Delhi cyber crime 50 lakh rupees deducted an old man bank account due to egg andchickenissue
ನವದೆಹಲಿ:ಗ್ರಾಹಕರು ಪ್ರತಿವಸ್ತು ಕೊಳ್ಳುವಾಗ ‘ಆಫರ್​’ ಏನಿದೆ ಎಂದು ಕೇಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಆ ವಸ್ತುವಿನ ಗುಣಮಟ್ಟ ಅಥವಾ ಖರೀದಿ ಸಂದರ್ಭ ಮೋಸ ಹೋಗುವುದರ ಬಗ್ಗೆ ಯೋಚಿಸುವುದು ಕಡಿಮೆ. ಇಲ್ಲೊಬ್ಬ ಗ್ರಾಹಕ ಸಹ ಆಫರ್​ ಆಸೆಗೆ ಬಿದ್ದು 50 ರೂ.ವ್ಯಾಪಾರಕ್ಕೆ 50 ಸಾವಿರ ರೂ.ಕಳೆದುಕೊಂಡಿದ್ದಾರೆ. ವಿವರ ಇಲ್ಲಿದೆ..
ಇದನ್ನೂ ಓದಿ:ತಿರುಪತಿ ಪಾದಚಾರಿ ಮಾರ್ಗದಲ್ಲಿ ಮತ್ತೊಮ್ಮೆ ಚಿರತೆ ಪ್ರತ್ಯಕ್ಷ!ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋಳಿ ಮೊಟ್ಟೆಗಳ ಮೇಲೆ ಆಕರ್ಷಕ ಆಫರ್‌ಗಳನ್ನು ಪಡೆಯುವ ಭರದಲ್ಲಿ 62 ವರ್ಷದ ವೃದ್ಧ ಸೈಬರ್ ವಂಚನೆಗೆ ಒಳಗಾಗಿದ್ದಾರೆ. ವಾಸ್ತವವಾಗಿ ಅವರು ಕೇವಲ 49 ರೂಪಾಯಿಗೆ ಕೋಳಿ ಅಥವಾ ಮೊಟ್ಟೆ ಎರಡರಲ್ಲಿ ಒಂದನ್ನು ತೆಗೆದುಕೊಳ್ಳುವ ಆಫರ್​ ನೋಡಿದರು. ಅದರಲ್ಲಿ 98 ರೂಪಾಯಿಗೆ ಎರಡನ್ನೂ ತೆಗೆದುಕೊಳ್ಳಬಹುದು ಎಂಬುದನ್ನೂ ಕಂಡುಕೊಂಡರು. ಕಡೆಗೆ ಆರ್ಡರ್​ ಮಾಡುವ ಭರದಲ್ಲಿ 50 ಸಾವಿರಕ್ಕೂ ಹೆಚ್ಚು ಹಣ ಕಳೆದುಕೊಂಡರು. ಕಡೆಗೆ ಕೋಳಿಯೂ ಸಿಗಲಿಲ್ಲ, ಮೊಟ್ಟೆಯೂ ಸಿಗಲಿಲ್ಲ. ನವದೆಹಲಿ ಸೈಬರ್ ಪೊಲೀಸರು ವೃದ್ಧರ ಹೇಳಿಕೆ ಮೇರೆಗೆ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಖಾತೆಯಲ್ಲಿದ್ದ 50 ಸಾವಿರಕ್ಕೂ ಹೆಚ್ಚು ಹಣ ಕಳವು:ಸಂತ್ರಸ್ತ ವೃದ್ಧ ನವದೆಹಲಿ ವಾಸಿಯಾಗಿದ್ದು, ನ.19 ರಂದು ಬೆಳಗ್ಗೆ ಕೋಳಿ ಮತ್ತು ಮೊಟ್ಟೆಗಳನ್ನು ಖರೀದಿಸಲು ವೆಬ್‌ಸೈಟ್‌ ಒಂದರಲ್ಲಿ ಆಕರ್ಷಕ ಕೊಡುಗೆ ವೀಕ್ಷಿಸಿದರು. ಕೇವಲ 49 ರೂಪಾಯಿಗೆ ಉತ್ತಮ ಪ್ರಮಾಣದ ಕೋಳಿ ಅಥವಾ ಮೊಟ್ಟೆ ಲಭ್ಯವಿತ್ತು. ಈ ವೇಳೆ ಅವರು ಎರಡನ್ನೂ ಖರೀದಿಸಲು ಬಯಸಿ ಕ್ರೆಡಿಟ್ ಕಾರ್ಡ್‌ನಿಂದ 98 ರೂ.ಪಾವತಿಸಲು ಯತ್ನಿಸಿದರು. ಕೂಡಲೇ ಅತ್ತಕಡೆಯಿಂದ ಅವರ ಮೊಬೈಲ್​ಗೆ ಒಟಿಪಿ ಬಂದಿದೆ.
ವ್ಯಕ್ತಿಯೊಬ್ಬ 2023ರಲ್ಲಿ ಆರ್ಡರ್​ ಮಾಡಿದ್ದು 9,940 ಕಾಂಡೋಮ್‌!

ಆ ವೃದ್ಧ ಕ್ಷಣಾರ್ಧದಲ್ಲೇ ಕೋಳಿ ಮತ್ತು ಮೊಟ್ಟೆ ಖರೀದಿಗೆ ಯತ್ನಿಸಿದ ವೆಬ್​ಸೈಟ್​ ಕಡೆಯ ವ್ಯಕ್ತಿಗೆ ಒಟಿಪಿ ರವಾನಿಸಿದ್ದಾರೆ. ಆಗ 98ರ ಬದಲಾಗಿ 52,792 ರೂ. ತನ್ನ ಬ್ಯಾಂಕ್​ ಖಾತೆಯಿಂದ ಕಡಿತವಾಗಿರುವುದನ್ನು ಕಂಡು ವೃದ್ಧ ಹೌಹಾರಿದ್ದಾರೆ. ವೃದ್ಧನಿಗ ನಿಜದ ಅರಿವಾಗಿ ಬ್ಯಾಂಕ್ ಹಾಗೂ ಪೊಲೀಸರಿಗೆ ದೂರು ನೀಡಿದ್ದು, ಇದೀಗ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + eight =
Remember me
