ನವದೆಹಲಿ:ಭಾರತದಲ್ಲಿ ಕರೊನಾ ಎರಡನೇ ಅಲೆ ವ್ಯಾಪಿಸುತ್ತಿದ್ದು, ಸೋಂಕಿನ ಪ್ರಕರಣಗಳ ಹೆಚ್ಚಳದ ಜತೆಗೆ ಸಾವಿನ ಪ್ರಮಾಣವೂ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವಡೆ ಲಾಕ್​ಡೌನ್​, ಕೆಲವು ನಿರ್ಬಂಧಗಳನ್ನು ಹೇರಲಾಗಿದ್ದು, ಈ ಮಧ್ಯೆ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಅದೇನೆಂದರೆ.. ಏಪ್ರಿಲ್​ 15ರೊಳಗೆ ಭಾರತದಲ್ಲಿ ಕೋವಿಡ್​ನಿಂದಾಗಿ 50 ಸಾವಿರ ಮಂದಿ ಸಾವಿಗೀಡಾಗಲಿದ್ದಾರೆ. ಅದರಲ್ಲೂ ಇಂಥದ್ದೊಂದು ಎಚ್ಚರಿಕೆಯನ್ನೂ ವಿಶ್ವ ಆರೋಗ್ಯ ಸಂಸ್ಥೆಯೇ ನೀಡಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಈ ಸುದ್ದಿ ಸಂಬಂಧ ಇದೀಗ ವಿಶ್ವ ಆರೋಗ್ಯ ಸಂಸ್ಥೆಯೇ ಪ್ರತಿಕ್ರಿಯಿಸಿ ಸ್ಪಷ್ಟನೆಯನ್ನು ನೀಡಿದೆ.
ಇದನ್ನೂ ಓದಿ:ಎರಡೆರಡು ಸಲ ಲಸಿಕೆ ಪಡೆದರೂ ಕರೊನಾ ಬಂತು!; ವ್ಯಾಕ್ಸಿನ್​ ತಗೊಂಡ ಜಿಲ್ಲಾಧಿಕಾರಿಗೂ ಸೋಂಕು!​
ಭಾರತದಲ್ಲಿ ಏ. 15ರೊಳಗೆ 50 ಸಾವಿರ ಮಂದಿ ಕೋವಿಡ್​-19ನಿಂದಾಗಿ ಸಾಯುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಲ್ಲ. ಅದು ಸುಳ್ಳು ಸುದ್ದಿ, ಅಂಥದ್ದೊಂದು ಎಚ್ಚರಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿಲ್ಲ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ಕಚೇರಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್​ನಲ್ಲಿ ಸ್ಪಷ್ಟನೆ ನೀಡಿದೆ. ಭಾರತದಲ್ಲಿ ಇರುವರೆಗೆ 1,26,86,049 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಕರೊನಾದಿಂದಾಗಿ ಸತ್ತವರ ಸಂಖ್ಯೆ 1,65,547 ಏರಿದೆ ಎಂದು ಅದು ತಿಳಿಸಿದೆ. (ಏಜೆನ್ಸೀಸ್)
A video claiming@WHOhas warned of 50,000#COVID-19 deaths in India by 15 April is FAKE NEWS.WHO has NOT issued any such warning.#IndiaFightsCorona#pandemic@MoHFW_INDIA@PIB_India@ICMRDELHI@ANI
— WHO South-East Asia (@WHOSEARO)April 6, 2021

ಇದನ್ನೂ ಓದಿ:ಇಲ್ಲೆಲ್ಲ ಈ ಲಸಿಕೆ ಕೊಡುವುದು ನಿಲ್ಲಿಸಿದ್ದಾರಂತೆ!; ರಕ್ತಹೆಪ್ಪುಗಟ್ಟುತ್ತದೆ ಎಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ
ಚಿತ್ರಮಂದಿರ ಭರ್ತಿಯಾಗತ್ತಾ ಅಥವಾ ಶಾಕ್‌ ಕೊಡತ್ತಾ? ಈ ವಿಚಾರದಲ್ಲಿ ಸರ್ಕಾರದ ನಿಲುವೇನು?

ನಾಳೆ ಖಾಸಗಿ ಬಸ್‌ಗಳದ್ದೇ ಕಾರುಬಾರು? ಸರ್ಕಾರದಿಂದ ವ್ಯವಸ್ಥೆ- ದರ ವಸೂಲಿ ಕುರಿತು ನೀಡಿದೆ ಎಚ್ಚರಿಕೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
