ರಾಂಚಿ:ಮೈನಿಂಗ್​ ಕಂಪನಿ ಸುತ್ತ ಹಾಕಲಾಗಿದ್ದ ಹೈಟೆನ್ಷನ್​ ವೈರ್​ ತಗುಲಿ ಎರಡು ಮರಿಯಾನೆ ಸೇರಿದಂತೆ ಐದು ಆನೆಗಳು ಏಕಕಾಲದಲ್ಲಿ ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಮುಸಾಬಾನಿ ಅರಣ್ಯ ಪ್ರದೇಶದ ಬೆನಾಸೋಲ್ ಉಪರಬಂಧ ಪೊಟಾಸ್ ಅರಣ್ಯದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ ಕಂಪನಿ ಸುತ್ತ ಹಾಕಲಾಗಿದ್ದ ಹೈಟೆನ್ಷನ್ ವೈರ್‌ ತಗುಲಿ ಈ ಅವಘಡ ಸಂಭವಿಸಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಭಾಗೀಯ ಅರಣ್ಯಾಧಿಕಾರಿ ಮಮತಾ ಪ್ರಿಯದರ್ಶಿ, ಮುಸಾಬಾನಿಯ ಕಾಪರ್ ಟೌನ್‌ಶಿಪ್‌ನಲ್ಲಿರುವ ಬೆನಿಯಾಸಾಯಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಏಕಕಾಲದಲ್ಲಿ 33 ಸಾವಿರ ವೋಲ್ಟ್‌ಗಳ ವಿದ್ಯುತ್ ತಂತಿ ತಗುಲಿದ ಪರಿಣಾಮ ಈ ಅವಘಡ ಸಂಭವಿಸಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಅದೇ ಹಿಂಡಿನ ಇನ್ನೂ ನಾಲ್ಕು ಆನೆಗಳನ್ನು ಓಡಿಸಿದ್ದಾರೆ. ಇತರ ನಾಲ್ಕು ಆನೆಗಳನ್ನು ಸುರಕ್ಷಿತವಾಗಿ ಓಡಿಸಿದ ನಂತರವೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + one =
Remember me
