ಇಡೀ ಜಗತ್ತುಅನೇಕ ಅಚ್ಚರಿಗಳು ಆಗರ ಮತ್ತು ನಿಗೂಢಗಳ ಸಾಗರ. ವಿಶ್ವದಲ್ಲಿ ಇನ್ನೂ ತಿಳಿಯಲಾಗದ ಅದೆಷ್ಟೋ ರಹಸ್ಯಗಳಿವೆ. ಅವುಗಳನ್ನು ತಿಳಿದಾಗ ನಮ್ಮ ಕಣ್ಣುಗಳ ಹುಬ್ಬು ಒಂದು ಕ್ಷಣ ಮೇಲೇರುತ್ತದೆ. ಅಂಥದ್ದೇ ನಿಗೂಢ ತಾಣಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ. ಈ ನಿಗೂಢ ಸ್ಥಳಗಳನ್ನು ಗೂಗಲ್​ ಮ್ಯಾಪ್​ನಲ್ಲೂ ತೋರಿಸಿಲ್ಲ. ಯಾಕೆ ಎಂಬುದನ್ನು ನಾವೀಗ ವಿವರಿಸುತ್ತೇವೆ. ಮುಂದೆ ಓದಿ.
ಟೆಕ್ನಾಲಜಿ ಅಭಿವೃದ್ಧಿಗೊಂಡ ಬಳಿಕ ಕುಳಿತಲ್ಲಿಯೇ ಇಡೀ ಜಗತ್ತನ್ನು ನೋಡಬಹುದು. ಗೂಗಲ್​ ಮ್ಯಾಪ್​ ಅದಕ್ಕೆ ಸೇತುವೆಯಾಗಿದೆ. ಯಾವ ಪ್ರದೇಶಕ್ಕೆ ಹೇಗೆ ಹೋಗಬೇಕು ಮತ್ತು ಅದು ಹೇಗಿದೆ ಎಂಬುದನ್ನು ಗೂಗಲ್​ ಮ್ಯಾಪ್​ ನಿಖರವಾಗಿ ತೋರಿಸುತ್ತದೆ. ಆದರೆ, ಕೆಲವೊಮ್ಮೆ ಎಡವಟ್ಟುಗಳಾಗಿರುವುದನ್ನು ನೋಡಿದ್ದೇವೆ. ಅದೇನೆ ಇರಲಿ ಅನೇಕ ರಹಸ್ಯ ಪ್ರದೇಶಗಳಿದ್ದು ಅವುಗಳನ್ನು ಗೂಗಲ್​ ಮ್ಯಾಪ್​ ಕೂಡ ತೋರಿಸಿಲ್ಲ. ಅದಕ್ಕೆ ಕಾರಣ ಏನೆಂದರೆ, ವಿವಿಧ ದೇಶದಲ್ಲಿರುವ ಈ ಸ್ಥಳಗಳು ಭದ್ರತೆ ಮತ್ತು ವಿವಿಧ ಕಾರಣಗಳಿಂದ ಗೂಗಲ್​ ಮ್ಯಾಪ್​ನಲ್ಲಿ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಅದು ಯಾವ ಸ್ಥಳಗಳು ಎಂದು ನಾವೀಗ ನೋಡೋಣ.
ಇದನ್ನೂ ಓದಿ:ಅಮೆರಿಕಾದಲ್ಲಿ ‘ಲಿಯೋ’ ಕಮಾಲ್​; ರಿಲೀಸ್​ಗೂ ಮುನ್ನವೇ ದಳಪತಿ ವಿಜಯ್​ ಚಿತ್ರಕ್ಕೆ ಸಿಕ್ತು ಭರ್ಜರಿ ರೆಸ್ಪಾನ್ಸ್​!​​

ಮಾರ್ಕ್ಯೂ ಪರಮಾಣು ಸಂಶೋಧನಾ ಕೇಂದ್ರವು ಫ್ರಾನ್ಸ್‌ನ ಉನ್ನತ ಪರಮಾಣು ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿದೆ. ನೀವು ಈ ಮಾರ್ಕೂಲ್ ನ್ಯೂಕ್ಲಿಯರ್ ಸೈಟ್ ಅನ್ನು ಗೂಗಲ್​ ಮ್ಯಾಪ್​ನಲ್ಲಿ ಹುಡುಕಿದರೆ, ಇಡೀ ಪ್ರದೇಶವು ಪಿಕ್ಸಲೇಟ್ ಆಗಿದೆ. ಫ್ರಾನ್ಸ್​ ಮನವಿ ಮೇರೆಗೆ ಗೂಗಲ್​ ಆ ಪ್ರದೇಶವನ್ನು ಪಿಕ್ಸಲೇಟ್ ಮಾಡಿದೆ.

ಅಮ್ಚಿತ್ಕಾ ದ್ವೀಪವನ್ನು 1950ರ ದಶಕದ ಅಂತ್ಯದಲ್ಲಿ ಭೂಗತ ಪರಮಾಣು ಪರೀಕ್ಷೆಗಾಗಿ ಅಮೆರಿಕದ ಪರಮಾಣು ಶಕ್ತಿ ಆಯೋಗವು ಆಯ್ಕೆ ಮಾಡಿತು. ಅಲ್ಲಿ 3 ಭೂಗತ ಪರಮಾಣು ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಹೇಳಲಾಗುತ್ತದೆ. ಅಲಾಸ್ಕಾದ ಅಮ್ಚಿತ್ಕಾ ದ್ವೀಪವು ಗೂಗಲ್​ ನಕ್ಷೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಈಗಲೂ ಸಂರಕ್ಷಿತ ಪ್ರದೇಶವಾಗಿರುವ ಈ ದ್ವೀಪದಲ್ಲಿ ವಿಕಿರಣಶೀಲ ವಸ್ತುಗಳ ಸೋರಿಕೆಗಾಗಿ ನಿರಂತರ ನಿಗಾ ಇಡಲಾಗಿದೆ.

ಜೀನೆಟ್ ದ್ವೀಪವು ರಷ್ಯಾದ ಪೂರ್ವ ಸೈಬೀರಿಯನ್ ಸಮುದ್ರದಲ್ಲಿದೆ. ರಷ್ಯಾದ ಮಿಲಿಟರಿ ನೆಲೆ ಎಂದೇ ಪರಿಗಣಿಸಲ್ಪಟ್ಟಿರುವ ಕಾರಣ ಈ ಪ್ರದೇಶವನ್ನು ಗೂಗಲ್ ನಕ್ಷೆಗಳಿಂದ ಸಂಪೂರ್ಣವಾಗಿ ಮರೆಮಾಡಲಾಗಿದೆ. ಈ ಪ್ರದೇಶವನ್ನು ಹುಡುಕಲು ನೀವು ಗೂಗಲ್​ ಮ್ಯಾಪ್​ನಲ್ಲಿ ಟೈಪ್ ಮಾಡಿದರೆ, ಅಂತಹ ಸ್ಥಳವು ಅಸ್ತಿತ್ವದಲ್ಲಿದೆ ಎಂದು ಅದು ನಿಮಗೆ ತೋರಿಸುವುದಿಲ್ಲ. ಜೀನೆಟ್ ದ್ವೀಪವು ರಷ್ಯಾದ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.

ಕಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಗ್ರೀಸ್‌ನ ಕಾಸ್ ದ್ವೀಪದಲ್ಲಿದೆ. ಬೇಸಿಗೆಯಲ್ಲಿ ಪ್ರವಾಸಿಗರ ದಂದು ಹರಿದು ಬರುವುದರಿಂದ ಈ ದ್ವೀಪವು ಸಡಗರದ ಹಬ್ಬದ ಪ್ರದೇಶವಾಗಿ ಬದಲಾಗುತ್ತದೆ. ಈ ವಿಮಾನ ನಿಲ್ದಾಣವು ಗೂಗಲ್​ ಮ್ಯಾಪ್​ಗಳಲ್ಲಿ ಬಹಳ ಮಸುಕಾಗಿ ಗೋಚರಿಸುತ್ತದೆ. ವಿವಿಧ ದೇಶಗಳ ಪ್ರವಾಸಿಗರು ಸಹ ಇಲ್ಲಿ ಸಮಯ ಕಳೆಯುತ್ತಾರೆ.
ಇದನ್ನೂ ಓದಿ:ದಂಪತಿಗೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು, ಪತಿ ಸ್ಥಿತಿ ಗಂಭೀರ: ಹಾಸ್ಯನಟ ನಾಗಭೂಷಣ್ ಪೊಲೀಸ್​ ವಶಕ್ಕೆ

ಈ ಪರಮಾಣು ರಿಯಾಕ್ಟರ್ ಫ್ರಾನ್ಸ್‌ನ ಲಕ್ಸೆಂಬರ್ಗ್ ನಗರದ ಸಮೀಪವಿರುವ ಗ್ರ್ಯಾಂಡ್ ಎಸ್ಟ್‌ನಲ್ಲಿದೆ. ಕ್ಯಾಟೆನೊಮ್ ಪರಮಾಣು ವಿದ್ಯುತ್ ಸ್ಥಾವರವು ವಿಶ್ವದ 9 ನೇ ಅತಿದೊಡ್ಡ ಪರಮಾಣು ರಿಯಾಕ್ಟರ್ ಆಗಿದೆ. ಭದ್ರತಾ ಕಾರಣಗಳಿಗಾಗಿ, ಇಡೀ ಪ್ರದೇಶವನ್ನು ಪಿಕ್ಸಲೇಟ್ ಮಾಡಲಾಗಿದೆ. ಆದ್ದರಿಂದ ಈ ಪರಮಾಣು ರಿಯಾಕ್ಟರ್ ಅನ್ನು ಗೂಗಲ್​ ಮ್ಯಾಪ್​ನಲ್ಲಿ ನೋಡಲು ಆಗುವುದಿಲ್ಲ.(ಏಜೆನ್ಸೀಸ್​)
Papaya Seeds benefits: ಪರಂಗಿ ಬೀಜಗಳ ಪ್ರಯೋಜನಗಳನ್ನು ತಿಳಿದ್ರೆ ನೀವು ಖಂಡಿತ ಎಸೆಯುವುದಿಲ್ಲ!

ವೀರಶೈವ-ಲಿಂಗಾಯತರ ವಿರುದ್ಧ ಸಿದ್ದರಾಮಯ್ಯ ಪದೇ ಪದೇ ದ್ವೇಷ ಕಾರುತ್ತಿದ್ದಾರೆ: ಬಿಜೆಪಿ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಟ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:14 − 8 =
Remember me
