ಚೆನ್ನೈ:ಕರೊನಾ ಕರಿನೆರಳಲ್ಲೇ ಶಾಲೆಗಳು ಪುನರಾರಂಭಗೊಳ್ಳುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ಸೋಂಕು ತಗುಲುವ ಭೀತಿ ಇದ್ದೇ ಇದೆ. ಹೀಗಿರುವಾಗ ತಮಿಳುನಾಡಿನಲ್ಲಿ ಪ್ರೌಢಶಾಲಾ ತರಗತಿಗಳು ಪುನರಾರಂಭವಾದಾಗಿನಿಂದ ಸುಮಾರು 400 ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ಕಂಡುಬಂದಿದೆ ಎಂಬ ಮಾಹಿತಿ ಹೊರಬಿದ್ದಿದೆ.
ರಾಜ್ಯದಲ್ಲಿ ಸೆಪ್ಟೆಂಬರ್ 1 ರಿಂದ 9 ಮತ್ತು 10ನೇ ತರಗತಿಗಳಿಗೆ ಭೌತಿಕ ತರಗತಿಗಳು ಆರಂಭವಾಗಿದ್ದು, ಈವರೆಗೆ 400 ವಿದ್ಯಾರ್ಥಿಗಳಿಗೆ ಕರೊನಾ ಸೋಂಕು ತಗುಲಿದೆ. ಆದಾಗ್ಯೂ ಸನ್ನಿವೇಶವು ಚಿಂತಾಜನಕವಾಗಿಲ್ಲ. ಏಕೆಂದರೆ ಬಹುತೇಕ ಪ್ರಕರಣಗಳು ಪ್ರತ್ಯೇಕವಾಗಿ ಕಂಡುಬಂದಿದ್ದು, ಕ್ಲಸ್ಟರ್​ ಮಾದರಿಯಲ್ಲಿ ಸೋಂಕು ಉಲ್ಬಣವಾಗಿಲ್ಲ ಎಂದು ತಮಿಳುನಾಡಿನ ಆರೋಗ್ಯ ಕಾರ್ಯದರ್ಶಿ ಜೆ.ರಾಧಾಕೃಷ್ಣನ್​ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಪಟಾಕಿ ಸ್ಫೋಟದ ಸ್ಥಳದಲ್ಲೇ ಅಕ್ರಮವಾಗಿ ಶೇಖರಿಸಿಟ್ಟಿದ್ದ ಗ್ಯಾಸ್ ಸಿಲಿಂಡರ್​ಗಳು ಪತ್ತೆ!
ತಮಿಳುನಾಡಿನಲ್ಲಿ ಕರೊನಾ ಸೋಂಕು ಹತೋಟಿಯಲ್ಲಿದ್ದು, ಆರೋಗ್ಯ ಇಲಾಖೆಯು ಪರಿಸ್ಥಿತಿಯ ಮೇಲೆ ಪೂರ್ಣ ನಿಗಾ ಇಟ್ಟಿದೆ ಎಂದು ಶಾಲೆ ಪುನರಾರಂಭದ ಸವಾಲುಗಳ ಬಗ್ಗೆ ಗುರುವಾರ ನಡೆದ ವೆಬಿನಾರ್​ನಲ್ಲಿ ರಾಧಾಕೃಷ್ಣನ್ ಹೇಳಿದ್ದಾರೆ ಎನ್ನಲಾಗಿದೆ. ಈ ನಡುವೆ, ಕೊಯಮತ್ತೂರು ಜಿಲ್ಲೆಯಲ್ಲಿ ಖಾಸಗಿ ಶಾಲೆಯೊಂದರಲ್ಲಿ 16 ವಿದ್ಯಾರ್ಥಿನಿಯರಿಗೆ ಕರೊನಾ ದೃಢಪಟ್ಟಿದ್ದು, ಶಾಲೆಯನ್ನು ಸೀಲ್​ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.(ಏಜೆನ್ಸೀಸ್)
ಕಾಂಗ್ರೆಸ್​ ಸೈಕಲ್-ಟಾಂಗಾ ಓಡಿಸೋಕೇ ಸೀಮಿತ! ಸೋಲು ಮರೆಮಾಚಲು ದೊಂಬರಾಟ ಮಾಡ್ತಿದ್ದಾರೆ: ಸಚಿವ ಅಶೋಕ್

ಶಾಲೆಗಳಲ್ಲಿ ಕಡ್ಡಾಯ ಕನ್ನಡ ಶಿಕ್ಷಣ: ಸರ್ಕಾರಕ್ಕೆ ಎಚ್​ಡಿಕೆ ತಾಕೀತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 11 =
Remember me
