ಕೊಲ್ಕತ :ಭಾರತ-ಬಾಂಗ್ಲಾದೇಶದ ನಡುವಣ ಅಂತರರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ದಾಟುತ್ತಿದ್ದ ಐವರು ಬಾಂಗ್ಲಾದೇಶೀ ಪ್ರಜೆಗಳನ್ನು ಗಡಿ ಭದ್ರತಾ ಪಡೆ(ಬಿಎಸ್​ಎಫ್​) ಬಂಧಿಸಿದೆ. ಪಶ್ಮಿಮ ಬಂಗಾಳದ ನಾಡಿಯ ಪ್ರಾಂತ್ಯದ ಗಡಿಭಾಗದಲ್ಲಿ ಬಿಎಸ್​ಎಫ್​​ನ ಸೌತ್​ ಬೆಂಗಾಳ್ ಫ್ರಾಂಟಿಯರ್​ ಟ್ರೂಪ್​ನವರು ನಾಲ್ಕು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಬಂಧಿಸಿದ್ದಾರೆ.
ಬಂಧಿತರು ಬಾಂಗ್ಲಾದೇಶದ ಜೆಸ್ಸೋರ್​ ಮತ್ತು ನರೈಲ್ ಜಿಲ್ಲೆಗಳ ನಿವಾಸಿಗಳು. ಗಡಿಯ ಹತ್ತಿರ ಬಾಳೆತೋಟದಲ್ಲಿ ಮುಚ್ಚಿಟ್ಟುಕೊಂಡಿದ್ದು, ಗಸ್ತು ಕರ್ತವ್ಯದಲ್ಲಿದ್ದ ಬಿಎಸ್​ಎಫ್​ ಸಿಬ್ಬಂದಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ವಿಚಾರಣೆ ನಡೆಸಿದಾಗ ಅವರೆಲ್ಲರೂ ಬೇರೆ ಬೇರೆ ಸಮಯದಲ್ಲಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರು. ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಹಫೀಜುಲ್​ ಎಂಬ ದಲ್ಲಾಳಿಗೆ 10 ರಿಂದ 12 ಸಾವಿರ ರೂ.ಗಳನ್ನು ಕೊಟ್ಟು ಗಡಿ ದಾಟುವ ಪ್ರಯತ್ನದಲ್ಲಿದ್ದರು ಎಂಬುದು ತಿಳಿದುಬಂದಿದೆ.
ಮುಂದಿನ ಕಾನೂನು ಕ್ರಮ ಕೈಗೊಳ್ಳಲು, ಬಂಗಾಳದ 24 ಪರಗಣಾಸ್ ಜಿಲ್ಲೆಯ ಹನ್ಸ್​ಖಲಿ ಪೊಲೀಸರಿಗೆ ಬಂಧಿತರನ್ನು ಹಸ್ತಾಂತರಿಸಲಾಗಿದೆ.(ಏಜೆನ್ಸೀಸ್)
VIDEO | ಕ್ರಿಕೆಟಿಗ ಯಜ್ವೇಂದ್ರ ಚಹಲ್​ ಡ್ಯಾನ್ಸ್​ ಸ್ಟೆಪ್ಸ್​ ನೋಡಿ!

ಮಾಫಿಯಾದಿಂದ ಜೀವಕ್ಕೆ ಅಪಾಯವಿದೆ ಎಂದ ಪತ್ರಕರ್ತ ‘ಅಪಘಾತ’ದಲ್ಲಿ ಮೃತ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:3 × 5 =
Remember me
