ನವದೆಹಲಿ:ಭಾರತದಲ್ಲಿ ಕೇವಲ 8 ದಿನಗಳಲ್ಲಿ 5 ಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದು, ಶನಿವಾರ 70,067 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದು ಒಂದೇ ದಿನ ಬೆಳಕಿಗೆ ಬಂದ ಅತಿ ಗರಿಷ್ಠ ಸಂಖ್ಯೆ ಆಗಿದೆ.
ಕಳೆದ ಮೇ 18ರವೇಳೆಗೆ 1 ಲಕ್ಷದ ಗಡಿ ಮುಟ್ಟಿದ್ದ ಸೋಂಕು ಪ್ರಕರಣಗಳ ಸಂಖ್ಯೆ, 5 ಲಕ್ಷಕ್ಕೆ ಏರಿಕೆಯಾಗಲು 39 ದಿನ ತೆಗೆದುಕೊಂಡಿತ್ತು. ನಂತರದ 5 ಲಕ್ಷ ಪ್ರಕರಣಗಳು 20 ದಿನಗಳಲ್ಲಿ ವರದಿಯಾಗಿದ್ದವು. ಬಳಿಕ ಪ್ರಕರಣಗಳ ಸಂಖ್ಯೆ 12 ದಿನಗಳಲ್ಲಿ 10 ಲಕ್ಷದಿಂದ 15 ಲಕ್ಷಕ್ಕೆ ಏರಿಕೆಯಾಗಿತ್ತು. ನಂತರ 9 ದಿನಗಳಲ್ಲಿ ಈ ಸಂಖ್ಯೆ 20 ಲಕ್ಷ ಮುಟ್ಟಿತ್ತು. 8 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ20ರಿಂದ 25 ಲಕ್ಷ ಹಾಗೂ ಮತ್ತೆ 8 ದಿನಗಳಲ್ಲಿ 25ರಿಂದ 30 ಲಕ್ಷಕ್ಕೆ ಏರಿಕೆಯಾಗಿದೆ. ಪ್ರತಿದಿನ 50 ಸಾವಿರಕ್ಕೂ ಅಧಿಕ ರೋಗಿಗಳು ಗುಣಮುಖರಾಗುತ್ತಿರುವುದರಿಂದ ಸಕ್ರಿಯ ಪ್ರಕರಣಗಳು ವೇಗವಾಗಿ ಏರಿಕೆಯಾಗುತ್ತಿಲ್ಲ.
ಹೊಸದಾಗಿ 23 ಸಾವಿರ ಪ್ರಕರಣಗಳು ವರದಿಯಾಗಿದ್ದು, ಪ್ರಕರಣಗಳ ಸಂಖ್ಯೆ 30.66 ಲಕ್ಷಕ್ಕೆ ಏರಿಕೆಯಾಗಿದೆ. ಹೊಸದಾಗಿ 210 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 57,000ಕ್ಕಿಂತ ಅಧಿಕವಾಗಿದೆ. ಈವರೆಗೆ 22.96 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ದೇಶದ ಕರೊನಾ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 2.34 ಇದ್ದರೆ, ಮಹಾರಾಷ್ಟ್ರದಲ್ಲಿನ ಪ್ರಮಾಣ ಶೇಕಡ 4.41 ಇದೆ.
ವರ್ಷಾಂತ್ಯಕ್ಕೆ ಕರೊನಾ ಸೋಂಕಿಗೆ ಲಸಿಕೆ ಸಿದ್ಧ:ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ 4ರಿಂದ 5 ತಿಂಗಳಲ್ಲಿ ಅಂದರೆ ವರ್ಷಾಂತ್ಯಕ್ಕೆ ಕರೊನಾಗೆ ಲಸಿಕೆ ಸಿದ್ಧವಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ. ದೇಶದಲ್ಲಿ ಸಿದ್ಧವಾಗುತ್ತಿರುವ ಮೂರು ಲಸಿಕೆಗಳಲ್ಲಿ ಒಂದು ಲಸಿಕೆಯ ಪ್ರಯೋಗ ಮೂರನೇ ಹಂತಕ್ಕೆ ಪ್ರವೇಶಿಸಿದ್ದು, ಆರಂಭಿಕ ವರದಿ ಉತ್ತೇಜನಕಾರಿಯಾಗಿದೆ. ಇತರ ಎರಡು ಲಸಿಕೆಗಳು ಒಂದು ಅಥವಾ ಎರಡನೇ ಹಂತದ ಪರೀಕ್ಷೆಯಲ್ಲಿ ಇವೆ ಎಂದಿದ್ದಾರೆ. ವರದಿಗಳ ಪ್ರಕಾರ ಮೂರನೇ ಹಂತ ಪ್ರವೇಶಿಸಿರುವ ಲಸಿಕೆ ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಎಂದು ತಿಳಿದುಬಂದಿದ್ದು, ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ಮತ್ತು ಪುಣೆಯ ಸೀರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್​ಐಐ) ಸಹಭಾಗಿತ್ವದೊಂದಿಗೆ ಸಿದ್ಧಪಡಿಸಿರುವ ಔಷಧವು ಮತ್ತೊಂದು ಲಸಿಕೆಯಾಗಿದ್ದು, ಜೈಡುಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿರುವುದು ಮೂರನೇ ಲಸಿಕೆಯಾಗಿದೆ.
ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ; ಭಾರತೀಯ ರೂಪಾಯಿಗೆಷ್ಟು ಮೌಲ್ಯ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 9 =
Remember me
