ಬೆಂಗಳೂರು:ಹೆಚ್ಚಿನ ಬಡ್ಡಿ ಹಾಗೂ ಲಾಭದ ಆಮಿಷವೊಡ್ಡಿ ಗ್ರಾಹಕರಿಂದ ಹಣ ಕಟ್ಟಿಸಿಕೊಂಡು ವಂಚಿಸುವ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಮತ್ತೊಂದು ಮಹಾನ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ ದೇಶಾದ್ಯಂತ 21 ಸಾವಿರ ಹೂಡಿಕೆದಾರರು ಮತ್ತು ಷೇರುದಾರರಿಗೆ ಅಂದಾಜು 4 ಸಾವಿರ ಕೋಟಿ ರೂ. ಮೋಸ ವಂಚಿಸಿರುವ ಸಂಗತಿ ಬೆಳಕಿಗೆ ಬಂದಿದೆ.
ಕಂಪನಿ ಬೆಂಗಳೂರು ವಲಯದ ಉಪಾಧ್ಯಕ್ಷ ವಿಜೇಂದ್ರನನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹೈದರಾಬಾದ್​ನಲ್ಲಿ ಕೆಲ ದಿನಗಳ ಹಿಂದೆಯೇ ವಂಚನೆ ಬಗ್ಗೆ ದೂರು ದಾಖಲಾಗಿದ್ದು, ಆ.22ರಂದೇ ಕಂಪನಿಯ ಕೆಲ ಮುಖ್ಯಸ್ಥರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿರುವ ಕುರಿತು ಮಾಹಿತಿ ಸಿಕ್ಕಿದೆ.
ಷೇರು ಅಡವಿಟ್ಟ ಕಂಪನಿ:ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿರುವ ಮೆಸಸ್: ಕಾರ್ವಿ ಸ್ಟಾಕ್ ಬ್ರೋಕಿಂಗ್ ಸಂಸ್ಥೆ ಹೈದರಾಬಾದ್​ನಲ್ಲಿ ಕೇಂದ್ರ ಕಚೇರಿ ಹೊಂದಿದೆ. ಸಾವಿರಾರು ಗ್ರಾಹಕರು ಕಂಪನಿಯಲ್ಲಿ ಟ್ರೇಡಿಂಗ್ ಅಕೌಂಟ್ ತೆರೆದು ಕೋಟ್ಯಂತರ ರೂ. ಷೇರುಗಳಲ್ಲಿ ಹೂಡಿಕೆ ಮಾಡಿದ್ದರು. ಹೂಡಿಕೆದಾರರ ಗಮನಕ್ಕೆ ಬಾರದಂತೆ ಕಂಪನಿ ಮುಖ್ಯಸ್ಥರು ಬ್ಯಾಂಕುಗಳಲ್ಲಿ ಷೇರುಗಳನ್ನು ಅಡಮಾನವಿಟ್ಟು, ಅವುಗಳನ್ನು ಮಾರಾಟ ಮಾಡಿತ್ತು. ಬಂದ ಹಣವನ್ನು ಸೆಬಿ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಇತರ ಕಂಪನಿಗಳಲ್ಲಿ ಅಕ್ರಮವಾಗಿ ಹೂಡಿಕೆ ಮಾಡಿ ಗ್ರಾಹಕರಿಗೆ ಮೋಸ ಮಾಡಿದ್ದರು. ವಂಚನೆಗೊಳಗಾದ ಬಳ್ಳಾರಿ ಮೂಲದ ಉದ್ಯಮಿ ಸೆ.10ರಂದು ಈ ಬಗ್ಗೆ ಶೇಷಾದ್ರಿಪುರ ಪೊಲೀಸರಿಗೆ ದೂರು ನೀಡಿದ್ದರು.
ಕೇಸ್ ಸಿಸಿಬಿಗೆ ವರ್ಗ:ದೂರಿನ ಆಧಾರದ ಮೇಲೆ ಬೆಂಗಳೂರಿನ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 11 ಮಂದಿ ವಿರುದ್ಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ. ಬಂಧಿತ ವಿಜೇಂದ್ರ ನೀಡುವ ಹೇಳಿಕೆ ಆಧರಿಸಿ ಉಳಿದ ಆರೋಪಿಗಳನ್ನು ಬಂಧಿಸಲು ಪೊಲೀಸರು ನಿರ್ಧರಿಸಿದ್ದಾರೆ.
ರಾಜ್ಯದಲ್ಲೆಷ್ಟು?:ಕರ್ನಾಟಕದಲ್ಲಿ 4 ಸಾವಿರ ಗ್ರಾಹಕರಿದ್ದು, 100 ಕೋಟಿ ರೂ.ಗೂ ಅಧಿಕ ಹಣ ಹೂಡಿಕೆ ಮಾಡಿರುವ ಅಂದಾಜಿದೆ.
ದೂರು ನೀಡಿ:ಈ ಸಂಸ್ಥೆಯಿಂದ ಬೇರೆ ಯಾರಾದರೂ ವಂಚನೆಗೊಳಗಾಗಿದ್ದಲ್ಲಿ ತನಿಖಾಧಿಕಾರಿ ಅಥವಾ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಬ್ಯಾನ್ ಮಾಡಿದ್ದ ಸಿಬಿಐ:ಸಿಬಿಐ ಅಧಿಕಾರಿಗಳು 2019 ಮಾರ್ಚ್​ನಲ್ಲಿ ಕಾರ್ವಿ ಗ್ರೂಪ್​ಅನ್ನು ಬ್ಯಾನ್ ಮಾಡಿದ್ದರು. ಇದಾದ ಬಳಿಕ ಗ್ರಾಹಕರು ಹೂಡಿಕೆ ಮಾಡಿದ ಹಣ ಹಾಗೂ ಬ್ಯಾಂಕ್​ಗಳಲ್ಲಿ ಪಡೆದ ಸಾಲ ಹಿಂತಿರುಗಿಸಲು ಕಂಪನಿ ಸಮಯಾವಕಾಶ ಕೇಳಿತ್ತು. ಆದರೆ, ಸೂಕ್ತ ಸಮಯವಕಾಶದ ಒಳಗೆ ಬ್ಯಾಂಕ್​ಗೆ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್, ಹೈದ್ರಾಬಾದ್​ನಲ್ಲಿ ಕಂಪನಿ ವಿರುದ್ಧ ದೂರು ನೀಡಿತ್ತು. ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿ. ದೇಶಾದ್ಯಂತ 250ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಕಂಪನಿಯ ಮುಖ್ಯಸ್ಥ ಪಾರ್ಥಸಾರಥಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿ.ಕಂಪನಿಯು ಬೆಂಗಳೂರಿನಲ್ಲಿ 11 ಬ್ರಾ್ಯಂಚ್ ಹೊಂದಿತ್ತು. ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಕಂಪನಿ ಶಾಖೆಗಳನ್ನು ಹೊಂದಿತ್ತು. ಬ್ಯಾನ್ ಆದ ಬಳಿಕ ಬಸವನಗುಡಿಯಲ್ಲಿ 1 ಶಾಖೆ ಮಾತ್ರ ಇತ್ತು ಎನ್ನಲಾಗಿದೆ.
ಬ್ಯಾಂಕ್ ಸಾಲ ಹಿಂದಿರುಗಿಸಿಲ್ಲ:ಷೇರು ಮಾರುಕಟ್ಟೆ ಮುಖಾಂತರ ಜನರಿಂದ ಟ್ರೇಡಿಂಗ್ ಹೆಸರಲ್ಲಿ ಕಾರ್ವಿ ಸ್ಟಾಕ್ ಎಕ್ಸ್​ಚೆಂಜ್ ಕಂಪನಿ ಹಣ ಪಡೆಯುತ್ತಿತ್ತು. ಬೇರೊಬ್ಬರ ಹೆಸರಲ್ಲಿರುವ ಷೇರುಗಳನ್ನು ಬ್ಯಾಂಕ್​ನಲ್ಲಿ ಅಡಮಾನವಿರಿಸಿ ಸಾಲ ಪಡೆಯಲಾಗಿತ್ತು. ಪವರ್ ಆಫ್ ಅಟಾರ್ನಿ ಮೂಲಕ ಷೇರುಗಳು ಹಾಗೂ ಕಂಪನಿ ಸೆಕ್ಯೂರಿಟಿ ಬಾಂಡ್​ಗಳನ್ನು ಬ್ಯಾಂಕ್​ನಲ್ಲಿ ಅಡಮಾನ ಇಟ್ಟಿರುವುದು ಗೊತ್ತಾಗಿದೆ. ಬ್ಯಾಂಕ್​ನಿಂದ ಹಣ ಪಡೆದ ನಂತರ ಸಾಲ ತೀರಿಸಲಾಗದೇ ಕಂಪನಿ ಡಿಫಾರ್ಟರ್ ಆಗಿತ್ತು. ಹೈದರಾಬಾದ್​ನ ಐಸಿಐಸಿಐ ಬ್ಯಾಂಕ್​ಗೆ 563 ಕೋಟಿ ರೂ., ಇಂಡಸ್ ಲ್ಯಾಂಡ್ ಬ್ಯಾಂಕ್​ಗೆ 137 ಕೋಟಿ ರೂ. ಸೇರಿ ಒಟ್ಟು 2 ಸಾವಿರ ಕೋಟಿಗೂ ಅಧಿಕ ಪ್ರಮಾಣದಲ್ಲಿ ವಂಚಿಸಿರುವ ಆರೋಪ ಕಂಪನಿ ಮೇಲಿದೆ. ಹಲವು ರಾಷ್ಟೀಕೃತ ಬ್ಯಾಂಕ್​ಗಳಿಂದ ಕಂಪನಿ ಪಡೆದಿದ್ದ ಸಾಲ ಹಿಂದಿರುಗಿಸಿರಲಿಲ್ಲ ಎನ್ನಲಾಗಿದೆ. ಇವುಗಳನ್ನು ಗಮನದಲ್ಲಿಟ್ಟು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಹಾಗೂ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಈಗಾಗಲೇ ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿಯ ಸದಸ್ಯತ್ವವನ್ನೇ ರದ್ದು ಮಾಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + eight =
Remember me
