ಬೆಂಗಳೂರು:ಎರಡು ತಿಂಗಳ ಲಾಕ್​ಡೌನ್​ ಯಾರದ್ಯಾರದ್ದೋ ಜೀವನದಲ್ಲಿ ಏನೇನೋ ಆವಾಂತರಗಳನ್ನೂ ಮಾಡಿಸಿದೆ, ಜತೆಗೆ ಕೆಲವರ ಜೀವನದಲ್ಲಿ ಒಳ್ಳೆಯದನ್ನೂ ಮಾಡಿಸಿದೆ.
ಅದರಲ್ಲಿಯೂ ಲಾಕ್​ಡೌನ್​ಗಿಂತ ಸ್ವಲ್ಪ ಮುಂದೆ ಕೆಲಸದ ನಿಮಿತ್ತ ಯಾವುದ್ಯಾವುದೋ ಸ್ಥಳಗಳಲ್ಲಿ ಸಿಲುಕಿಕೊಂಡವರ ಕಥೆಯಂತೂ ಹೇಳುವುದೇ ಬೇಡ. ಅವರಿಗೆಲ್ಲಾ ನಿರಾಳ ಎಂಬಂತೆ ಇದೀಗ ಲಾಕ್​ಡೌನ್​ ಸಡಲಿಕೆಯಾಗಿದೆ. ರೈಲು, ಬಸ್ಸುಗಳು ಓಡಾಟ ಆರಂಭಿಸಿವೆ.
ಇಂದಿನಿಂದ ದೇಶೀಯ ವಿಮಾನದ ಹಾರಾಟ ಆರಂಭವಾಗಿದೆ. ಮೊದಲನೆಯ ದಿನವೇ ಅಪರೂಪದ ಘಟನೆಗೆ ವಿಮಾನ ಹಾರಾಟ ಸಾಕ್ಷಿಯಾಗಿದೆ. ಅದೇ ಐದು ವರ್ಷದ ಪುಟಾಣಿಯೊಬ್ಬ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಘಟನೆ ಇದು.
ಇದನ್ನೂ ಓದಿ:VIDEO: ಟಿಕ್​ಟಾಕ್​ನಲ್ಲಿ ನಾಯಿಗೆ ಚಿತ್ರಹಿಂಸೆ: ಯುವಕರ ಹಿಡಿದುಕೊಟ್ಟರೆ ₹ 50 ಸಾವಿರ ಬಹುಮಾನ!’
ಹೌದು. ಲಾಕ್​ಡೌನ್​ ಹಿನ್ನೆಲೆಯಲ್ಲಿ ಐದು ವರ್ಷದ ಬಾಲಕ ವಿವಾಂತ್ ಶರ್ಮಾ ದೆಹಲಿಯ ಅಜ್ಜಿಯ ಮನೆಯಲ್ಲಿಯೇ ಲಾಕ್​ ಆಗಿಬಿಟ್ಟಿದ್ದ. ಎರಡು ತಿಂಗಳಿನಿಂದ ತನ್ನ ಅಪ್ಪ-ಅಮ್ಮನನ್ನು ಯಾವಾಗ ಕಾಣುವೆನೋ ಎಂಬ ತವಕದಲ್ಲಿದ್ದ. ಇದೀಗ ಲಾಕ್​ಡೌನ್​ ಸಡಿಲಿಕೆಯಾಗಿ ವಿಮಾನ ಹಾರಾಟ ಆರಂಭಿಸುತ್ತಿದ್ದಂತೆಯೇ ವಿಮಾನದ ಮೂಲಕ ಒಂಟಿ ಪ್ರಯಾಣ ಮಾಡಿದ್ದಾನೆ.
ರಾಷ್ಟ್ರ ರಾಜಧಾನಿಯಿಂದ ಬೆಂಗಳೂರಿಗೆ ಬಂದ ಮೊದಲ ವಿಮಾನದಲ್ಲಿ ಈ ಬಾಲಕ ಬಂದು ಬೆಂಗಳೂರಿನಲ್ಲಿರುವ ತನ್ನ ಪಾಲಕನರನ್ನು ಸೇರಿದ್ದಾನೆ. ಮಗನ ಬರುವಿಕೆಗಾಗಿ ವಿಮಾನ ನಿಲ್ದಾಣದಲ್ಲೇ ಕಾದುಕುಳಿತಿದ್ದ ಆತನ ತಾಯಿ ಮಂಜೀತ್ ಶರ್ಮಾ ಮಗನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ:ಮಾಜಿ ಮುಖ್ಯಮಂತ್ರಿಗೆ ವಕ್ಕರಿಸಿದ ಕರೊನಾ ಸೋಂಕು: ಕಾಂಗ್ರೆಸ್​ ಸಚಿವರಲ್ಲಿ ಎರಡನೇ ಕೇಸ್​!
ಅಜ್ಜ-ಅಜ್ಜಿಗೆ ವಯಸ್ಸಾಗಿದ್ದ ಹಿನ್ನೆಲೆಯಲ್ಲಿ ವಿಮಾನದಲ್ಲಿ ಪ್ರಯಾಣ ಮಾಡಲು ಸಾಧ್ಯವಾಗಿರಲಿಲ್ಲ. ಅಷ್ಟೇ ಅಲ್ಲದೇ ಇಲ್ಲಿ ಒಮ್ಮೆ ಬಂದರೆ ಪುನಃ ಅವರಿಗೆ ಹೋಗುವುದು ಕಷ್ಟವಾಗುತ್ತಿತ್ತು. ಆದರೆ ಪುಟಾಣಿ ವಿವಾಂತ್​ ಮಾತ್ರ ತಾನು ಅಪ್ಪ-ಅಮ್ಮನ ಬಳಿಗೆ ಹೋಗುತ್ತೇನೆ ಎಂದು ಪಟ್ಟುಹಿಡಿದಿದ್ದ. ತುಂಬಾ ಧೈರ್ಯವಂತನಾಗಿರುವ ಕಾರಣ, ಅಜ್ಜ-ಅಜ್ಜಿ ಕೂಡ ಆತನನ್ನು ಒಂಟಿಯಾಗಿ ಬಿಟ್ಟಿದ್ದಾರೆ.
ಇತ್ತ ವಿಹಾನ್ ಪಾಲಕರು ತಮ್ಮ ಮಗನನ್ನು ಬೆಂಗಳೂರಿಗೆ ವಾಪಸ್ ಕರೆತರುವಂತೆ ವಿಮಾನಯಾನ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಅಧಿಕಾರಿಗಳು ಸ್ಪಂದಿಸಿದ್ದು, ಬಾಲಕನನ್ನು ಏಕಾಂಗಿಯಾಗಿ ವಿಮಾನದಲ್ಲಿ ಕಳಿಸುವುದಕ್ಕೆ ವ್ಯವಸ್ಥೆ ಮಾಡಿದ್ದಾರೆ. ಅದರಂತೆ ಇಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಹಾನ್ ಶರ್ಮಾ ಬಂದಿಳಿಯುತ್ತಿದ್ದಂತೇ, ಅಲ್ಲಿಯವರೆಗೆ ಆತಂಕದಲ್ಲಿದ್ದ ಅಮ್ಮ ಮಗನನ್ನು ಅಪ್ಪಿ ಮುದ್ದಾಡಿದರು.(ಏಜೆನ್ಸೀಸ್​)
Karnataka:Passengers leave from Kempegowda International Airport in Bengaluru, as two flights have landed till now at the airport. A mother who came to receive her son says,"My 5-yr-old son Vihaan Sharma has travelled alone from Delhi,he has come back to Bengaluru after 3 months"pic.twitter.com/oAOsLCi7v9
— ANI (@ANI)May 25, 2020

ಮಕ್ಕಳಿಂದ ಶೇ.70ರಷ್ಟು ಫೀಸ್​ ವಸೂಲಿ ಮಾಡಿ, ಶಿಕ್ಷಕರಿಗೆ ಶೇ.70ರಷ್ಟು ಸಂಬಳ ನೀಡಿ ಎಂದ ಹೈಕೋರ್ಟ್​

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three × 4 =
Remember me
