ಗೌಹಾಟಿ :ಅಸ್ಸಾಂ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕರಾದ ಹಿಮಂತ್ ಬಿಸ್ವ ಸರ್ಮ ಅವರು ಚುನಾವಣಾ ಪ್ರಚಾರ ಮಾಡುವುದನ್ನು ನಿಷೇಧಿಸಿರುವ ಚುನಾವಣಾ ಆಯೋಗದ ಆದೇಶದ ವಿರುದ್ಧ ಸರ್ಮ ಇಂದು ಗೌಹಾಟಿ ಹೈಕೋರ್ಟ್​ನಲ್ಲಿ ಅಪೀಲು ಸಲ್ಲಿಸಿದ್ದಾರೆ.
ಕಾಂಗ್ರೆಸ್​ ಪಕ್ಷದ ದೂರಿನ ಮೇರೆಗೆ ನಿನ್ನೆ ರಾತ್ರಿ ಆಯೋಗವು ಸರ್ಮ ಅವರು 48 ಗಂಟೆಗಳ ಕಾಲ ಕ್ಯಾಂಪೇನ್​ ಮಾಡದಂತೆ ನಿಷೇಧಾಜ್ನೆ ಹೊರಡಿಸಿತ್ತು. ಸರ್ಮ ಅವರು, ಬೋಡೋಲ್ಯಾಂಡ್​ ಪೀಪಲ್ಸ್​ ಫ್ರಂಟ್​ನ ಹಗ್ರಾಮಾ ಮೊಹಿಲರಿ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ದುರ್ಬಳಕೆ ಮಾಡಿ ಜೈಲಿಗೆ ಕಳುಹಿಸುವುದಾಗಿ ಬಹಿರಂಗವಾಗಿ ಧಮಕಿ ಹಾಕಿದ್ದರು ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ:ಮಸ್ಕಿ ಉಪಚುನಾವಣೆಯ ಪ್ರಚಾರಕ್ಕೆ ಆಗಮಿಸಿದ ಬಿಜೆಪಿ ನಾಯಕರಿಗೆ ಗ್ರಾಮಸ್ಥರ ತರಾಟೆ!
ಆಯೋಗದ ನಿಷೇಧಾಜ್ನೆಯಿಂದಾಗಿ ರಾಜ್ಯದಲ್ಲಿ ಬಿಜೆಪಿಯ ಸ್ಟಾರ್ ಕಾಂಪೇನರ್​ಗಳಲ್ಲಿ ಒಬ್ಬರಾದ ಸರ್ಮ, ಪಕ್ಷದ ಚುನಾವಣಾ ಕಾರ್ಯನಿರ್ವಾಹಕರಾಗಿದ್ದಾರೆ ಕೂಡ. ಅವರು ಪ್ರಚಾರದಲ್ಲಿ ಭಾಗವಹಿಸದಿದ್ದರೆ ರಾಜ್ಯದಲ್ಲಿ ಬಿಜೆಪಿಗೆ ಭಾರೀ ಹೊಡೆತ ಬಿದ್ದಂತೆ ಎನ್ನಲಾಗಿದೆ.(ಏಜೆನ್ಸೀಸ್)
ಅಭ್ಯರ್ಥಿ ಕಾರಿನಲ್ಲಿ ಇವಿಎಂ ಸಾಗಣೆ : ಮರುಮತದಾನ ಆದೇಶಿಸಿದ ಚುನಾವಣಾ ಆಯೋಗ

VIDEO | ವೈರಲ್ ಆಗ್ತಿದೆ, ಶನಾಯಾ ಕಪೂರ್​ರ ಆಕರ್ಷಕ ಬೆಲ್ಲಿ ಡ್ಯಾನ್ಸ್

“ಡೊನಾಲ್ಡ್ ಟ್ರಂಪ್ ರೀತಿಯಲ್ಲಿ ವರ್ತಿಸುತ್ತಿರುವ ಮಮತಾ”

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 6 =
Remember me
