆ ಕುಸಿದಿದೆ. ಇದು ಎಕ್ಸಿಟ್​ ಪೋಲ್​ಗಳ ಲೆಕ್ಕಾಚಾರ ಹೇಗಿದೆ ಎಂಬುದರ ಪ್ರತಿಬಿಂಬವಾಗಿದೆ. ಸಮೀಕ್ಷೆಯಲ್ಲಿ ಬಿಜೆಪಿಗೆ 68 ಸ್ಥಾನಗಳನ್ನು ನೀಡಲಾಗಿತ್ತು. ಇಂಡಿ ಒಕ್ಕೂಟಕ್ಕೆ ಕೇವಲ 12 ಸ್ಥಾನಗಳು ಲಭಿಸಲಿವೆ ಎಂದು ಸಮೀಕ್ಷೆ ಹೇಳಿದ್ದವು. ಆದರೆ, ಸಮಾಜವಾದಿ ಪಕ್ಷ 36 ಮತ್ತು ಕಾಂಗ್ರೆಸ್ 7 ರಲ್ಲಿ ಮುನ್ನಡೆ ಸಾಧಿಸುವ ಮೂಲಕ ಒಟ್ಟು 43 ಕ್ಷೇತ್ರಗಳೊಂದಿಗೆ ಇಂಡಿ ಒಕ್ಕೂಟ ಬಿಜೆಪಿಗೆ ಬಲವಾದ ಪೈಪೋಟಿ ನೀಡಿದೆ.
ಈ ಎಲ್ಲ ಅಂಕಿ-ಅಂಶಗಳನ್ನು ನೋಡಿದರೆ ಎಕ್ಸಿಟ್​ ಪೋಲ್​ ಲೆಕ್ಕಾಚಾರ ಅಕ್ಷರಶಃ ಸುಳ್ಳಾಗಿದೆ.
ಸಂಜೆ 4.30ರ ಟ್ರೆಂಡ್​ ಪ್ರಕಾರ ಒಟ್ಟು 545 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 295ರಲ್ಲಿ ಮತ್ತು ಕಾಂಗ್ರೆಸ್​ 229ರಲ್ಲಿ ಹಾಗೂ ಇತರೆ 19 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 17, ಕಾಂಗ್ರೆಸ್​ 9 ಮತ್ತು ಜೆಡಿಎಸ್​ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.(ಏಜೆನ್ಸೀಸ್​)
ಹೌದು ನಾನು ರಿಲೇಶನ್​ಶಿಪ್​ನಲ್ಲಿದ್ದೇನೆ! ಹುಡುಗ ಯಾರೆಂದು ಕೇಳಿದ್ದಕ್ಕೆ ಕೃತಿ ಶೆಟ್ಟಿ ಕೊಟ್ರು ಶಾಕಿಂಗ್​ ಉತ್ತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 12 =
Remember me
