ಪುಣೆ:ಭಾರಿ ಭರವಸೆ ಮೂಡಿಸಿರುವ ಆಕ್ಸ್​ಫರ್ಡ್​​ ವಿವಿಯ ಕರೊನಾ ಲಸಿಕೆ ಯಶಸ್ವಿಯಾಗಿದ್ದೇ ಆದಲ್ಲಿ ಭಾರತದಲ್ಲಿಯೇ ಅದರ ಉತ್ಪಾದನೆಯಾಗಲಿದೆ ಎಮಬುದಂತೂ ತಿಳಿದಿರುವ ವಿಚಾರ.
ಜಗತ್ತಿನ ಅತಿ ದೊಡ್ಡ ಔಷಧ ಉತ್ಪಾದಕ ಸಂಸ್ಥೆಗಳಲ್ಲಿ ಒಂದಾಗಿರುವ ಇಲ್ಲಿನ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಇದರ ಉತ್ಪಾದನೆಯಲ್ಲಿ ತೊಡಗಲಿದೆ. ಆಕ್ಸ್​ಫರ್ಡ್​ ವಿವಿ ಸಹಭಾಗಿತ್ವದಲ್ಲಿ ಇದನ್ನು ಉತ್ಪಾದಿಸುತ್ತಿರುವ ಅಸ್ಟ್ರಾಜೆನೆಕಾ ಕಂಪನಿ ಸಿರಂ ಇನ್​ಸ್ಟಿಟ್ಯೂಟ್​ಗೆ ಉತ್ಪಾದನಾ ಪರವಾನಗಿ ನೀಡಿದೆ. ಈ ಸಂಸ್ಥೆ ಉತ್ಪಾದಿಸಿದ ಲಸಿಕೆಯಲ್ಲಿ ಶೇ.50 ಭಾರತದ ಬಳಕೆಗೆ ಸಿಗಲಿದೆ. ಇನ್ನುಳಿದದ್ದು ಬೇರೆ ದೇಶಗಳಿಗೆ ಹಂಚಿಕೆಯಾಗಲಿದೆ.
ಇದನ್ನೂ ಓದಿ;ಸಾವಾಗಿದೆ ಸ್ವಲ್ಪ ನಿಲ್ಲಿ ಎಂದ ದಲಿತನನ್ನು ಠಾಣೆಗೊಯ್ದು ತಲೆ ಬೋಳಿಸಿದರು…! ವೈಎಸ್​ಆರ್​ಸಿ ನಾಯಕನ ಪವರ್​ ಖದರ್​
ಎಲ್ಲವೂ ಅಂದುಕೊಂಡಂತೆ ಆದಲ್ಲಿ ನಮ್ಮಲ್ಲಿ ಉತ್ಪಾದನೆಯಾಗುವ ಲಸಿಕೆಯ ಶೇ.50 ಭಾರತದ ಬಳಕೆಗೆ ಮೀಸಲಾಗಿರಲಿದೆ ಎಂದು ಸಂಸ್ಥೆ ಮುಖ್ಯಸ್ಥ ಆದಾರ್​ ಪೂನೆವಾಲಾ ಹೇಳಿದ್ದಾರೆ. ನವೆಂಬರ್​​- ಡಿಸೆಂಬರ್​ ವೇಳೆಗೆ ಹತ್ತಾರು ಲಕ್ಷ ಡೋಸ್​ ಉತ್ಪಾದನೆಯಾದರೆ, ಮುಂದಿನ ಮಾರ್ಚ್​ ವೇಳೆಗೆ 3-4 ಕೋಟಿ ಡೋಸ್​ ತಯಾರಾಗಲಿದೆ ಎಂದು ಹೇಳಿದ್ದಾರೆ.
ಜನರು ಇದನ್ನು ಖರೀದಿಸುವ ಅಗತ್ಯ ಎದುರಾಗದು. ಏಕೆಂದರೆ ಸರ್ಕಾರವೇ ಇದನ್ನು ಖರೀದಿಸಿ ಉಚಿತವಾಗಿ ಹಂಚಲಿದೆ. ಕೋವಿಡ್​ ಸಂಕಷ್ಟ ಕಾಲದಲ್ಲಿ ಸರ್ಕಾರ ಈ ಹೊಣೆಗಾರಿಕೆ ನಿಭಾಯಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ;ಆಕ್ಸ್​ಫರ್ಡ್​ ಕರೊನಾ ಲಸಿಕೆ ಯಶಸ್ವಿಯಾದರೆ ಭಾರತಕ್ಕೇನು ಲಾಭ? ಎಲ್ಲಿ ಉತ್ಪಾದನೆಯಾಗುತ್ತೆ ಗೊತ್ತಾ?
ಯಾರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಆದಾರ್​, ಇದನ್ನು ಸರ್ಕಾರ ವೇ ನಿರ್ಧರಿಸಲಿದೆ. ಆರಂಭದಲ್ಲಿ ಹಿರಿಯರು, ಹೆಚ್ಚು ಅಪಾಯದಲ್ಲಿರುವವರು ಹಾಗೂ ಮುಂಚೂಣಿಯಲ್ಲಿದ್ದು, ಕೋವಿಡ್​ ರೋಗಿಗಳಿಗೆ ಆರೈಕೆ ಮಾಡುತ್ತಿರುವ ವೈದ್ಯ ಸಿಬ್ಬಂದಿಗೆ ನೀಡುವುದು ನ್ಯಾಯಯುತ ಹಂಚಿಕೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಕರೊನಾ ಲಸಿಕೆ ಬೆಲೆ ಒಂದು ಡೋಸ್ಗೆ ಒಮದು ಸಾವಿರ ಅಥವಾ ಅದಕ್ಕಿಂತ ಕಡಿಮೆಯಾಗಬಹುದು. ಆದರೆ, ಆಫ್ರಿಕಾ ದೇಶಗಳಲ್ಲಿ ಅಂದಾಜು 200- 300 ರೂ. ಗೆ ನೀಡಬಹುದು ಎಂದು ಅವರು ಅಂದಾಜಿಸಿದ್ದಾರೆ.
ಲಾಕ್​ಡೌನ್​ ತೆರವು; ಕರೊನಾ ವಿರುದ್ಧ ಹೋರಾಟಕ್ಕೆ ಏನಿದು 5 T ಸೂತ್ರ? ಜನರ ಸಹಕಾರಕ್ಕೆ ಸಿಎಂ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 8 =
Remember me
