ದಿಬುರ್ಗಡ್:ವಾಲೆಂಟೈನ್ಸ್ ಡೇ ದಿನ 33 ವರ್ಷದ ಮಹಿಳೆಗೆ ಪ್ರೀತಿ ನಿವೇದಿಸಿದ 50 ವರ್ಷದ ಗಂಡಸೊಬ್ಬ ಅದನ್ನೊಪ್ಪದಿದ್ದಕ್ಕೆ ಆ್ಯಸಿಡ್​ನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಅಸ್ಸಾಂ ದಿಬುರ್ಗಡ್ ಜಿಲ್ಲೆಯ ಶಾಂತಿಪರದ ನಿವಾಸಿ ಬುದ್ಧದೇವ್ ದಾಸ್ ಎಂಬುವನೇ ಈ ದುಷ್ಕರ್ಮಿ.
ಎರಡು ಮಕ್ಕಳ ತಂದೆಯಾದ ಬುದ್ಧದೇವ್ 33 ವರ್ಷದ ಮಹಿಳೆಗೆ ಪ್ರೀತಿ ನಿವೇದಿಸಿಕೊಂಡಿದ್ದಾನೆ. ತನ್ನನ್ನು ಮದುವೆಯಾಗು ಎಂದು ಕೇಳಿಕೊಂಡಿದ್ದಾನೆ. ಆದರೆ ಆಕೆ ಒಪ್ಪಿಲ್ಲ. ಇದೇ ಕೋಪದಲ್ಲಿ ಅವಳ ಜೀವನವನ್ನು ಹಾಳು ಮಾಡುವ ಪ್ರಯತ್ನ ಮಾಡಿದ್ದಾನೆ.
ಇದನ್ನೂ ಓದಿ:ವಾಲೆಂಟೈನ್ಸ್​ ಡೇ : ‘ಪ್ರೀತಿ, ಮಾಸ್ಕ್ ಮತ್ತು ಆರು ಅಡಿ ಅಂತರ’ !
ಸೋಹುಂ ಶಾಪ್ಪಿ ಎಂಬ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಭಾನುವಾರ (ಫೆಬ್ರವರಿ 14) ಸಂಜೆ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಳು. ಈ ಸಮಯದಲ್ಲಿ ಮಿರ್ಜಾಬಾಗ್ ಎಂಬ ಪ್ರದೇಶದಲ್ಲಿರುವ ಬೇಕರಿಯಲ್ಲಿ ಕೆಲಸ ಮಾಡುವ ಆರೋಪಿಯು ಆಕೆಯ ಮುಖದ ಮೇಲೆ ಆ್ಯಸಿಡ್ ಎರಚಿ ಓಡಿ ಹೋಗಿದ್ದಾನೆ.
ತೀವ್ರವಾದ ಗಾಯಗಳಾದ ಮಹಿಳೆಯನ್ನು ಚಿಕಿತ್ಸೆಗಾಗಿ ಅಸ್ಸಾಂ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಸು ದಾಖಲಿಸಿದ ಅಲ್ಲಂಪಟ್ಟಿ ಪೊಲೀಸರು, ದುಷ್ಕರ್ಮಿಯನ್ನು ಅವನ ಮನೆಯಿಂದ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)
ಸುಪ್ರೀಂ ಕೋರ್ಟ್ ಮುಂದೆ ವಾಟ್ಸ್​ಆ್ಯಪ್ ಹೊಸ ನೀತಿ ವಿವಾದ
‘ನನ್ನ ವಾಲೆಂಟೈನ್ – ಪ್ರತಿದಿನ, ಎಂದೆಂದಿಗೂ’ ಎಂದು ಸನ್​ಸೆಟ್​ ಫೋಟೋ ಹಾಕಿದ ಅನುಷ್ಕಾ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − three =
Remember me
