ಶ್ರೀನಗರ:ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನ ಮಾನ ರದ್ದು ಮಾಡಿದ ಬೆನ್ನಲ್ಲೇ ತೆಗೆದುಹಾಕಲಾಗಿದ್ದ 4ಜಿ ಇಂಟರ್​ನೆಟ್​ ಸೇವೆ ಇದೀಗ ಮತ್ತೊಮ್ಮೆ ಪುನರಾರಂಭವಾಗುತ್ತಿದೆಯೆಂದು ಎಂದು ತಿಳಿಸಲಾಗಿದೆ. ಇಂದು ಮಧ್ಯ ರಾತ್ರಿಯಿಂದಲೇ ಸೇವೆ ಪುನರಾರಂಭವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
“4 ಜಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸಂಪೂರ್ಣ ಜಮ್ಮು ಕಾಶ್ಮೀರದಲ್ಲಿ ಮರುಸ್ಥಾಪಿಸಲಾಗುತ್ತಿದೆ” ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತ ವಕ್ತಾರ ರೋಹಿತ್ ಕನ್ಸಾಲ್ ಟ್ವೀಟ್ ಮಾಡಿದ್ದಾರೆ. ಬರೋಬ್ಬರಿ 18 ತಿಂಗಳುಗಳ ನಂತರ ಈ ಪ್ರದೇಶದಲ್ಲಿ 4ಜಿ ಸೇವೆ ಕಾರ್ಯಗತವಾಗಲಿದೆ ಎಂದು ಅವರು ತಿಳಿಸಿದ್ದಾರೆ. 4 ಜಿ ಸೇವೆಗಳನ್ನು ಪುನಃಸ್ಥಾಪಿಸುವ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸ್ವಾಗತಿಸಿದ್ದಾರೆ. “4 ಜಿ ಮುಬಾರಕ್! ಆಗಸ್ಟ್ 2019 ರ ನಂತರ ಮೊದಲ ಬಾರಿಗೆ ರಾಜ್ಯದ ಎಲ್ಲ 4 ಜಿ ಮೊಬೈಲ್​ಗಳಿಗೆ 4ಜಿ ಡೇಟಾ ಸಿಗುತ್ತಿದೆ.” ಎಂದು ಅವರು ಹೇಳಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನವನ್ನು 2019ರ ಆಗಸ್ಟ್​ 5ರಂದು ತೆಗೆದುಹಾಕಲಾಗಿತ್ತು. ಅಲ್ಲಿ ಯಾವುದೇ ಗಲಭೆ ನಡೆಯದಿರುವಂತೆ ತಡೆಯುವ ಸಲುವಾಗಿ ಸಂಪೂರ್ಣವಾಗಿ ಇಂಟರ್​ನೆಟ್​ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಎಲ್ಲ ಮೊಬೈಲ್​ ನೆಟ್​ವರ್ಕ್​ಗಳನ್ನು ತೆಗೆದುಹಾಕಲಾಗಿತ್ತು. ನಂತರ ನಿಧಾನಗತಿಯಲ್ಲಿ ಸೇವೆಗಳನ್ನು ಪುನರಾರಂಭಿಸಲಾಯಿತು. ಇದೀಗ 4ಜಿ ಸೇವೆಯನ್ನೂ ಪುನರಾರಂಭಿಸಲಾಗುತ್ತಿದೆ. (ಏಜೆನ್ಸೀಸ್​)
ಮನೆಯಲ್ಲಿನ ಲೈವ್​ ಸೆಕ್ಸ್​ನ್ನು ಸಿಸಿಟಿವಿಯಿಂದಲೇ ಕದ್ದು ನೋಡುತ್ತಿದ್ದ ಖತರ್ನಾಕ್​​ ಟೆಕ್ನಿಷಿಯನ್​!

ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 12 =
Remember me
