ಬೆಂಗಳೂರು:ಕೋವಿಡ್​ 19 ಚಿಕಿತ್ಸೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಕರೊನಾ ವಾರಿಯರ್ಸ್​ಗೆ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಅಥವಾ ಕವರ್​ಆಲ್​ಗಳು ತುಂಬಾ ಅಗತ್ಯವಾಗಿವೆ. ಇವುಗಳಿಗಾಗಿ ಬೇಡಿಕೆ ಹೆಚ್ಚಾಗಿದೆ. ಈ ಬೇಡಿಕೆಯನ್ನು ಪೂರೈಸಲು ಭಾರತದಲ್ಲಿ ಪ್ರತಿದಿನ 1 ಲಕ್ಷ ಪಿಪಿಇಗಳನ್ನು ತಯಾರಿಸಲಾಗುತ್ತಿದೆ. ಇದರ ಶೇ.50 ಭಾಗ ಬೆಂಗಳೂರಿನಲ್ಲೇ ಸಿದ್ಧವಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕರೊನಾ ವಾರಿಯರ್ಸ್​ ಸುರಕ್ಷತೆ ದೃಷ್ಟಿಯಿಂದ ವಿಶೇಷವಾದ ಪಿಪಿಇಗಳು ತುಂಬಾ ಅಗತ್ಯವಾಗಿದೆ. ಇದಕ್ಕಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅವುಗಳ ತಯಾರಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರತಿಪಾದಿಸಿರುವ ಮಾನದಂಡಗಳನ್ನು ಆಧರಿಸಿ ತನ್ನದೇ ಆದ ತಾಂತ್ರಿಕ ಮಾನದಂಡಗಳನ್ನು ರೂಪಿಸಿದೆ. ಅಲ್ಲದೆ, ಇವುಗಳ ಗುಣಮಟ್ಟವನ್ನು ಖಾತ್ರಿಪಡಿಸಿಕೊಂಡು ಖರೀದಿಸಲು ಏಕಗವಾಕ್ಷಿ ಪದ್ಧತಿಯಡಿ ಎಚ್​ಎಲ್​ಎಲ್​ ಲೈಫ್​ಕೇರ್​ ಎಂಬ ಸಂಸ್ಥೆಗೆ ಜವಾಬ್ದಾರಿ ನೀಡಿದೆ.
ಬೆಂಗಳೂರು ಅಲ್ಲದೆ, ತಮಿಳುನಾಡಿನ ತಿರುಪ್ಪುರ, ಚೆನ್ನೈ ಮತ್ತು ಕೋಯಮತ್ತೂರು, ಗುಜರಾತ್​ನ ಅಹಮದಾಬಾದ್​ ಮತ್ತು ವಡೋದರ, ಪಂಜಾಬ್​ನ ಪಗ್ವಾರಾ ಮತ್ತು ಲೂಧಿಯಾನ, ಮಹಾರಾಷ್ಟ್ರದ ಕುಸುಮನಗರ ಮತ್ತು ಭಿವಾಂಡಿ, ರಾಜಸ್ಥಾನದ ಡುಂಗಾರಪುರ, ಕೋಲ್ಕತ, ದೆಹಲಿ, ನೋಯ್ಡಾ ಮತ್ತು ಗುರುಗ್ರಾಮ ಸೇರಿ ವಿವಿಧೆಡೆಗಳಲ್ಲಿ ಪಿಪಿಗಳನ್ನು ತಯಾರಿಸಲಾಗುತ್ತಿದೆ.
ಈ ಎಲ್ಲ ಕೇಂದ್ರಗಳಲ್ಲಿ ಒಟ್ಟು 1 ದಶಲಕ್ಷ ಪಿಪಿಗಳನ್ನು ತಯಾರಿಸಲಾಗಿದೆ ಎಂದು ಸಚಿವಾಲಯದ ಮಾಹಿತಿ ತಿಳಿಸಿದೆ.
ಪಾಸ್​ ತೋರಿಸಿದರೂ ಪೊಲೀಸರೂ ಒಪ್ಪಲಿಲ್ಲ, ಬೇಕೆಂದೇ ನನಗೆ ಬಸ್ಕಿ ಹೊಡೆಸಿ, ಅಪಹಾಸ್ಯ ಮಾಡಿದರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − four =
Remember me
