ನವದೆಹಲಿ:ಊಟದ ನಂತರ ಮೌತ್ ಫ್ರೆಶ್ನರ್​ ಸೇವಿಸಿದ ಬೆನ್ನಲ್ಲೇ ಐವರು ಸ್ನೇಹಿತರು ರಕ್ತ ವಾಂತಿ ಮಾಡಿಕೊಂಡ ಘಟನೆ ಗುರುಗ್ರಾಮದಲ್ಲಿರುವ ಕೆಫೆಯೊಂದರಲ್ಲಿ ಮಾರ್ಚ್​ 2ರಂದು ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ರಕ್ತ ವಾಂತಿ ಮಾಡಿದ್ದಲ್ಲದೆ, ಬಾಯಿಯಲ್ಲಿ ಸುಡುವ ಸಂವೇದನೆಯನ್ನು ಅನುಭವಿಸಿದ್ದಾರೆ. ಈ ಘಟನೆ ಗುರುಗ್ರಾಮದ ಸೆಕ್ಟರ್​ 90ರಲ್ಲಿರುವ ಲಾಫೊರೆಸ್ಟಾ ಕೆಫೆಯಲ್ಲಿ ನಡೆದಿದೆ. ಅಂಕಿತ್​ ಕುಮಾರ್​ ಎಂಬುವರು ತನ್ನ ಪತ್ನಿ ಹಾಗೂ ಫ್ರೆಂಡ್ಸ್​ ಜತೆ ಕೆಫೆಗೆ ಡಿನ್ನರ್​ಗೆಂದು ಬಂದಿದ್ದರು. ಪತ್ನಿ ಸೇರಿದಂತೆ ಐವರು ಸ್ನೇಹಿತರು ಮೌತ್ ಫ್ರೆಶ್ನರ್​ ಸೇವಿಸಿದ ಬಳಿಕ ನೋವಿನಿಂದ ಅಳುತ್ತಾ, ಕಿರುಚಾಡಿರುವ ದೃಶ್ಯವನ್ನು ಅಂಕಿತ್​ ಕುಮಾರ್​ ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.​
ಓರ್ವ ವ್ಯಕ್ತಿ ರೆಸ್ಟೋರೆಂಟ್ ನೆಲದ ಮೇಲೆ ವಾಂತಿ ಮಾಡಿದರೆ, ಮಹಿಳೆಯೊಬ್ಬಳು ಉರಿಯನ್ನು ಸಹಿಸಲಾರದೆ ತನ್ನ ಬಾಯಿಯ ಒಳಗೆ ಐಸ್ ಇಟ್ಟುಕೊಳ್ಳುತ್ತಾಳೆ. ಅಲ್ಲದೆ, ತುಂಬಾ ಉರಿಯುತ್ತಿದೆ ಎಂದು ಪದೇಪದೆ ಹೇಳುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ.
ಈ ಬಗ್ಗೆ ಮಾತನಾಡಿರುವ ಅಂಕಿತ್​ ಕುಮಾರ್​, ಅವರು ಮೌತ್​ ಫ್ರೆಶ್ನರ್ ಜೊತೆ ಏನನ್ನು ಮಿಶ್ರಣ ಮಾಡಿದ್ದರು ನಮಗೆ ಗೊತ್ತಿಲ್ಲ. ಎಲ್ಲರೂ ಕೂಡ ವಾಂತಿ ಮಾಡಿಕೊಂಡೆವು. ನಾಲಿಗೆಯಲ್ಲಿ ಕಡಿತದ ಜೊತೆಗೆ ಸುಡುವ ಸಂವೇದನೆಯನ್ನು ಅನುಭವಿಸಿದೆವು. ನಮಗೆ ಯಾವ ಬಗೆಯ ಆ್ಯಸಿಡ್​ ನೀಡಿದರೋ ತಿಳಿಯುತ್ತಿಲ್ಲ. ಪೊಲೀಸರಿಗೆ ಕರೆ ಮಾಡುವಂತೆ ಕೆಫೆಯಲ್ಲಿರುವ ಜನರಿಗೆ ತಿಳಿಸಿದೆ ಎಂದು ಕುಮಾರ್​ ಹೇಳಿದ್ದಾರೆ.
ಮೌತ್​ ಫ್ರೆಶ್ನರ್ ಪ್ಯಾಕೆಟ್​ ಅನ್ನು ನಾವು ವೈದ್ಯರಿಗೆ ತೋರಿಸಿದೆವು. ಅದೊಂದು ಡ್ರೈ ಐಸ್​ ಎಂದು ಹೇಳಿದರು. ವೈದ್ಯರ ಪ್ರಕಾರ ಇದೊಂದು ಆ್ಯಸಿಡ್​ ಆಗಿದ್ದು, ಸಾವು ಕೂಡ ಸಂಭವಿಸಬಹುದು ಎಂದು ಅಂಕಿತ್​ ಕುಮಾರ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವರದಿಗಳ ಪ್ರಕಾರ ಕೆಫೆಯಲ್ಲಿ ಮೌತ್​ ಫ್ರೆಶ್ನರ್ ಸೇವಿಸಿದ ಬಳಿಕ ಮೊದಲಿಗೆ ಸುಡುವ ಸಂವೇದನೆ ಅನುಭವಿಸಿದ್ದಾರೆ. ಇದಾದ ಬಳಿಕ ಬಾಯಿಯಲ್ಲಿ ಸಾಕಷ್ಟು ಕಿರಿಕಿರಿ ಉಂಟಾಗಿ ಕೊನೆಗೆ ರಕ್ತ ವಾಂತಿ ಮಾಡಿಕೊಂಡಿದ್ದಾರೆ. ನೀರನಲ್ಲಿ ಬಾಯಿ ತೊಳೆದುಕೊಂಡರು ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸಂತ್ರಸ್ತರು ಹೇಳಿದ್ದಾರೆ.
ಸದ್ಯ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸಂತ್ರಸ್ತರ ದೂರಿನ ಆಧಾರದ ಮೇಲೆ ರೆಸ್ಟೋರೆಂಟ್​ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಕ್ಷಮಿಸು ಅಮ್ಮ… ನನಗೆ ಗೊತ್ತಿಲ್ಲದೆ ದೊಡ್ಡ ತಪ್ಪು ಮಾಡಿದೆ: ಹಿರಿಯ ನಟಿ ಲಕ್ಷ್ಮೀ ಪುತ್ರಿ ಐಶ್ವರ್ಯಾ ಕಣ್ಣೀರು

ತಗ್ಗಿದ ಎಲ್ ನಿನೋ ಪ್ರಭಾವ: ರಾಜ್ಯದಲ್ಲಿ ಈ ಬಾರಿ ಆಶಾದಾಯಕ ಮುಂಗಾರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
