ಚಂಡೀಗಢ:ದೇಶದಲ್ಲಿ ನಿರುದ್ಯೋಗ ಸಮಸ್ಯೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆಯೇ ಹೊರೆತು ಕ್ಷಿಣಿಸುತ್ತಿಲ್ಲ. ಒಳ್ಳೆಯ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಬಯಕೆಯಿಂದ ದೊಡ್ಡ ದೊಡ್ಡ, ಹೆಸರಾಂತ ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತರ ಪದವಿ ಮುಗಿಸಿಕೊಳ್ಳುವ ಯುವಜನತೆ, ಮುಂದಿನ ದಿನಗಳಲ್ಲಿ ಈ ಪದವಿ ಪ್ರಮಾಣ ಪತ್ರವನ್ನು ಹಿಡಿದರೆ ಸುಲಭವಾಗಿ ಕೆಲಸ ಪಡೆಯಬಹುದು ಎಂದೇ ಇಂದಿಗೂ ಭಾವಿಸಿದ್ದಾರೆ. ಅಸಲಿಗೆ ಅದು ನಿಜವಾಗಿದ್ದೇ ಆದರೂ ಅರ್ಜಿ ಹಾಕಲು ಉದ್ಯೋಗಗಳು ಸಿಗಬೇಕಲ್ವಾ? ಖಾಲಿ ಹುದ್ದೆಯೇ ಇಲ್ಲ ಅಂದಮೇಲೆ ಉದ್ಯೋಗ, ಉತ್ತಮ ಜಾಬ್ ಪಡೆಯುವ ಮಾತು ಇನ್ನೂ ದೂರ. ಸದ್ಯ ಇದು ಪ್ರಸ್ತುತ ನಮ್ಮ ದೇಶದಲ್ಲಿ ಉದ್ಯೋಗಕಾಂಕ್ಷಿಗಳು ಎದುರಿಸುತ್ತಿರುವ ಅತೀ ದೊಡ್ಡ ಸಮಸ್ಯೆ ಹಾಗೂ ಕಠಿಣ ಸವಾಲು.
ಇದನ್ನೂ ಓದಿ:ಬಿಸಿಸಿಐ ಆಯ್ಕೆ ಸಮಿತಿಗೆ ಹೊಸ ಎಂಟ್ರಿ! ಅಂದು ಸಚಿನ್, ದ್ರಾವಿಡ್ ಜತೆ ತಂಡದಲ್ಲಿದ್ದ ಮಾಜಿ ಆಟಗಾರ ಇವರು
ವರ್ಷಗಳ ಸಮಯ, ಲಕ್ಷಾಂತರ ರೂ. ಹಣವನ್ನು ಕಾಲೇಜಿಗೆ ಕಟ್ಟಿ, ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವ ಕೋಟ್ಯಾಂತರ ವಿದ್ಯಾರ್ಥಿಗಳು, ತಮ್ಮಿಷ್ಟದ ಹಾಗೂ ತಮ್ಮ ಅರ್ಹತೆಗೆ ತಕ್ಕಂತಹ ಕೆಲಸ ಪಡೆಯುವ ನಿಟ್ಟಿನಲ್ಲಿ ಅಗತ್ಯಬಿದ್ದ ಕೋರ್ಸ್​ಗಳನ್ನು ಸಹ ಮಾಡಿ ಒಳ್ಳೆಯ ಸಂಬಳದ ನಿರೀಕ್ಷೆಯಲ್ಲಿ ಹೋದರೆ, ಅವರಿಗೆ ಎದುರಾಗುವುದು ನಿರಾಸೆ ಬಿಟ್ಟರೆ ಬೇರೇನೂ ಅಲ್ಲ. ಅದಕ್ಕೆ ನಿದರ್ಶನ ಇಷ್ಟು ವರ್ಷಗಳಲ್ಲಿ ನಡೆದಿರುವ ಹಲವಾರು ಘಟನೆಗಳು. ಈ ವಿಷಯಕ್ಕೆ ಮತ್ತೊಂದು ನೆನಪಿಟ್ಟುಕೊಳ್ಳುವಂತ ನಿದರ್ಶನವೊಂದು ಸಿಕ್ಕಿದೆ ಎಂದರೆ ನಂಬ್ತೀರಾ? ಖಂಡಿತ ನಂಬಲೇಬೇಕು. ಕಸ ಗುಡಿಸುವ ಕೆಲಸಕ್ಕೆ ಮಾಸಿಕ 15 ಸಾವಿರ ರೂ. ಸಂಬಳ ಕೊಡ್ತೀವಿ ಎಂದು ಸರ್ಕಾರ ಘೋಷಿಸಿದ್ದೇ ತಡ ಇಲಾಖೆಯ ವೆಬ್​ಸೈಟ್​ಗೆ ಅರ್ಜಿಗಳ ಸುರಿಮಳೆಯೇ ಹರಿದುಬಂದಿವೆ. ಅದರಲ್ಲಿ ಪದವಿಧರರು ಮತ್ತು ಸ್ನಾತಕೋತ ಪದವಿಧರರ ಸಂಖ್ಯೆಯೇ ಹೆಚ್ಚು ಎಂಬುದು ಇಲ್ಲಿ ಗಮನಾರ್ಹ.
ಸರ್ಕಾರಿ ನೌಕರಿ ಪಡೆಯಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಕನಿಷ್ಠ ಪಕ್ಷ ನಾವು ಅಂದುಕೊಂಡಂತಹ ಹುದ್ದೆ ಸಿಗದೆ ಹೋದರೂ ಸಣ್ಣ ಕೆಲಸ ಅದು ಸರ್ಕಾರಿ ಕೆಲಸ ಆದರೂ ಪರವಾಗಿಲ್ಲ ಸಿಕ್ಕರೆ ಸಾಕಪ್ಪ ಎನ್ನುತ್ತಾರೆ ಹಲವರು. ಹರಿಯಾಣ ಕೌಶಲ್ ರೋಜ್ಗರ್ ನಿಗಮ್ ಲಿಮಿಟೆಡ್​ನಡಿ (HKRN) ಇಲ್ಲಿನ ಸರ್ಕಾರ ಕಸ ಗುಡಿಸುವ ಕೆಲಸ ಖಾಲಿಯಿದೆ. ತಿಂಗಳಿಗೆ 15 ಸಾವಿರ ರೂ. ಸಂಬಳ ಕೊಡ್ತೀವಿ. ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದು ಎಂದು ಸುತ್ತೋಲೆ ಹೊರಡಿಸಿದ್ದೇ ತಡ 40,000 ಪದವೀಧರರು ಮತ್ತು 6,112 ಸ್ನಾತಕೋತ್ತರ ಪದವೀಧರರು ಕಸ ಗುಡಿಸುವ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಉದ್ಯೋಗಕ್ಕೆ ಅಭ್ಯರ್ಥಿಗಳು ಅಗತ್ಯವಿದ್ದ ಕಾರಣ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಹುದ್ದೆಗೆ ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿರುವುದು ನಿಜಕ್ಕೂ ಬೆಚ್ಚಿಬೀಳಿಸುವ ಸಂಗತಿ ಎಂದೇ ಹೇಳಬಹುದು.
ಇದನ್ನೂ ಓದಿ:ಸ್ಯಾಂಡಲ್​ವುಡ್​ನಲ್ಲೂ ಲೈಂಗಿಕ ದೌರ್ಜನ್ಯ ಸಮಿತಿ ರಚನೆಯಾಗಬೇಕು; ಸರ್ಕಾರಕ್ಕೆ ಕರೆ ನೀಡಿದ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ
ಕೇವಲ ಆಗಸ್ಟ್ 6ರಿಂದ ಸೆಪ್ಟೆಂಬರ್ 2ರೊಳಗೆ ವಿವಿಧ ವಿಭಾಗಗಳಿಗೆ ವೆಬ್ ಪೋರ್ಟಲ್ ಮೂಲಕ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿರುವ ಒಂದು ಲಕ್ಷ ಅಭ್ಯರ್ಥಿಗಳ ಪೈಕಿ 40,000ಕ್ಕೂ ಅಧಿಕ ಮಂದಿ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರೇ ಇದ್ದಾರೆ. ಸರ್ಕಾರಿ ಇಲಾಖೆ, ಮಂಡಳಿಗಳು, ನಿಗಮಗಳು ಮತ್ತು ನಾಗರಿಕ ಸಂಸ್ಥೆಗಳಲ್ಲಿನ ಕಚೇರಿಗಳನ್ನು ಸ್ವಚ್ಛಗೊಳಿಸಲು ಮತ್ತು ಸ್ವಚ್ಛಗೊಳಿಸಲು ಅಗತ್ಯವಿರುವ ಉದ್ಯೋಗಗಳಿಗೆ ಅರ್ಜಿ ಕರೆಯಲಾಗಿತ್ತು. ಈ ಉದ್ಯೋಗಕ್ಕೆ ಮಾಸಿಕ 15 ಸಾವಿರ ರೂ. ಸಂಬಳ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿತ್ತು. ಖಾಸಗಿ ಸಂಸ್ಥೆಗೆ ಹೋದರೆ ಪ್ರಾರಂಭದಲ್ಲಿ 10,000ಕ್ಕಿಂತ ಹೆಚ್ಚಿನ ಸಂಬಳ ದೊರೆಯುವುದಿಲ್ಲ. ಆದ್ರೆ, ಸರ್ಕಾರದಲ್ಲಿ ಸಿಗುವ ಕಸ ಗುಡಿಸುವ ಕೆಲಸಕ್ಕೆ ಕನಿಷ್ಠ 15 ಸಾವಿರ ರೂ. ಸಂಬಳವಾದರೂ ಸಿಗುತ್ತದೆ. ಇದು ಎಷ್ಟೋ ಪರವಾಗಿಲ್ಲ ಎಂಬ ಕಾರಣಕ್ಕಾಗಿ ಇಲ್ಲಿ ಅರ್ಜಿ ಹಾಕಿದ್ದೇನೆ ಎಂದು ಡಿಪ್ಲೋಮದಲ್ಲಿ ಸ್ನಾತಕೋತರ ಪದವಿ ಪಡೆದಿರುವ ಮನೀಶ್ ಎಂಬುವವರು ತಮ್ಮ​ ಅಳಲು ತೋಡಿಕೊಂಡಿದ್ದಾರೆ.(ಏಜೆನ್ಸೀಸ್).
ನನ್ನನ್ನು ದುಬೈಗೆ ಕರೆಸಿ… ನಟ ನಿವಿನ್ ಪೌಲಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ! ದೂರು ದಾಖಲಿಸಿದ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
