ನವದೆಹಲಿ:ರಾಜಧಾನಿ ದೆಹಲಿಯಲ್ಲಿನ ಪ್ರಸ್ತುತ ಕರೊನಾ ದ್ವಿಗುಣಗೊಳ್ಳುವಿಕೆ ಪ್ರಮಾಣವನ್ನು ನೋಡಿದರೆ ಜುಲೈ 31ರ ವೇಳೆಗೆ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 5.50 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ. ಸದ್ಯ ಕರೊನಾ ಪ್ರಕರಣಗಳ ದ್ವಿಗುಣಗೊಳ್ಳುವಿಕೆ ಪ್ರಮಾಣ ದೆಹಲಿಯಲ್ಲಿ 12 ರಿಂದ 13 ದಿನಗಳಷ್ಟಿದೆ. ಇದೇ ರೀತಿ ಮುಂದುವರೆದರೆ ಜುಲೈ ಅಂತ್ಯದ ವೇಳೆಗೆ 5.50 ಲಕ್ಷ ಪ್ರಕರಣಗಳು ಬೆಳಕಿಗೆ ಬರಬಹುದು. ಆ ವೇಳೆಗೆ ಹೆಚ್ಚುವರಿ 80 ಸಾವಿರ ಹಾಸಿಗೆಗಳನ್ನು ಸಿದ್ಧವಾಗಿರಿಸಬೇಕಾಗುತ್ತದೆ ಎಂದಿದ್ದಾರೆ.
ದೆಹಲಿ ಸರ್ಕಾರದ ಅಂದಾಜಿನ ಪ್ರಕಾರ ಜೂನ್ 15ರವೇಳೆಗೆ ಸೋಂಕಿತರ ಪ್ರಮಾಣ 44 ಸಾವಿರಕ್ಕೆ ಏರಿಕೆಯಾಗಲಿದ್ದು, ಜೂನ್ 30ಕ್ಕೆ 1 ಲಕ್ಷ, ಜುಲೈ 15ರ ವೇಳೆಗೆ 2.25 ಲಕ್ಷ ಪ್ರಕರಣಗಳು ವರದಿಯಾಗುವ ಸಾಧ್ಯತೆ ದೆಹಲಿಯಲ್ಲಿ ಸೋಂಕಿತರ ಪ್ರಮಾಣ 29 ಸಾವಿರಕ್ಕೆ ಏರಿಕೆಯಾಗಿದ್ದು, ಈವರೆಗೆ ಒಟ್ಟು 800ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.
ಕೇಂದ್ರ ಸರ್ಕಾರದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ದೆಹಲಿಯಲ್ಲಿ ಕರೊನಾ ವೈರಸ್ ಸಮುದಾಯಿಕವಾಗಿ ಹರಡುವ ಹಂತದಲ್ಲಿಲ್ಲ ಎಂದು ಸಿಸೋಡಿಯಾ ತಿಳಿಸಿದ್ದಾರೆ.
ಕೇಜ್ರಿವಾಲ್​ಗೆ ಕರೊನಾ ನೆಗೆಟಿವ್: ಕರೊನಾ ರೋಗಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಪರೀಕ್ಷೆಗೆ ಒಳಗಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವರದಿ ನೆಗೆಟಿವ್ ಬಂದಿದೆ. ಭಾನುವಾರ ಮಧ್ಯಾಹ್ನದ ಬಳಿಕ ಅವರು ಜ್ವರ ಮತ್ತು ಗಂಟಲು ನೋವಿನಿಂದ ಬಳಲುತ್ತಿದ್ದರು. ಮುಂಜಾಗ್ರತಾ ಕ್ರಮವಾಗಿಸ್ವಯಂ ಐಸೋಲೇಷನ್​ಗೆ ಒಳಗಾಗಿದ್ದರು.
15 ರಾಜ್ಯಗಳಿಗೆ ಉನ್ನತ ಮಟ್ಟದ ತಂಡಗಳ ರವಾನೆ: 50ಕ್ಕೂ ಹೆಚ್ಚು ಜಿಲ್ಲೆ ಅಥವಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಉನ್ನತ ಮಟ್ಟದ ತಂಡಗಳನ್ನು ರವಾನಿಸಿದೆ. ಈ ತಂಡಗಳು ಕರೊನಾ ಪರಿಸ್ಥಿತಿ ನಿರ್ವಹಣೆ ಬಗ್ಗೆ ಮಾರ್ಗದರ್ಶನ ಮಾಡುತ್ತವೆ.
ತಪಾಸಣೆಗೆ ಒಳಗಾದ ಕೇಂದ್ರ ಆಯುಷ್ ಸಚಿವ ನಾಯ್ಕ
ಪಣಜಿ: ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯ್ಕ ಮತ್ತವರ ಕುಟುಂಬ ಗೋವಾದಲ್ಲಿ ಕೋವಿಡ್-19 ತಪಾಸಣೆ ಮಾಡಿಸಿಕೊಂಡಿದ್ದು, ನೆಗೆಟಿವ್ ಬಂದಿದೆ. ನಾಯ್ಕ ಅವರ ಗೋವಾದ ಅಡಪಯಿ ನಿವಾಸದ ಪಕ್ಕದ ಮನೆಯಲ್ಲಿರುವ ವ್ಯಕ್ತಿಯೊಬ್ಬರು ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇವರಿಗೆ ಕರೊನಾ ಸೊಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ನಾಯ್ಕ ಹಾಗೂ ಅವರ ತಪಾಸಣೆ ಮಾಡಿಸಿಕೊಂಡಿದ್ದರು.
ಆದೇಶ ಮರುಪರಿಶೀಲನೆಗೆ ಬೈಜಾಲ್ ಅಸಮ್ಮತಿ
ದೆಹಲಿ ಕರೊನಾ ಆಸ್ಪತ್ರೆಗಳಲ್ಲಿ ಸ್ಥಳೀಯರಿಗೆ ಮಾತ್ರ ಚಿಕಿತ್ಸೆ ನೀಡಬೇಕು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೊರಡಿಸಿದ್ದ ಆದೇಶಕ್ಕೆ ಲೆಫ್ಟಿನಂಟ್ ಗವರ್ನರ್ ಅನಿಲ್ ಬೈಜಾಲ್ ಸೋಮವಾರ ತಡೆ ನೀಡಿದ್ದರು. ಬಳಿಕ ಮಂಗಳವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ತಮ್ಮ ಆದೇಶಕ್ಕೆ ತಡೆ ನೀಡಿದ ನಿರ್ಧಾರವನ್ನು ಮರುಪರಿಶೀಲಿಸಿ ಎಂದು ಆಮ್ ಆದ್ಮಿ ಪಕ್ಷ ಬೈಜಾಲ್​ರನ್ನು ಕೋರಿಕೊಂಡಿತ್ತು. ಆದರೆ, ಅವರು ನಿರ್ಧಾರ ವಾಪಸ್ ಪಡೆಯಲು ಅಸಮ್ಮತಿ ಸಿದ್ದಾರೆ ಎಂದು ತಿಳಿದುಬಂದಿದೆ.
ವಾಹನಗಳ ದಾಖಲೆ ಅವಧಿ ವಿಸ್ತರಣೆ
ಫೆಬ್ರವರಿ 1 ಅಥವಾ ಅದರ ನಂತರದ ಅವಧಿ ಮುಕ್ತಾಯವಾಗಿರುವ ವಾಹನ ಚಾಲನಾ ಪರವಾನಿಗೆ, ವಾಹನ ಫಿಟ್​ನೆಸ್ ಸರ್ಟಿಫಿಕೇಟ್, ನೋಂದಣಿ ದಾಖಲೆ, ಅಂತರ್ ರಾಜ್ಯ ರಹದಾರಿ ಸೇರಿದಂತೆ ವಾಹನಗಳಿಗೆ ಸಂಬಂಧಿಸಿದ ಇನ್ನಿತರ ದಾಖಲೆಗಳ ಸಿಂಧುತ್ವವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಕಳೆದ ಮಾರ್ಚ್​ನಲ್ಲಿ ವಾಹನಗಳ ದಾಖಲೆಗಳ ಮಾನ್ಯತೆಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿತ್ತು.
ಹಳ್ಳಿಗಳಿಗೆ ಕಾಲಿಟ್ಟ ಕೊವಿಡ್​-19; ಸೋಂಕು ಮಣಿಸಲು ಹಳ್ಳಿಗರು ತೆಗೆದುಕೊಂಡ ನಿರ್ಧಾರ ಅನುಕರಣೀಯ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 + 17 =
Remember me
