ನವದೆಹಲಿ:ದೇಶದಲ್ಲಿ ಸದ್ಯ ಮೂರನೇ ಹಂತದ ಲಾಕ್​ಡೌನ್​ ನಡೆಯುತ್ತಿದ್ದು, ಮೇ 17ಕ್ಕೆ ಅದರ ಅವಧಿ ಮುಕ್ತಾಯವಾಗಲಿದೆ. ಆದರೆ ದೇಶದಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದೆ.
ಕೊವಿಡ್​-19 ದೇಶಕ್ಕೆ ಕಾಲಿಟ್ಟಾಗಿನಿಂದ ಇಂದು ಐದನೇ ಬಾರಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಸಂಕಷ್ಟ ನಿರ್ವಹಣೆಗಾಗಿ, ಸ್ವಾವಲಂಬಿ ಭಾರತ ಅಭಿಯಾನಕ್ಕಾಗಿ ಒಟ್ಟು 20 ಲಕ್ಷ ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:ಕರೊನಾ ಬಿಕ್ಕಟ್ಟು ನಿರ್ವಹಣೆಗಾಗಿ 20 ಲಕ್ಷ ಕೋಟಿ ರೂ.ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಿಸಿದ ಪ್ರಧಾನಿ ಮೋದಿ
ಅದರೊಂದಿಗೆ ಲಾಕ್​ಡೌನ್​ ಕೂಡ ಮುಂದುವರಿಯಲಿದೆ ಎಂಬ ಸೂಚನೆ ನೀಡಿದ್ದಾರೆ. ಕರೊನಾ ವೈರಸ್​ ಇನ್ನೂ ಸುದೀರ್ಘ ಸಮಯಗಳವರೆಗೆ ನಮ್ಮೊಂದಿಗೇ ಇರಲಿದೆ. ವೈರಸ್​ನೊಂದಿಗೇ ಬದುಕಲು ಕಲಿಯಿರಿ ಎಂದು ಹಲವು ವಿಜ್ಞಾನಿಗಳು, ತಜ್ಞರು ಹೇಳಿದ್ದಾರೆ. ಹಾಗೇ, ಎಲ್ಲ ರಾಜ್ಯಗಳ ಕೊವಿಡ್-19ರ ಪರಿಸ್ಥಿತಿ, ಆರ್ಥಿಕತೆ ಸ್ಥಿತಿಯ ವರದಿಯನ್ನು ಆಯಾ ಮುಖ್ಯಮಂತ್ರಿಗಳಿಂದ ಪಡೆಯಲಾಗಿದೆ.
ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಲಾಕ್​ಡೌನ್​ ನಾಲ್ಕನೇ ಹಂತವನ್ನು ಕೆಲವು ಹೊಸ ನಿಯಮಗಳೊಂದಿಗೆ ಜಾರಿ ಮಾಡಲಾಗುವುದು. ನಾಲ್ಕನೇ ಹಂತದ ಲಾಕ್​ಡೌನ್ ಹೇಗಿರಲಿದೆ, ಅದರ ರೂಪುರೇಷೆಗಳೇನು ಎಂಬುದನ್ನು ಮೇ 18ಕ್ಕೂ ಮೊದಲೇ ದೇಶದ ಜನರಿಗೆ ತಿಳಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ:ಲಾಕ್​ಡೌನ್​ನಲ್ಲೇ ಸೂಪರ್​ಸ್ಟಾರ್​ ರಜನಿಕಾಂತ್​ ಕಡೆಯಿಂದ ಬಂತು ಸಿಹಿಸುದ್ದಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + one =
Remember me
