ಸೂರತ್: ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದಲ್ಲಿ ನಿಧಿ ಸಂಗ್ರಹ ಕೆಲಸ ಭರದಿಂದ ಸಾಗಿದೆ. ರಾಮ ಭಕ್ತರಲ್ಲದೇ ದೇಶದ ಪ್ರತಿ ಹಳ್ಳಿ, ನಗರ, ಪಟ್ಟಣಗಳಲ್ಲಿ ನಿಧಿ ಸಂಗ್ರಹ ಅಭಿಯಾನಕ್ಕೆ ಅನೇಕರು ಕೈ ಜೋಡಿಸುತ್ತಿದ್ದಾರೆ.
ಈ ನಿಧಿ ಸಮರ್ಪಣೆಯಲ್ಲಿ ಅನೇಕ ಜನ ಮುಂದೆ ಬಂದು ಉತ್ಸಾಹದಿಂದ ದೇಣಿಗೆ ನೀಡುತ್ತಿದ್ದಾರೆ. ಆದರೆ ಇಲ್ಲೊಬ್ಬ 11 ರ ಬಾಲೆ ರಾಮ ಮಂದಿರ ನಿಧಿ ಸಂಗ್ರಹಣೆಗೆ ಮಾಡಿದ ಕೆಲಸವನ್ನು ಕೇಳಿದರೇ ಚಕಿತರಾಗುತ್ತೀರಾ.
ಸೂರತ್​ನ ಭವಿಕಾ ಎಂಬ ಬಾಲಕಿ ರಾಮ ಮಂದಿರ ಕಟ್ಟಲು 50 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾಳೆ. ಅರೆ ಈ ಬಾಲಕಿಗೆ ಅಷ್ಟೊಂದು ದುಡ್ಡು ಹೇಗೆ ಎಂದು ಕೇಳಿದರೆ ಖಂಡಿತ ರಾಮ ಭಕ್ತರಿಗೆ ಹೆಮ್ಮೆ ಆಗುತ್ತದೆ.
ಕಳೆದ ಒಂದು ವರ್ಷದಿಂದ ರಾಮಮಂದಿರ ನಿರ್ಮಾಣ ಕಾರ್ಯಗಳು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಮನ ಪರಮ ಭಕ್ತೆಯಾಗಿರುವ ಸೂರತ್​ನ ಭವಿಕಾ ರಾಮ ಮಂದಿರ ನಿರ್ಮಿಸಲು ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ರಾಮಯಣವನ್ನು ಕೀರ್ತನೆಗಳ ಮೂಲಕ ಸಭೆ ಸಮಾರಂಭಗಳಲ್ಲಿ ಪ್ರಚುರ ಪಡಿಸಿ ಮಂದಿರ ನಿರ್ಮಾಣಕ್ಕೆ 50 ಲಕ್ಷ ರುಪಾಯಿ ಸಂಗ್ರಹಿಸಿದ್ದಾಳೆ.
ಭವಿಕಾ ಈಗಾಗಲೇ ಈ ಹಣವನ್ನು ರಾಮಮಂದಿರ ಟ್ರಸ್ಟ್​ಗೆ ಹಸ್ತಾಂತರಿಸಿದ್ದಾಳೆ. ಕಳೆದ ಮೇ ತಿಂಗಳಿನಿಂದ ಇದಕ್ಕಾಗಿ ಸಿದ್ದತೆ ಮಾಡಿಕೊಂಡು ಲಾಕ್​ಡೌನ್ ಅಂತ್ಯಗೊಂಡ ನಂತರ ಗುಜರಾತ್​ನ ಅನೇಕ ನಗರ ಪಟ್ಟಣಗಳಲ್ಲಿ ರಾಮಾಯಣದ ರಾಮ ಕೀರ್ತನೆಗಳ ಸಮಾರಂಭವನ್ನು ಆಯೋಜಿಸಿ, ಮಂದಿರಕ್ಕಾಗಿ ನಿಧಿ ಸಂಗ್ರಹಿಸಿದ್ದಾಳೆ. ಇನ್ನು ಕೂಡ ಅನೇಕ ಕಾರ್ಯಕ್ರಮಗಳನ್ನು ಆಯೋಜಿ, ಮತ್ತಷ್ಟು ನಿಧಿ ಸಂಗ್ರಹಿಸುವ ಅಭಿಪಾಷೆಯನ್ನು ಭವಿಕಾ ಹೊಂದಿದ್ದಾಳೆ. ಭವಿಕಾಳ ಈ ಕೆಲಸಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. (ಏಜೇನ್ಸಿಸ್)
ಮಧ್ಯಪ್ರದೇಶ ಬಸ್ ದುರಂತ: 37 ಶವಗಳು ಕಾಲುವೆಯಿಂದ ಹೊರಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 20 =
Remember me
