ನವದೆಹಲಿ: ಭಾರತದಲ್ಲಿ ಕರೊನಾ ವೈರಸ್ ಸೋಂಕಿನ ಹೊಸ ಪ್ರಕರಣಗಳು ಉತ್ತುಂಗ ತಲುಪಿದೆ ಎಂದು ಒಂದು ಹೊಸ ಟ್ರಾ್ಯಕರ್ ಹೇಳಿದೆ. ಕೇಂಬ್ರಿಜ್ ಜಡ್ಜ್ ಬಿಜಿನೆಸ್ ಸ್ಕೂಲ್ ಮತ್ತು ದಿ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಇಕನಾಮಿಕ್ ಅಂಡ್ ಸೋಷಲ್ ರೀಸರ್ಚ್ ಈ ಟ್ರಾ್ಯಕರ್​ಅನ್ನು ಅಭಿವೃದ್ಧಿ ಪಡಿಸಿದೆ.
ಸೋಂಕಿನಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಗಣನೀಯ ವ್ಯತ್ಯಾಸವಿದೆ. ಮುಂದಿನ ಎರಡು ವಾರ ಅಸ್ಸಾಂ, ಹಿಮಾಚಲ ಪ್ರದೇಶ, ತಮಿಳುನಾಡು ಮತ್ತು ತ್ರಿಪುರಾ ಮುಂತಾದ ಪ್ರದೇಶಗಳಲ್ಲಿ ಹೊಸ ಕೇಸ್​ಗಳ ಏರಿಕೆ ಮುಂದುವರಿಯಲಿದೆ ಎಂದು ಸಂಶೋಧಕರು ವರದಿಯಲ್ಲಿ ಹೇಳಿದ್ದಾರೆ. ಈಗಾಗಲೇ ವರದಿಯಾಗಿರುವ ಸಂಖ್ಯೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸಲಹೆಗಾರರ ಸಹಿತ ಅನೇಕ ತಜ್ಞರು ಮಾಡಿರುವ ಅಂದಾಜಿಗೆ ಅನುಗುಣವಾಗಿ ಈ ಮುನ್ನೋಟ ನೀಡಲಾಗಿದೆ.
ದೇಶದಲ್ಲಿ ಮೇ 7ರಂದು ಅತಿ ಹೆಚ್ಚು 4,14,188 ಕರೊನಾ ಪ್ರಕರಣಗಳು ದಾಖಲಾಗಿದ್ದವು. ಇದು ಕಳೆದ ವರ್ಷ ಅಮೆರಿಕದಲ್ಲಿ ವರದಿಯಾದ ಹಿಂದಿನ ಜಾಗತಿಕ ಉತ್ತುಂಗಕ್ಕಿಂತ ಶೇ. 32ರಷ್ಟು ಅಧಿಕವಾಗಿತ್ತು. ದೈನಿಕ ಸಾವಿನ ಪ್ರಕರಣ 4 ಸಾವಿರಕ್ಕಿಂತ ಅಧಿಕ ಮಟ್ಟದಲ್ಲಿ ಮುಂದುವರಿಯ ಬಹುದೆಂದೂ ವರದಿ ಅಂದಾಜಿಸಿದೆ.
ಸಾವಿನ ಸಂಖ್ಯೆ ಸುತ್ತ ಅನುಮಾನದ ಹುತ್ತ
ಕರೊನಾ ವ್ಯಾಧಿ ಯಿಂದ ಭಾರತದಲ್ಲಿ ಸತ್ತವರ ಸಂಖ್ಯೆ ಅಧಿಕೃತವಾಗಿ ಪ್ರಕಟಿಸಿದ್ದಕ್ಕಿಂತ ಇನ್ನೂ ಹಲವು ಪಟ್ಟು ಹೆಚ್ಚಿರ ಬಹುದೆಂಬ ಶಂಕೆ ಉಂಟಾಗಿದೆ. ಕೋವಿಡ್-19ರಿಂದ ಮೃತಪಟ್ಟವರ ಸಂಖ್ಯೆಯನ್ನು ಮಾತ್ರವೇ ದಾಖಲಿಸಬಹುದು. ಆದರೆ ಅನ್ಯವ್ಯಾಧಿಗಳಿಂದ ಸತ್ತವರ ಸಂಖ್ಯೆಯನ್ನು ದಾಖಲಿಸುವಂತಿಲ್ಲ. ಭಾರತದಲ್ಲಿ ಕರೊನಾ ಪೀಡಿತರ ಸಾವಿನ ಸಂಖ್ಯೆ ಬುಧವಾರ 2.54 ಲಕ್ಷ ಮೀರಿದೆ. ಆದರೆ ಕರೊನಾ ವಿರೋಧಿ ಹೋರಾಟದ ಮುಂಚೂಣಿಯಲ್ಲಿ ಇರುವವರ ಪ್ರಕಾರ, ವಾಸ್ತವ ಸಂಗತಿ ಅಧಿಕೃತ ಅಂಕಿಸಂಖ್ಯೆಗಿಂತ ತುಂಬಾ ಹೆಚ್ಚಿದೆ. ವಿಶಾಲ ದೇಶದಲ್ಲಿ ವಿನಾಶಕಾರಿ ಕಾಯಿಲೆಯಿಂದ ಅಪಾರ ಸಂಖ್ಯೆಯ ಜನರು ಸಾಯುತ್ತಿದ್ದು ಅವುಗಳ ಸೂಕ್ತ ದಾಖಲೆ ನಿರ್ವಹಣೆ ಆಗುತ್ತಿಲ್ಲ ಎಂಬ ಅಭಿಪ್ರಾಯ ದಟ್ಟವಾಗಿದೆ. ‘ಅಧಿಕೃತ ಅಂಕಿಸಂಖ್ಯೆಗಿಂತ ಕನಿಷ್ಟವೆಂದರೂ ಮೂರರಿಂದ ನಾಲ್ಕು ಪಟ್ಟು ಹೆಚ್ಚಿನ ಸಾವು ಸಂಭವಿಸಿದೆಯೆಂದರೂ ಅದೂ ಕಡಿಮೆಯೇ’ ಎನ್ನುತ್ತಾರೆ ಸ್ವತಂತ್ರ ಆರೋಗ್ಯ ನೀತಿಗಾರ ಹಾಗೂ ಬಯೋಎಥಿಕ್ಸ್ ಸಂಶೋಧಕ ಅನಂತ್ ಭಾನ್.
ವಿಶ್ವ ಆರೋಗ್ಯ ಸಂಸ್ಥೆ ವಿಫಲ
ವಿಶ್ವ ಆರೋಗ್ಯ ಸಂಸ್ಥೆ ಮುಂಚೆಯೇ ಸರಿಯಾದ ಎಚ್ಚರಿಕೆ ನೀಡಿದ್ದರೆ ಕೋವಿಡ್-19 ವ್ಯಾಧಿ ಮಹಾ ದುರಂತದ ಮಟ್ಟಕ್ಕೆ ಹೋಗುತ್ತಿರಲಿಲ್ಲ ಎಂದು ಜಾಗತಿಕ ತನಿಖಾ ತಂಡವೊಂದು ಅಭಿಪ್ರಾಯ ಪಟ್ಟಿದೆ. ತಜ್ಞರು ನೀಡಿದ್ದ ಎಚ್ಚರಿಕೆಗಳಿಗೆ ಕಿವಿಗೊಟ್ಟಿದ್ದರೆ ಇಂಥ ಸನ್ನಿವೇಶ ಉದ್ಭವಿಸುತ್ತಿರಲಿಲ್ಲ ಎಂದು ಹೇಳಿರುವ ತಂಡ, ಡಬ್ಲ್ಯುಎಚ್​ಒಅನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಸಾಂಕ್ರಾಮಿಕತೆಗೆ ಡಬ್ಲ್ಯುಎಚ್​ಒ ತೋರಿದ್ದ ಪ್ರತಿಕ್ರಿಯೆ ತುಂಬಾ ವಿಳಂಬವಾಗಿತ್ತು ಎಂದು ಆರೋಪಿಸಿದ್ದರು.
ಸಾರ್ವಕಾಲಿಕ ಗರಿಷ್ಠ ಮರಣ
ಕರೊನಾ ದಾಂಗುಡಿಯಿಟ್ಟಾಗಿನಿಂದ ದೇಶದಲ್ಲಿ ದಾಖಲಾದ ಇದುವರೆಗಿನ ನಿತ್ಯದ ಸಾವಿನ ಪ್ರಮಾಣವನ್ನು ಮೀರಿಸಿದ ಮರಣ ಬುಧವಾರ ಬೆಳಗಿನ ವರೆಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ವರದಿಯಾಗಿದೆ. 4,205 ಜನರು ಕೋವಿಡ್​ಗೆ ಬಲಿಯಾಗಿದ್ದು ಮೃತರ ಒಟ್ಟು ಸಂಖ್ಯೆ 2,54,197ಕ್ಕೆ ತಲುಪಿದೆ. ಒಟ್ಟು ಮೃತರ ಸಂಖ್ಯೆ 2,54,388ಕ್ಕೆ ತಲುಪಿದೆ. ದೈನಿಕ ಸೋಂಕಿನ ಪ್ರಕರಣ 3,48,421ವರದಿ ಆಗಿದೆ. ಒಟ್ಟು ಸಂಖ್ಯೆ 2,33,40,938ಕ್ಕೆ ಏರಿದೆ.
ವಿಳಂಬದಿಂದ ತೊಂದರೆಯಾಗದು
ಕೊವ್ಯಾಕ್ಸಿನ್ ಲಸಿಕೆಯ ಎರಡನೇ ಡೋಸ್​ಅನ್ನು ಮೊದಲ ಡೋಸ್ ಪಡೆದ 4ರಿಂದ 6 ವಾರದೊಳಗೆ ಪಡೆಯದೆ ವಿಳಂಬವಾದರೂ ಅದರಿಂದ ತೊಂದರೆಯೇನೂ ಆಗದು ಎಂದು ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಗಳ ಎರಡನೇ ಡೋಸ್ ಹಾಕಿಸಿಕೊಳ್ಳುವಲ್ಲಿ ವಿಳಂಬವಾದರೆ ಮೊದಲನೇ ಡೋಸ್​ನ ಪರಿಣಾಮವೇನೂ ತಗ್ಗುವುದಿಲ್ಲ. ಲಸಿಕೆ ಅಡ್ಡ-ಪರಿಣಾಮ ಕುರಿತ (ಎಇಎಫ್​ಐ) ರಾಷ್ಟ್ರೀಯ ಸಮಿತಿಯ ಸದಸ್ಯ ಎನ್.ಕೆ. ಆರೋರಾ ಈ ಬಗ್ಗೆ ವಿವರಣೆ ನೀಡಿದ್ದಾರೆ. ಭವಿಷ್ಯದಲ್ಲಿ ಕೋವಿಡ್-19 ವಿರುದ್ಧ ರಕ್ಷಣೆ ಪಡೆಯಲಿಕ್ಕಾಗಿ ಜನರು ಲಸಿಕೆಯ ಮೂರನೇ ಡೋಸ್ ಕೂಡ ತೆಗೆದುಕೊಳ್ಳಬೇಕಾಗಬಹುದು. ಸದ್ಯಕ್ಕೆ ಈ ಬಗ್ಗೆ ನಿರ್ದಿಷ್ಟವಾಗಿ ಹೇಳಲಾಗದು ಎಂದು ಏಮ್್ಸ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಸೋಂಕಿನ ದರ ಶೇ. 10 ಇದ್ದರೆ ಲಾಕ್​ಡೌನ್
ಕರೊನಾ ಮಹಾಮಾರಿಯನ್ನು ಹೆಡೆಮುರಿ ಕಟ್ಟಲು ದೇಶದ ಬಹುತೇಕ ಜಿಲೆಗಳಲ್ಲಿ ಲಾಕ್​ಡೌನ್ ವಿಧಿಸಬೇಕೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮುಖ್ಯಸ್ಥ ಬಲರಾಂ ಭಾರ್ಗವ ಸಲಹೆ ಮಾಡಿದ್ದಾರೆ. ಸೋಂಕಿನ ದರ ಶೇಕಡ 10ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಇನ್ನೂ ಆರರಿಂದ ಎಂಟು ವಾರ ಲಾಕ್​ಡೌನ್ ಜಾರಿಯಲ್ಲಿರಬೇಕೆಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − eleven =
Remember me
