ನವದೆಹಲಿ:ದೇಶದ ಆರ್ಥಿಕತೆಯ ದಿಕ್ಕನ್ನು ನಿರ್ಧರಿಸುವಂಥ ಮಹತ್ವದ ಸಭೆಯೊಂದು ಆರಂಭಗೊಂಡಿದ್ದು, ಭಾರತದ ಆರ್ಥಿಕ ವಲಯದ ಗಮನ ಈ ಸಭೆಯ ಮೇಲಿದ್ದು, ಆರ್ಥಿಕ ಪರಿಣತರು ಮತ್ತು ಉದ್ಯಮ ಕ್ಷೇತ್ರದ ಮಂದಿ ಇದರ ನಿರ್ಣಯಗಳತ್ತ ಕುತೂಹಲಭರಿತ ನಿರೀಕ್ಷೆ ಹೊಂದಿದ್ದಾರೆ.
ಹೌದು.. ಸರಕು ಮತ್ತು ಸೇವಾ ತೆರಿಗೆ ಪದ್ಧತಿಯಲ್ಲಿ (ಜಿಎಸ್​ಟಿ) ಮಹತ್ವದ ಬದಲಾವಣೆಗಳನ್ನು ತರಲಿದೆ ಎಂದು ನಿರೀಕ್ಷಿಸಲಾಗಿರುವ ಜಿಎಸ್​ಟಿ ಮಂಡಳಿಯ 47ನೇ ಸಭೆ ಚಂಡೀಗಢದಲ್ಲಿ ಇಂದು ಆರಂಭಗೊಂಡಿದ್ದು, ನಾಳೆಯೂ ನಡೆಯಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದು, ಕರ್ನಾಟಕದಿಂದ ಬಸವರಾಜ ಬೊಮ್ಮಾಯಿ ಕೂಡ ಭಾಗಿಯಾಗಿದ್ದಾರೆ.
ಇದನ್ನೂ ಓದಿ:ಒಬ್ಬನ ಕೊಲೆ ಹಿಂದಿದ್ದರು 14 ಜನ!; ನಾಲ್ಕು ತಂಡಗಳಿಂದ ಆರೋಪಿಗಳ ಬಂಧನ..
ರಾಜ್ಯಗಳಿಗೆ ತೆರಿಗೆ ಸಂಗ್ರಹದಲ್ಲಾಗುತ್ತಿರುವ ಕೊರತೆಗೆ ಪರಿಹಾರ ನೀಡಿಕೆ ನಿರ್ಧಾರವನ್ನು ಈ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಕೆಲವು ವಸ್ತುಗಳ ತೆರಿಗೆ ಏರಿಕೆ ಹಾಗೂ ತೆರಿಗೆ ಸ್ಲ್ಯಾಬ್​ಗಳ ವಿಲೀನದ ಬಗ್ಗೆ ನಿರ್ಣಯವಾಗುವ ಸಾಧ್ಯತೆಯೂ ಇದೆ ಎಂದು ನಿರೀಕ್ಷಿಸಲಾಗಿದೆ.
ಚಂಡೀಗಢದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ. ಶಿಖಾ ಮತ್ತು ಇತರರು ಉಪಸ್ಥಿತರಿದ್ದಾರೆ.
ಕಾರಿನ ಗಾಜನ್ನು ಒರೆಸುತ್ತ ಫಾಸ್ಟ್ಯಾಗ್ ಹಣ ಕಬಳಿಸುವವರ ಹಾವಳಿ?; ಹೊರಬಿತ್ತು ಅಸಲಿಯತ್ತು…
ಫೈನಾನ್ಸಿಯರ್ ಆತ್ಮಹತ್ಯೆ: ಬಡ್ಡಿಗೆ ಹಣ ಕೊಟ್ಟವ ನೇಣಿಗೆ ಗೋಣೊಡ್ಡಿದ..
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × three =
Remember me
