ಅಯೋಧ್ಯೆ:ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ದೇಗಲದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮಹಾಮಸ್ತಕಾಭಿಷೇಕಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ ದೇಶದ ವಿವಿಧ ಭಾಗಗಳಿಂದ ಭಕ್ತರು ಈಗಾಗಲೇ ತಮ್ಮಿಂದ ಆದ ಸಹಾಯ ಮಾಡುತ್ತಿದ್ದು, ಅನೇಕ ರೀತಿಯ ಕೊಡುಗೆಗಳನ್ನು ಅರ್ಪಿಸುತ್ತ ಬರುತ್ತಿದ್ದಾರೆ. ಈ ಪೈಕಿ ಅಹಮದಾಬಾದ್‌ನ ಒಂದು ಸಂಸ್ಥೆ, ದೇವಾಲಯಕ್ಕೆಂದು ತಯಾರಿಸಿರುವ ವಿಶೇಷ ನಗಾರಿಯೊಂದನ್ನು ಕೊಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಇದನ್ನೂ ಓದಿ:ಎನ್​ಎಚ್​ಎಂ ಸಿಬ್ಬಂದಿ ವೇತನ ಏರಿಕೆ; ಗುತ್ತಿಗೆ ನೌಕರರ ಸಂಬಳ ಶೇ.15 ಹೆಚ್ಚಿಸಿ ಸರ್ಕಾರದ ಆದೇಶ
ಅಖಿಲ ಭಾರತ ದಗ್ಬರ್ ಸಮಾಜವು ಸಿದ್ಧಪಡಿಸಿದ ಈ ವಿಶೇಷ ನಗಾರಿ ಬರೋಬ್ಬರಿ 450 ಕೆಜಿಗಳಷ್ಟು ತೂಕವನ್ನು ಹೊಂದಿದೆ ಮತ್ತು 2024ರ ಜನವರಿ 22 ರಂದು ಮಹಾಮಸ್ತಕಾಭಿಷೇಕ ಸಮಾರಂಭಕ್ಕೂ ಮೊದಲು ಅಯೋಧ್ಯೆಗೆ ಕೊಂಡೊಯ್ಯಲಾಗುವುದು ಎಂದು ತಿಳಿಸಿರುವ ಸಂಸ್ಥೆ, ನಗಾರಿ ಹೊತ್ತೊಯ್ಯಲು 700 ಕೆಜಿ ತೂಕದ ಪವರ್ ಸ್ಟೀರಿಂಗ್ ರಥವನ್ನು ಸಹ ತಯಾರಿಸಿದೆ ಎಂಬುದನ್ನು ಬಹಿರಂಗಪಡಿಸಿದೆ.
ದಗ್ಬರ್ ಸಮಾಜದ ಪ್ರತಿನಿಧಿ ಅಂಬಾಲಾಲ್ ದಗ್ಬರ್ ಪ್ರಕಾರ, “ರಾಮ ಮಂದಿರಕ್ಕಾಗಿ ನಿರ್ಮಿಸಲಾಗಿರುವ ನಗಾರಿಯಲ್ಲಿ ಕಬ್ಬಿಣದ ತಟ್ಟೆಗಳನ್ನು ಬಳಸಲಾಗಿದೆ. ಆದ್ದರಿಂದ ಇದು ಸಾವಿರಾರು ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ” ಎಂದರು. ಸಂಸ್ಥೆಯ ಮತ್ತೋರ್ವ ಸದಸ್ಯ ದೀಪಕ್ ದಗ್ಬರ್ ಮಾತನಾಡಿ, “ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ನಗಾರಿಯ ಹೊರ ಭಾಗದಲ್ಲಿ ತಾಮ್ರ ಫಲಕಗಳನ್ನು ಕೆತ್ತುವ ಪ್ರಕ್ರಿಯೆ ನಡೆಯುತ್ತಿದೆ” ಎಂದು ಹೇಳಿದರು.
ಇದನ್ನೂ ಓದಿ:ತರೀಕೆರೆ-ಕಡೂರಿಗೆ ಭದ್ರಾ ನೀರು ಹರಿಸುವಿಕೆಗೆ ಖಂಡನೆ
“ಇದಕ್ಕೆ ಚಿನ್ನ ಮತ್ತು ಬೆಳ್ಳಿಯ ಪದರವನ್ನು ಸಹ ಹಾಕಲಾಗುತ್ತದೆ. ಇದನ್ನು ಪೂರ್ಣಗೊಳಿಸಲು ಎರಡೂವರೆ ತಿಂಗಳು ತೆಗೆದುಕೊಂಡಿದ್ದೇವೆ” ಎಂದು ದೀಪಕ್ ಹೇಳಿದ್ದಾರೆ. ಸದ್ಯದ ಮಾಹಿತಿ ಪ್ರಕಾರ 2024ರ ಜನವರಿ 15ರಂದು ಈ ವಿಶೇಷ ನಗಾರಿಯನ್ನು ರಾಮಮಂದಿರಕ್ಕೆ ಹಸ್ತಾಂತರಿಸಲಾಗುವುದು ಎಂದು ದಗ್ಬರ್ ಸಮಾಜದ ಪ್ರತಿನಿಧಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).
ಅಬುಧಾಬಿಯಲ್ಲಿ ಅತೀ ದೊಡ್ಡ ಹಿಂದೂ ದೇವಾಲಯ! ಉದ್ಘಾಟಿಸಲು ಆಹ್ವಾನ ಸ್ವೀಕರಿಸಿದ ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 19 =
Remember me
