ಪಟನಾ:ಮನೆಯ ರೂಮಿನೊಳಗೆ ಮಲಗಿದ್ದ ಬಾಲಕಿಯನ್ನು ಕಾಮುಕರು ಕಿಟಕಿ ಮುರಿದು ಹೊತ್ತೊಯ್ದು ಗ್ಯಾಂಗ್ ರೇಪ್ ಮಾಡಿ ಕೊಲೆ ಮಾಡಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ಮೃತ ದೇಗ ಘಟನೆ ನಡೆದ ಮಾರನೇ ದಿನ ಪೊದೆಯಲ್ಲಿ ಸಿಕ್ಕಿದೆ.
ವೈಶಾಲಿ ಜಿಲ್ಲೆಯ ಭಗವಾನ್ಪುರ ರಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 14 ವರ್ಷದ ಬಾಲಕಿಯ ಸಂಬಂಧಿಕರು ಜೂನ್ 29ರಂದು ಪಕ್ಕದ ಊರಿನಲ್ಲಿದ್ದ ಮದುವೆಗೆ ತೆರಳಿದ್ದರು. ಬಾಲಕಿ ತನ್ನ ಅಜ್ಜನೊಂದಿಗೆ ಮನೆಯಲ್ಲಿದ್ದಳು. ಅಜ್ಜ ಮನೆಯ ಬಾಗಿಲಲ್ಲಿ ಮಲಗಿದ್ದರೆ, ಬಾಲಕಿ ರೂಮಿನ ಬಾಗಿಲು ಹಾಕಿಕೊಂಡು ಒಳಗೆ ಮಲಗಿದ್ದಳು. ರಾತ್ರಿ ವೇಳೆ ಕಿಟಕಿ ಬಳಿ ಬಂದ ಐವರು ದುಷ್ಟರು, ಕಿಟಕಿಯನ್ನು ಮುರಿದು, ಬಾಲಕಿಯನ್ನು ಹೊತ್ತೊಯ್ದಿದ್ದಾರೆ. ಆಕೆಯನ್ನು ಗ್ಯಾಂಗ್ ರೇಪ್ ಮಾಡಿ ಕೊಲೆ ಮಾಡಲಾಗಿದೆ. ಬಾಲಕಿಯ ಮೃತ ದೇಹವನ್ನು ಪೊದೆಯೊಂದರಲ್ಲಿ ಎಸೆದು ನಾಪತ್ತೆಯಾಗಿದ್ದಾರೆ.
ಬೆಳಗ್ಗೆ ಎದ್ದ ಅಜ್ಜ ಎಷ್ಟು ಹೊತ್ತಾದರೂ ಮೊಮ್ಮಗಳು ರೂಮಿನಿಂದ ಹೊರಗೆ ಬಾರದಿರುವುದನ್ನು ಕಂಡು ಅಕ್ಕ ಪಕ್ಕದವರಿಗೆ ವಿಚಾರ ತಿಳಿಸಿದ್ದಾನೆ. ಸ್ಥಳೀಯರು ಬಂದು ಕಿಟಕಿ ನೋಡಿದಾಗ, ಕಿಟಕಿ ಮುರಿದಿದ್ದು ಬಾಲಕಿ ಅಲ್ಲಿ ಇಲ್ಲದಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ವಿಚಾರ ತಿಳಿಸಲಾಗಿದೆ. ಊರಿನಲ್ಲೆಲ್ಲೆ ಹುಡುಕಾಡಿದಾಗ ಪೊದೆಯಲ್ಲಿ ಬಾಲಕಿ ದೇಹ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)
ರಾಷ್ಟ್ರೀಯ ವೈದ್ಯರ ದಿನದಂದೇ ಆತ್ಮಹತ್ಯೆ ಮಾಡಿಕೊಂಡ ವೈದ್ಯ ದಂಪತಿ! ಮದುವೆಯಾಗಿ ತಿಂಗಳೊಳಗೇ ಮುಗಿಯಿತು ಬದುಕು!

ಯಮುನಾ ನದಿಗೆ ಹಾರಿದ ಸೋಶಿಯಲ್ ಮೀಡಿಯಾ ಸ್ಟಾರ್! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಆತ್ಮಹತ್ಯೆಯ ದೃಶ್ಯ

11 ವಯಸ್ಸಿಗೇ ಮಗುವಿಗೆ ಜನ್ಮವಿತ್ತ ಬಾಲಕಿ! ಇದು ಹೇಗಾಗಿದ್ದು ಎಂದು ತಲೆ ಕೆಡಿಸಿಕೊಂಡಿರುವ ಕುಟುಂಬ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:15 − three =
Remember me
