ಮುಂಬೈ:ದೇಶೀಯ ಷೇರುಕಟ್ಟೆಗಳ ಮಾನದಂಡಗಳಾದ ನಿಫ್ಟಿ 50 ಮತ್ತು BSE ಸೆನ್ಸೆಕ್ಸ್ 2023 ರಲ್ಲಿ ಅಂದಾಜು 20 ಪ್ರತಿಶತದಷ್ಟು ಏರಿಕೆ ಕಂಡಿವೆ, 2017 ರಿಂದ ಇದು ಎರಡನೇ ಅತ್ಯುತ್ತಮ ಏರುಗತಿಯ ವರ್ಷವಾಗಿ ದಾಖಲಾಗಿದೆ.
2023 ರ ಕೊನೆಯ ವಹಿವಾಟಿನ ಅವಧಿಯಲ್ಲಿ, ನಿಫ್ಟಿ 50 ಸೂಚ್ಯಂಕವು 21,731.40ಕ್ಕೆ ತಲುಪಿತು. ಬಿಎಸ್​ಇ ಸೂಚ್ಯಂಕವು 72,240.26 ನಲ್ಲಿ ನೆಲೆಗೊಂಡಿತು,
ಈ ವರ್ಷದಲ್ಲಿ ಮೀಡಿಯಂ (ಮಧ್ಯಮ ಗಾತ್ರ ಕಂಪನಿಗಳ) ಮತ್ತು ಸ್ಮಾಲ್‌ (ಸಣ್ಣ ಗಾತ್ರ ಕಂಪನಿಗಳ) ಷೇರುಗಳ ಸೂಚ್ಯಂಕಗಳು ಆರೋಗ್ಯಕರ ಲಾಭ ಗಳಿಸಿದವು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ವರ್ಷಾಂತ್ಯದಲ್ಲಿ 36,889.87 ಮತ್ತು 42,728.21 ರ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ.
ನಿಫ್ಟಿ ಮಿಡ್‌ಕ್ಯಾಪ್ 150 ಸೂಚ್ಯಂಕವು ಮುಂದಿನ 150 ಕಂಪನಿಗಳನ್ನು ಪ್ರತಿನಿಧಿಸುತ್ತದೆ. ಅಂದರೆ, ಮಾರುಕಟ್ಟೆ ಬಂಡವಾಳೀಕರಣ ಗಾತ್ರದಲ್ಲಿ 101ರಿಂದ 250 ಶ್ರೇಣಿಯಲ್ಲಿರುವ ಕಂಪನಿಗಳ ಷೇರುಗಳ ಸರಾಸರಿ ಸೂಚ್ಯಂಕ ಇದಾಗಿದೆ. ಈ ಸೂಚ್ಯಂಕವು ಮಿಡ್ ಮಾರ್ಕೆಟ್ ಕ್ಯಾಪ್ ಕಂಪನಿಗಳ ಕಾರ್ಯಕ್ಷಮತೆಯನ್ನು ಅಳೆಯುತ್ತದೆ.
ನಿಫ್ಟಿ ಮಿಡ್‌ಕ್ಯಾಪ್ 150 ಸೂಚ್ಯಂಕವು ಎನ್​ಎಸ್​ಇ (ನ್ಯಾಷನಲ್​ ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ) ಯಲ್ಲಿ ಪಟ್ಟಿ ಮಾಡಲಾದ ಷೇರುಗಳ ಮಾರುಕಟ್ಟೆ ಬಂಡವಾಳೀಕರಣದ ಅಂದಾಜು 15 ಪ್ರತಿಶತವನ್ನು ಪ್ರತಿನಿಧಿಸುತ್ತದೆ.
ಕಳೆದ ಒಂದು ವರ್ಷದಲ್ಲಿ ಒಟ್ಟಾರೆಯಾಗಿ, 2023 ರಲ್ಲಿ ಮಿಡ್​ ಕ್ಯಾಪ್​ಗಳು ಶೇಕಡಾ 46.57ರಷ್ಟು ಲಾಭ ತಂದುಕೊಟ್ಟಿವೆ. ಇನ್ನು ಟಾಪ್ 10 ಮಿಡ್‌ಕ್ಯಾಪ್​ಗಳು ದೊಡ್ಡ ಪ್ರಮಾಣದಲ್ಲಿ ಲಾಭ ಕಂಡಿವೆ. ಈ ಷೇರುಗಳು ಶೇಕಡಾ 80ರಿಂದ ಶೇಕಡಾ 300ರವರೆಗೆ ಏರಿಕೆ ದಾಖಲಿಸಿವೆ. ಇವುಗಳಲ್ಲಿ ತಕ್ಕ ಪ್ರಮಾಣದಲ್ಲಿ ಹಣ ತೊಡಗಿಸಿದವರು ಒಂದೇ ವರ್ಷದಲ್ಲಿ ಶ್ರೀಮಂತರಾಗಿದ್ದಾರೆ.
ಬ್ಲೂಮ್‌ಬರ್ಗ್ ಸಂಸ್ಥೆಯ ಮಾಹಿತಿ ಪ್ರಕಾರ 2023 ರ ಟಾಪ್ 10 ಮಿಡ್‌ಕ್ಯಾಪ್​ಗಳ ವಿವರ ಇಲ್ಲಿದೆ.
1 ) ಆರ್​ಇಸಿ: ಶೇಕಡಾ 277.34 ಹೆಚ್ಚಳ2) ಪವರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್: ಶೇಕಡಾ 264.11 ಹೆಚ್ಚಳ3) ಅದಾನಿ ಪವರ್ ಲಿಮಿಟೆಡ್: ಶೇಕಡಾ 180.85 ಹೆಚ್ಚಳ4) ಅರಬಿಂದೊ ಫಾರ್ಮಾ ಲಿಮಿಟೆಡ್​ (Aurobindo Pharma Ltd) ಶೇಕಡಾ 145.57 ಹೆಚ್ಚಳ5) ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ಲಿಮಿಟೆಡ್: ಶೇಕಡಾ 141.10 ಹೆಚ್ಚಳ6) ಪಾಲಿಕ್ಯಾಬ್​ ಇಂಡಿಯಾ ಲಿಮಿಟೆಡ್​: ಶೇಕಡಾ 109.79 ರಷ್ಟು ಹೆಚ್ಚಳ7) ಟೊರೆಂಟ್ ಪವರ್ ಲಿಮಿಟೆಡ್: ಶೇಕಡಾ 94.87 ಹೆಚ್ಚಳ8) ಪರ್ಸಿಸ್ಟೆಂಟ್ ಸಿಸ್ಟಮ್ಸ್ ಲಿಮಿಟೆಡ್: ಶೇಕಡಾ 94.06 ಹೆಚ್ಚಳ9) ಆಯಿಲ್ ಇಂಡಿಯಾ ಲಿಮಿಟೆಡ್: ಶೇಕಡಾ 92.40 ಹೆಚ್ಚಳ10) ಸುಪ್ರೀಮ್ ಇಂಡಸ್ಟ್ರೀಸ್ ಲಿಮಿಟೆಡ್: ಶೇಕಡಾ 86.88 ಹೆಚ್ಚಳ

flowers-on-pm-modi-do-you-know-this-person-in-babri-masjid-ram-mandir-case
ಪುಟಿನ್​ ಹತ್ಯೆ, ಆರ್ಥಿಕ ಕುಸಿತ, ಪ್ರವಾಹ… : 2024ರ ಭವಿಷ್ಯವಾಣಿಯಲ್ಲಿ ಏನೇನಿದೆ?

ಜ. 22ರಂದು ಅಯೋಧ್ಯೆಗೆ ಬರುವುದು ಬೇಡ; ಮನೆಯಲ್ಲೇ ದೀಪ ಬೆಳಗಿಸಿ: ಸಾರ್ವಜನಿಕರಿಗೆ ಪ್ರಧಾನಿ ಮನವಿ

ಫೆ. 14ರಂದು ಅಬುಧಾಬಿಯ ಐತಿಹಾಸಿಕ ಹಿಂದೂ ಮಂದಿರ ಉದ್ಘಾಟನೆ: ಆಮಂತ್ರಣ ಸ್ವೀಕರಿಸಿದ ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + twelve =
Remember me
