ಮಹಾರಾಷ್ಟ್ರದ ರಾಯ್​ಗಢ್​​ನಲ್ಲಿ 5 ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ದುರ್ಘಟನೆ ನಡೆದಿದೆ. ಅವಶೇಷಗಳಡಿ ಸುಮಾರು 70ಮಂದಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಗಾಯಗೊಂಡ 15 ಜನರನ್ನು ರಕ್ಷಿಸಿ, ಆಸ್ಪತ್ರೆಗೆ ಸಾಗಿಸಲಾಗಿದೆ.
ಇದು ಆರು ವರ್ಷ ಹಳೇ ಕಟ್ಟಡವಾಗಿದ್ದು, ವಿಪರೀತ ಮಳೆಯಿಂದಾಗಿ ಕುಸಿದುಬಿದ್ದಿದೆ ಎಂದು ಹೇಳಲಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳ ಹಾಗೂ ಎನ್​ಡಿಆರ್​ಎಫ್​ ಸಿಬ್ಬಂದಿ ಹಾಜರಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.ಇದನ್ನೂ ಓದಿ:ರೆಸಾರ್ಟ್​​ನಲ್ಲಿ ನಗ್ನವಾಗಿ ಮಜಾ ಮಾಡಿದ ಅನೇಕರಲ್ಲಿ ಕರೊನಾ; ಬಟ್ಟೆ ಬೇಡದಿದ್ರೂ ಮಾಸ್ಕ್​ ಇರಲಿ ಎಂದ ಆರೋಗ್ಯ ಇಲಾಖೆ
ಕಾಜಲ್ಪುರ ಪ್ರದೇಶದಲ್ಲಿರುವ ಈ ವಸತಿ ಕಟ್ಟಡದಲ್ಲಿ 45 ಫ್ಲಾಟ್​ಗಳು ಇದ್ದು, 100ಕ್ಕೂ ಹೆಚ್ಚು ಮಂದಿ ವಾಸವಾಗಿದ್ದರು. ಇಂದು ಸಂಜೆ 7 ಗಂಟೆ ಹೊತ್ತಿಗೆ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೃಹ ಸಚಿವ ಅಮಿತ್​ ಷಾ ಅವರು ಟ್ವೀಟ್ ಮಾಡಿ, ಮಹಾರಾಷ್ಟ್ರದ ರಾಯ್​ಗಢ್​​ನಲ್ಲಿ ವಸತಿ ಕಟ್ಟಡ ಕುಸಿದುಬಿದ್ದಿದ್ದು ಒಂದು ದುರಂತ. ಎನ್​ಡಿಆರ್​ಎಫ್​ ಡಿಜಿಯೊಂದಿಗೆ ಚರ್ಚೆ ನಡೆಸಲಾಗಿದೆ. ಅಲ್ಲಿನ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡಲು ಕೇಂದ್ರ ಸಿದ್ಧವಾಗಿದೆ. ಎಷ್ಟಾಗತ್ತೋ ಅಷ್ಟು ಶೀಘ್ರವೇ ಜನರ ರಕ್ಷಣಾ ಕಾರ್ಯಾಚರಣೆ ನಡೆಯಬೇಕು. ಪ್ರತಿಯೊಬ್ಬರೂ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ಸುನೀಲ್ ಶೆಟ್ಟಿ ಪುತ್ರಿ ಪೋಸ್ಟ್‌ಗೆ ಮತ್ತೆ ಕಮೆಂಟ್ ಹಾಕಿ ಸುದ್ದಿಯಾದ ಕ್ರಿಕೆಟಿಗ ಕೆಎಲ್ ರಾಹುಲ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 12 =
Remember me
