ಬೆಂಗಳೂರು:ರಾಜ್ಯದಲ್ಲಿ ಹೊಸದಾಗಿ ಕರೊನಾ ಸೋಂಕಿಗೆ ಒಳಗಾದವರ ಸಂಖ್ಯೆ ಇಂದು ಕೂಡ ನಾಲ್ಕು ಸಾವಿರ ದಾಟಿದೆ. ಶನಿವಾರ ಸಂಜೆಯಿಂದ ಭಾನುವಾರ ಸಂಜೆಯವರೆಗೆ ಒಟ್ಟು 4,120 ಜನರಲ್ಲಿ ಸೋಂಕು ಕಂಡು ಬಂದಿದೆ.
ರಾಜ್ಯದಲ್ಲಿ ಒಟ್ಟಾರೆ ಕೋವಿಡ್​ ರೋಗಿಗಳ ಪ್ರಮಾಣ 63,772ಕ್ಕೆ ಏರಿದೆ. ಈ ಪೈಕಿ ಪ್ರಸ್ತುತ ಸಕ್ರಿಯ ರೋಗಿಗಳ ಸಂಖ್ಯೆ 39,370 ಆಗಿದೆ. ಇಂದು ಮೃತಪಟ್ಟವರ ಸಂಕ್ಯೆ 91 ಆಗಿದೆ. ಒಟ್ಟು ಸಾವಿನ ಸಂಖ್ಯೆ 1,331ಕ್ಕೆ ತಲುಪಿದೆ. ಮರಣದ ಪ್ರಮಾಣ ಶೇ.2.8ಕ್ಕೆ ಏರಿಕೆಯಾಗಿದೆ.
ಕಳೆದ 24 ತಾಸುಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದವರ ಸಂಖ್ಯೆ 1,290. ಈವರೆಗೆ ರಾಜ್ಯದಲ್ಲಿ ಒಟ್ಟು ಚೇತರಿಕೆ ಕಂಡವರು 23,065 ಮಂದಿ. ಇದರ ಶೇಕಡಾವಾರು ಪ್ರಮಾಣ 36.1 ಆಗಿದೆ.
ಇದನ್ನೂ ಓದಿ;ಕರೊನಾ ಹೆಸರಲ್ಲಿ ನಕಲಿ ಮಾತ್ರೆ ನೀಡಿದ ಪ್ರತಿಷ್ಠಿತ ಕಂಪನಿ; ಡಿಜಿಸಿಐನಿಂದ ನೋಟಿಸ್​ ಜಾರಿ
ಇನ್ನು, ಬೆಂಗಳೂರಿನಲ್ಲಿ ಹೊಸ ಪ್ರಕರಣಗಳ ಸಂಖ್ಯೆ 2,156. ಅಲ್ಲಿಗೆ ಸತತ ನಾಲ್ಕನೇ ದಿನವೂ ಕೋವಿಡ್​ ಪ್ರಮಾಣ ಎರಡು ಸಾವಿರದ ಗಡಿ ದಾಟಿಸಂತಾಗಿದೆ.ಒಟ್ಟು ಸೋಂಕಿತರ ಸಂಖ್ಯೆ 31,777 ಆಗಿದೆ. ಮತ್ತೆ 36 ಜನರು ಮೃತಪಡುವ ಮೂಲಕ ಒಟ್ಟಾರೆ ಸಾವಿಗೀಡಾದವರು 697 ಜನರು.
ಜಿಲ್ಲಾವಾರು ಕೋವಿಡ್ ಅಂಕಿ- ಸಂಖ್ಯೆಗಳ ವಿವರ

ವರ್ಷಾಂತ್ಯವರೆಗೆ ಶಾಲಾ- ಕಾಲೇಜು ಆರಂಭ ಅನುಮಾನ…? ಆನ್​​ಲೈನ್​ ಕ್ಲಾಸ್​ಗಳೇ ಅನಿವಾರ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
