ನವದೆಹಲಿ:ದೇಶದ 7,287 ಕುಗ್ರಾಮಗಳಿಗೆ 4ಜಿ ಮೊಬೈಲ್ ಆಧಾರಿತ ಯುಎಸ್​ಒಎಫ್ ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.
ಆಂಧ್ರಪ್ರದೇಶ, ಛತ್ತೀಸ್​ಗಢ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಒಡಿಶಾಗಳ 44 ಜಿಲ್ಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಇದಕ್ಕಾಗಿ ಮುಂದಿನ ಐದು ವರ್ಷ 6,466 ಕೋಟಿ ರೂಪಾಯಿಯನ್ನು ಸಾರ್ವತ್ರಿಕ ಸೇವಾ ಬಾಧ್ಯತಾ ನಿಧಿ (ಯುಎಸ್​ಒಎಫ್)ಯಲ್ಲಿ ಮೀಸಲು ಇರಿಸಲು ಒಪ್ಪಿಗೆ ಸೂಚಿಸಿದೆ. ಈ ಯೋಜನೆಯು 18 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಈ ಒಪ್ಪಂದಕ್ಕೆ ನ.23ಕ್ಕೆ ಸಹಿ ಬೀಳುವ ಸಾಧ್ಯತೆ ಇದೆ.
4ಜಿ ನೆಟ್​ವರ್ಕ್ ಲಭ್ಯವಾಗುವುದರಿಂದ ಈ ಜಿಲ್ಲೆಗಳಲ್ಲಿ ಕೌಶಲ ಆಧಾರಿತ ತರಬೇತಿ ಕಾರ್ಯಕ್ರಮ, ವಿಪತ್ತು ನಿರ್ವಹಣೆ, ಇ-ಆಡಳಿತ, ಇ-ಕಾಮರ್ಸ್ ಸೌಲಭ್ಯ ಹೆಚ್ಚಳ, ಶಿಕ್ಷಣ ಸಂಸ್ಥೆಗಳಿಗೆ ಜ್ಞಾನ ಹಂಚಿಕೆ, ಉದ್ಯೋಗ ಸೃಷ್ಟಿಗೆ ಅನುಕೂಲ ಆಗಲಿದೆ. ಒಟ್ಟಾರೆ ಆತ್ಮನಿರ್ಭರ ಭಾರತದ ಕಾರ್ಯಕ್ರಮಗಳಿಗೆ ಇದು ಪೂರಕವಾಗಿರಲಿದೆ.
ತಲೆಮರೆಸಿಕೊಂಡಿದ್ದ ‘ಕುರಾನ್ ಸರ್ಕಲ್‌’ನ ಶಂಕಿತ ಉಗ್ರ ಎನ್‌ಐಎ ಬಲೆಗೆ, ‘ಭವಿಷ್ಯದ ಐಸಿಸ್’ ಕುರಿತು ಬೆಂಗಳೂರಿನಲ್ಲಿ ಪ್ಲ್ಯಾನ್!
ವಿಧಾನಸೌಧದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಆಸಾಮಿ, ಸ್ಯಾನಿಟೈಸರ್ ಕುಡಿದು ಹೀಗಾ ಮಾಡೋದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 13 =
Remember me
