ನವದೆಹಲಿ/ಬೆಂಗಳೂರು:2024ರ ಲೋಕಸಭೆ ಚುನಾವಣೆಗೆ ಮೂರನೇ ಹಂತದ ಮತದಾನ ಆರಂಭವಾಗಿದೆ. 11 ರಾಜ್ಯಗಳು ಮತ್ತು ಕೇಂದ್ರಾಡಳಿತ  ಪ್ರದೇಶಗಳಲ್ಲಿ ಹರಡಿರುವ 93 ಕ್ಷೇತ್ರಗಳಲ್ಲಿ ಈ ಚುನಾವಣೆ ನಡೆಯುತ್ತಿದೆ. ಈ ನಿರ್ಣಾಯಕ ಹಂತದಲ್ಲಿ 120 ಮಹಿಳೆಯರು ಸೇರಿದಂತೆ 1,300 ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ ಮಧ್ಯಾಹ್ನದವರೆಗೆ 41.59% ಮತದಾನವಾಗಿದೆ.
ಕರ್ನಾಟಕದಲ್ಲಿ ಸಂಜಜೆ 5 ಗಂಟೆವರೆಗೆ, ಒಟ್ಟಾರೆ ಮತದಾನದ ಪ್ರಮಾಣ 66.05% ರಷ್ಟಿದೆ. ಚಿಕ್ಕೋಡಿಯಲ್ಲಿ ಗರಿಷ್ಠ 72.75% ರಷ್ಟು ಮತದಾನವಾಗಿದೆ ಮತ್ತು ಗುಲ್ಬರ್ಗದಲ್ಲಿ 57.20% ರಷ್ಟು ಕಡಿಮೆ ಮತದಾನವಾಗಿದೆ. ದೇಶದಲ್ಲಿ ಸಂಜೆ 5ರವರೆಗೆ ಶೇಕಡಾ 60.2 ಮತದಾನವಾಗಿದೆ.
ಕರ್ನಾಟಕದಲ್ಲಿ 14, ಗುಜರಾತ್‌ನಲ್ಲಿ 26, ಮಹಾರಾಷ್ಟ್ರದಲ್ಲಿ 11, ಉತ್ತರ ಪ್ರದೇಶದಲ್ಲಿ 10, ಮಧ್ಯಪ್ರದೇಶದಲ್ಲಿ 8, ಛತ್ತೀಸ್‌ಗಢದಲ್ಲಿ 7, ಬಿಹಾರದಲ್ಲಿ 5, ಅಸ್ಸಾಂನಲ್ಲಿ 4, ಪಶ್ಚಿಮ ಬಂಗಾಳದಲ್ಲಿ 4, ಗೋವಾದಲ್ಲಿ 2 ಸ್ಥಾನಗಳಲ್ಲಿ ಮತ್ತು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯುನಲ್ಲಿ 2 ಸ್ಥಾನಗಳಿಗೆ ಮೂರನೇ ಹಂತದ ಮತದಾನ ನಡೆಯುತ್ತಿದೆ.
ಲೋಕಸಭೆ ಚುನಾವಣೆಯು ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ನಡೆಯುತ್ತಿದ್ದು, ಜೂನ್ 4 ರಂದು ಮತ ಎಣಿಕೆಯನ್ನು ನಿಗದಿಪಡಿಸಲಾಗಿದೆ.
ಬಿಜೆಪಿ ಸೇರುವ ಕುರಿತು ನಿನ್ನೆವರೆಗೂ ಗೊತ್ತಿರಲಿಲ್ಲ: ಕೇಸರಿ ಪಡೆ ಸೇರ್ಪಡೆ ಬಗ್ಗೆ ನಟ ಶೇಖರ್ ಸುಮನ್ ಹೇಳಿದ್ದೇನು?

25% ಕುಸಿದ ಟಾಟಾ ಕಂಪನಿ ಷೇರು ಬೆಲೆ: ಈ ಸ್ಟಾಕ್​ ಖರೀದಿಸಬೇಕೆ? ಇನ್ನಷ್ಟು ಕುಸಿತಕ್ಕೆ ಕಾಯಬೇಕೆ?

ಈ ಬ್ಯಾಂಕುಗಳ ಎನ್​ಪಿಎ ಕಡಿತ: ಷೇರು ಬೆಲೆ ದುಪ್ಪಟ್ಟಾಗಲಿದೆ ಎನ್ನುತ್ತಾರೆ ತಜ್ಞರು

ಪಿಎಸ್​ಯು ಬ್ಯಾಂಕ್​ಗಳ ಷೇರು ಬೆಲೆಯಲ್ಲಿ ಅಪಾರ ಕುಸಿತ: ಮೂಲಸೌಕರ್ಯ ಕಂಪನಿಗಳಿಗೆ ಸಾಲ ನಿಯಮದಲ್ಲಿ ಬದಲಾವಣೆ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 8 =
Remember me
