ಉತ್ತರಪ್ರದೇಶ:ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಭಗವಂತ ರಾಮನ ಐತಿಹಾಸಿಕ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕಾಗಿ ಇಡೀ ರಾಷ್ಟ್ರವೇ ಎದುರುನೋಡುತ್ತಿದ್ದು, ಈ ನಡುವೆ ಹಲವು ರಾಜ್ಯದಿಂದ ಭಕ್ತಾಧಿಗಳು ದೇವಾಲಯಕ್ಕೆ ವಿಶೇಷ ಕೊಡುಗೆಗಳನ್ನು ಕಳಿಸಿಕೊಡುವ ಮೂಲಕ ತಮ್ಮ ಭಕ್ತಿಯನ್ನು ಅರ್ಪಿಸುತ್ತಿದ್ದಾರೆ. ಇದೀಗ ವಾರಣಾಸಿ ಮತ್ತು ಗುಜರಾತ್‌ನ ಮಿಠಾಯಿಗಾರರ ತಂಡವೊಂದು ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಸಿಹಿ ವಿತರಿಸಲು ಈಗಾಗಲೇ ಮಾಡಿಕೊಂಡಿರುವ ಸಕಲ ತಯಾರಿಗಳ ಬಗ್ಗೆ ಮಾಹಿತಿ ನೀಡಿದೆ.
ಇದನ್ನೂ ಓದಿ:ಈ ಕಾರಣಕ್ಕಾಗಿ ಯೂಟ್ಯೂಬ್‌ಗೆ ನೋಟಿಸ್ ನೀಡಿದ ಎನ್​​ಸಿಪಿಸಿಆರ್​​​; ಎಫ್‌ಐಆರ್ ಕೂಡ ದಾಖಲು
ಮಿಠಾಯಿಗಾರರಿಗೆ ಶುದ್ಧ ದೇಸಿ ತುಪ್ಪದೊಂದಿಗೆ ಲಡ್ಡುಗಳನ್ನು ತಯಾರಿಸುವ ಕಾರ್ಯವನ್ನು ವಹಿಸಲಾಗಿದ್ದು, ಇದನ್ನು ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಗವಂತ ಶ್ರೀರಾಮನಿಗೆ ನೈವೇದ್ಯಕ್ಕೆ ಇಡಲಾಗುವುದು ಬಳಿಕ ಪ್ರಸಾದವಾಗಿ ಹಂಚಲಾಗುವುದು ಎಂದು ತಿಳಿಸಲಾಗಿದೆ.
ಸಿಹಿ ತಿಂಡಿ ಮಾಡುವ ಪ್ರಕ್ರಿಯೆಯು ಜನವರಿ 6ರಿಂದಲೇ ಪ್ರಾರಂಭವಾಗಿದ್ದು, ಜನವರಿ 22ರವರೆಗೆ ಮುಂದುವರಿಯುತ್ತದೆ. ಈ ಬೃಹತ್ ಸಮಾರಂಭಕ್ಕೆ ದೇಶದ ಮೂಲೆ ಮೂಲೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಹಾಗಾಗಿ, ಅಧಿಕ ಸಂಖ್ಯೆಯ ಲಡ್ಡುಗಳ ಅಗತ್ಯವಿದೆ. ಒಂದು ದಿನದಲ್ಲಿ ಮಿಠಾಯಿಗಾರರು ಸುಮಾರು 1,200 ಕೆ.ಜಿ ಲಡ್ಡುಗಳನ್ನು ತಯಾರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:‘ರಾಮ್ ಹಲುವಾ’ ಶ್ರೀರಾಮಮಂದಿರ ಪ್ರಸಾದ ಅಡುಗೆ ಮಾಡುವ ಬಾಣಸಿಗನ ಹೆಸರಲ್ಲಿವೆ 12 ವಿಶ್ವ ದಾಖಲೆ
“ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕಾಗಿ 45 ಟನ್ ಲಡ್ಡುಗಳನ್ನು ತಯಾರಿಸಬೇಕಿದೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದ್ದೇವೆ. ಅದರಂತೆಯೇ ಕೆಲಸ ಪ್ರಾರಂಭವಾಗಿದ್ದು, ದಿನಕ್ಕೆ 1ರಿಂದ 1.5 ಟನ್ ಲಡ್ಡು ತಯಾರಾಗುತ್ತಿದೆ” ಎಂದು ಮಿಠಾಯಿ ತಯಾರಕರೊಬ್ಬರು ತಿಳಿಸಿದ್ದಾರೆ,(ಏಜೆನ್ಸೀಸ್).
‘ಅನ್ನಪೂರ್ಣಿ’ಯಲ್ಲಿ ಲವ್ ಜಿಹಾದ್! ಕಡೆಗೂ ವಿವಾದಕ್ಕೆ ಪ್ರತಿಕ್ರಿಯಿಸಿದ ಚಿತ್ರತಂಡ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − five =
Remember me
