ನವದೆಹಲಿ:ಕರೊನಾದಿಂದ ಭಾರಿ ಕಂಗೆಟ್ಟಿರುವ ಕ್ಷೇತ್ರವೆಂದರೆ ಹೋಟೆಲ್​ ಉದ್ಯಮ. ಜನ ಮನೆಯಿಂದಲೇ ಹೊರಗೆ ಬರಬೇಡಿ ಎಂದ ಮೇಲೆ ಊರಿಂದ ಊರಿಗೆ ಹೋಗಿ ಹೋಟೆಲ್​ಗಳಲ್ಲಿ ಉಳಿದುಕೊಳ್ಳೋದಾದರೂ ಯಾರು? ಪ್ರವಾಸೋದ್ಯಮ ಕ್ಷೇತ್ರ ಚೇತರಿಸಿಕೊಳ್ಳುವರೆಗೆ ಹೋಟೆಲ್​ ಉದ್ಯಮ ಕ್ಷೇತ್ರ ಚೇತರಿಸಿಕೊಳ್ಳುವುದು ಅನುಮಾನ.
ಕೆಲ ಹೋಟೆಲ್​ಗಳನ್ನು ಕೋವಿಡ್​ ರೋಗಿಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ, ಎಷ್ಟು ದಿನಗಳವರೆಗೆ ಹೋಟೆಲ್​ಗಳನ್ನು ಬಂದ್ ಮಾಡಿಕೊಂಡಿರುವುದು ಎಂದುಕೊಂಡು ತೆರೆದ ಮಾಲೀಕರು, ಜನರೇ ಬಾರದಿರುವುದರಿಮದ ಕಂಗಾಲಾಗಿದ್ದಾರೆ.
ಇದನ್ನೂ ಓದಿ;ಬಯಲು ಚಿತ್ರಮಂದಿರಗಳಾಗುತ್ತಿವೆ ಸೂಪರ್​ ಮಾರ್ಕೆಟ್​ನ ಪಾರ್ಕಿಂಗ್​ ತಾಣಗಳು
ಹೀಗಾಗಿ ಕೆಲ ಫೈವ್​ಸ್ಟಾರ್​ ಹೋಟೆಲ್​ಗಳು ಹೊಸ ತಂತ್ರ ಅನುಸರಿಸುತ್ತಿವೆ. ಜೈಪುರ್​ನಲ್ಲಿ ಈ ಐಷಾರಾಮಿ ಹೋಟೆಲ್​ಗಳು ಗ್ರಾಹಕರ ಮನೆಗೆ ಊಟವನ್ನು ಕಳುಹಿಸುತ್ತಿವೆ. ಅದು ಕೂಡ ಶೇ.50 ಡಿಸ್ಕೌಂಟ್​ನಲ್ಲಿ ಎಂದು ಪ್ರಚಾರ ಮಾಡುತ್ತಿವೆ.
ಐಷಾರಾಮಿ ಕಾರಿನಲ್ಲಿ, ಬಾಣಸಿಗ ಜತೆಗೇ ಊಟವನ್ನು ಕಳುಹಿಸಲಾಗುತ್ತದೆ ಎಂದು ಹೋಟೆಲ್​ ಅಧಿಕಾರಿಗಳು ಹೇಳುತ್ತಾರೆ. ಇದು ಗ್ರಾಹಕರ ಅಭಿರುಚಿಯನ್ನು ಅರಿಯುವ ಪ್ರಯತ್ನ ಎನ್ನುತ್ತಾರೆ.
ಇದನ್ನೂ ಓದಿ;ಆರೇ ತಿಂಗಳಲ್ಲಿ ಅಂಬಾನಿ ಮೀರಿಸುವಂತೆ ಬೆಳೆದ; ಬಳಿಕ ಹುದ್ದೆಯನ್ನೇ ತೊರೆದ ಜಾಕ್​ ಮಾ ಪ್ರತಿಸ್ಪರ್ಧಿ
ಭಾರಿ ದುಬಾರಿ ಎಂದುಕೊಂಡು ಪಂಚತಾರಾ ಹೋಟೆಲ್​ಗೆ ಹೋಗದವರು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂಬುದು ಹೋಟೆಲ್​ನವರ ವಾದ. ಹಾಲಿಡೇ ಇನ್​, ಕ್ಲಾರ್ಕ್ಸ್​ ಅಮೇರ್​ ಹೋಟೆಲ್​ ಸೇರಿ ಹಲವು ಫೈವ್​ ಸ್ಟಾರ್​ ಹೋಟೆಲ್​ಗಳು ಇಂಥ ಸೇವೆಗಳನ್ನು ಒದಗಿಸುತ್ತಿವೆ. ಇಷ್ಟೇ ಅಲ್ಲದೇ, ಮನೆ ಬಾಗಿಲಿಗೆ ಲಾಂಡ್ರಿ ಸೇವೆಯನ್ನು ನೀಡುತ್ತಿವೆ.
ಕರೊನಾ ಸೋಂಕು ಖಚಿತವಾದರೆ… ಮುಂದೇನು? ಈ ವಿಷಯಗಳನ್ನು ಅಗತ್ಯವಾಗಿ ತಿಳಿದಿರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − seven =
Remember me
