ಕೊಲ್ಲಂ:ಕೇರಳದ ಕೊಲ್ಲಂನ ಕೊಟ್ಟನ್‌ಕುಲಂಗರ ದೇವಸ್ಥಾನದಲ್ಲಿ ನಡೆದ ಪ್ರಸಿದ್ಧ ‘ಚಮಯವಿಳಕ್ಕು’ ಉತ್ಸವದ ವೇಳೆ ಭಕ್ತರು ರಥವನ್ನು ಎಳೆಯುವ ಸಂದರ್ಭದಲ್ಲಿ ದೊಡ್ಡ ಚಕ್ರಗಳ ಅಡಿ ಸಿಲುಕಿ ಬಾಲಕಿ ಮೃತಪಟ್ಟಿದ್ದಾಳೆ. ಚವರ ನಿವಾಸಿ ದಂಪತಿಯ ಪುತ್ರಿ ಕ್ಷೇತ್ರ ಪ್ರಾಣ ಕಳೆದುಕೊಂಡ ಬಾಲಕಿಯಾಗಿದ್ದಾಳೆ.
ಇದನ್ನೂ ಓದಿ:ತನ್ನನ್ನು ಹುಚ್ಚ ಎಂದಿದ್ದಕ್ಕೆ ಮಹಿಳೆಗೆ ನಡುರಸ್ತೆಯಲ್ಲಿ ಚಾಕುವಿನಿಂದ ಇರಿದ ವ್ಯಕ್ತಿ!
ಮಾರ್ಚ್​ 24ರಂದು ರಾತ್ರಿ 11.30ರ ವೇಳೆಗೆ ಅಪಘಾತ ಸಂಭವಿಸಿದೆ. ಮಗು ತನ್ನ ಪೋಷಕರೊಂದಿಗೆ ದೇವಸ್ಥಾನಕ್ಕೆ ಬಂದಿದ್ದಳು. ಪೋಷಕರು ಪೊಲೀಸರ ಸಹಾಯ ಪಡೆದು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದರೂ ಕೂಡ ಮಗವನ್ನು ಉಳಿಸಿಕೊಳ್ಳಲಾಗಲಿಲ್ಲ.
ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪುರುಷರು ಮಹಿಳೆಯರಂತೆ ವೇಷ ಧರಿಸಿ ಪ್ರಾರ್ಥನೆ ಸಲ್ಲಿಸುವ ರಾಜ್ಯದಲ್ಲಿ ವಾರ್ಷಿಕ ‘ಚಮಯವಿಳಕ್ಕು’ ಹಬ್ಬ ಮಹತ್ವದ್ದಾಗಿದೆ.
ದರೋಡೆಕೋರರು ಎಂದು ತಪ್ಪಾಗಿ ಭಾವಿಸಿ ತನ್ನ ಇಬ್ಬರು ಸ್ನೇಹಿತರನ್ನು ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.
ದೆಹಲಿಯ ರಣಹೊಲ್ಲಾ ಪ್ರದೇಶದಲ್ಲಿ ಕಳೆದ ಶುಕ್ರವಾರ ರಾಜೇಶ್ ಯಾದವ್ ಮತ್ತು ಮುಖೇಶ್ ಸಿಂಗ್ ಎಂಬುವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ನಾಲ್ವರು ಸ್ನೇಹಿತರನ್ನು ಮಾರ್ಚ್ 15 ರಂದು ಇಬ್ಬರು ವ್ಯಕ್ತಿಗಳು ತಮ್ಮ ಸ್ನೇಹಿತರನ್ನು ದರೋಡೆ ಮಾಡಿದ್ದರು. ಅದಕ್ಕೆ ಪಾಠ ಕಲಿಸಬೇಕೆಂದು ನಾಲ್ಕು ಮಂದಿ ದರೋಡೆಕೋರರನ್ನು ಹುಡುಕಲು ಪ್ರಾರಂಭಿಸಿದ್ದರು. ಎರಡು ದಿನಗಳ ನಂತರ ದರೋಡೆಕೋರರು ಆ ಪ್ರದೇಶದ ಬಾರ್​​ವೊಂದರಲ್ಲಿ ಮದ್ಯಪಾನ ಮಾಡುತ್ತಿದ್ದರೆಂಬ ಮಾಹಿತಿ ಅವರಿಗೆ ಸಿಕ್ಕಿತ್ತು.
ದರೋಡೆಕೋರರ ಸಹಚರರು ಎಂದು ಭಾವಿಸಿ ನಾಲ್ವರು ಆರೋಪಿಗಳು ರಾಜೇಶ್​ ಯಾದವ್​ ಮತ್ತು ಮುಕೇಶ್​ ಸಿಂಗ್ ಮೇಲೆ ಚಾಕು ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ರಾಜೇಶ್ ಮತ್ತು ಮುಖೇಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಬರುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.  ಗೌರವ್ ಕುಮಾರ್, ಕೇಶ್ರಿ ಕುಮಾರ್ ಪಾಂಡೆ, ಸಂದೇಶ್ ಕುಮಾ ಮತ್ತು ಗೌರವ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತನ್ನನ್ನು ಹುಚ್ಚ ಎಂದಿದ್ದಕ್ಕೆ ಮಹಿಳೆಗೆ ನಡುರಸ್ತೆಯಲ್ಲಿ ಚಾಕುವಿನಿಂದ ಇರಿದ ವ್ಯಕ್ತಿ!

ದೇ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − five =
Remember me
