ನವದೆಹಲಿ:ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಬಹುರಾಷ್ಟ್ರೀಯ ಕೆಮಿಕಲ್​ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿ ಒಂದು ಮಗು ಸೇರಿದಂತೆ 9 ಮಂದಿ ಸಾವಿಗೀಡಾಗಿದ್ದು, ಸುಮಾರು 200 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನಾ ಸ್ಥಳದಲ್ಲಿ ಆಂಬುಲೆನ್ಸ್​, ಅಗ್ನಿಶಾಮಕ ವಾಹನ ಮತ್ತು ಪೊಲೀಸ್ ಸಿಬ್ಬಂದಿ ಬೀಡುಬಿಟ್ಟಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದಾಗ ಮೂವರು ಮಾತ್ರ ಸಾವಿಗೀಡಾಗಿದ್ದರು, ಇದೀಗ ಸಾವಿನ ಸಂಖ್ಯೆ 9ಕ್ಕೇರಿದೆ.
ಇದನ್ನೂ ಓದಿ:PHOTOS: ಕಾಂಗೋ ಗೊರಿಲ್ಲಾಗಳ 12 ರಕ್ಷಕರನ್ನೇ ಕೊಂದು ಹಾಕಿದ್ರು ಬಂಡುಕೋರರು!
ಎಲ್​.ಜಿ ಪಾಲಿಮರ್ಸ್​ ಇಂಡಿಯಾ ಪ್ರವೈಟ್​ ಲಿಮಿಟೆಡ್​ ಕೆಮಿಕಲ್​ ಫ್ಯಾಕ್ಟರಿಯು ವಿಶಾಖಪಟ್ಟಣಂ ಜಿಲ್ಲೆ ಆರ್​ಆರ್​ ವೆಂಕಟಪುರಂ ಸಮೀಪವಿದೆ. ಅವಘಡದ ಬಗ್ಗೆ ಮಾತನಾಡಿರುವ ಸ್ಥಳೀಯರು ವಿಷಾನಿಲ ಸೋರಿಕೆಯಿಂದ ಮೊದಲು ಕಣ್ಣು ಮಂಜಾಗಲು ಆರಂಭವಾಯಿತು. ಬಳಿಕ ಉಸಿರಾಡಲು ತುಂಬಾ ಸಮಸ್ಯೆಯಾಯಿತು ಎಂದು ಅಧಿಕಾರಿ ಬಳಿ ತಿಳಿಸಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದರ ನಡುವೆ ಗ್ರೇಟರ್​ ವಿಶಾಖಪಟ್ಟಣಂ ಮುನ್ಸಿಪಾಲ್​ ಕಾರ್ಪೊರೇಷನ್ ಟ್ವೀಟ್​ ಮಾಡಿ ಮುಂಜಾಗ್ರತ ಕ್ರಮವಾಗಿ ಕಾರ್ಖಾನೆ ಸಮೀಪದ ನಿವಾಸಿಗಳು ಮನೆಯಿಂದ ಹೊರಬರದಂತೆ ಮನವಿ ಮಾಡಿಕೊಂಡಿದೆ.
ಇದನ್ನೂ ಓದಿ:ಪಾಕ್ ಮಾಜಿ​ ಕ್ರಿಕೆಟರ್​ ಅಬ್ದುಲ್​ ರಜಾಕ್ ಮದುವೆಯಾಗಲಿದ್ದಾರಾ ತಮನ್ನಾ? ಮಿಲ್ಕಿ ಬ್ಯೂಟಿ ಹೇಳಿದ್ದೇನು?​
ಘಟನೆಯ ಪರಿಸ್ಥಿತಿಯನ್ನು ಕೆಲವರು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿದ್ದು, ಅದರಲ್ಲಿ ನೂರಾರು ಮಂದಿ ಅಸ್ವಸ್ಥಗೊಂಡು ರಸ್ತೆಯಲ್ಲಿ ಬಿದ್ದಿದ್ದು, ಆಂಬುಲೆನ್ಸ್​ಗಾಗಿ ಕಾಯುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೆ, ಕಾರ್ಖಾನೆಯ ಎಚ್ಚರಿಕೆ ಗಂಟೆಯು ಹಿನ್ನೆಲೆಯಲ್ಲಿ ಕೇಳಿಬರುತ್ತಿದ್ದು, ಉಸಿರಾಟದ ತೊಂದರೆಯಲ್ಲಿರುವವರನ್ನು ಮಾಸ್ಕ್​ ಧರಿಸಿರುವ ಜನರು ಹೊರಕ್ಕೆ ಸಾಗಿಸುತ್ತಿರುವುದು ವಿಡಿಯೋದಲ್ಲಿದೆ. ಆಂಬುಲೆನ್ಸ್​ ಬರೋವರೆಗೂ ಡಿವೈಡರ್​ ಮೇಲೆ ಅಸ್ವಸ್ಥಗೊಂಡವರನ್ನು ಕೂರಿಸಲಾಯಿತು.(ಏಜೆನ್ಸೀಸ್​)
https://twitter.com/AudaciousQuest/status/1258265147040292866?s=20
Pained that yet another tragedy has hit Vizag amidst the battle against#Covid19. It is now, when we must work harder than before to ensure safety for all.
I request my Youth Congress family to provide every possible assistance to help those affected by the#VizagGasLeak.pic.twitter.com/cmzUVfqdeX
— Srinivas BV (@srinivasiyc)May 7, 2020

ಪರ್ಲ್​ ಹಾರ್ಬರ್​, ವರ್ಲ್ಡ್​ ಟ್ರೇಡ್​ ಸೆಂಟರ್​ ಅಟ್ಯಾಕ್​​ಗಳನ್ನು ಮೀರಿಸುತ್ತಿದೆ ಕೊವಿಡ್​-19ರ ದಾಳಿ ಎಂದ್ರು ಟ್ರಂಪ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − five =
Remember me
