ಉತ್ತರ ಪ್ರದೇಶ:ಲಾಕ್​ಡೌನ್​ ನಡುವೆಯೂ 500 ಕಿ.ಮೀ. ದೂರದಲ್ಲಿರುವ ತಮ್ಮೂರಿಗೆ ಕಾಲ್ನಡಿಗೆಯಲ್ಲೇ ಹೊರಟಿದ್ದ ಒಂದೇ ಕುಟುಂಬದ ಮೂವರು ದಿನಗೂಲಿ ಕಾರ್ಮಿಕರನ್ನು ಮನೆ ಸೇರುವ ಮೊದಲೇ ಮಾರ್ಗಮಧ್ಯೆ ಜವರಾಯನ ರೂಪದಲ್ಲಿ ಬಂದೆರಗಿದ ಟ್ರ್ಯಾಕ್ಟರ್​ ಸ್ಮಶಾನಕ್ಕೆ ದೂಡಿದೆ.
ಲಾಕ್​ಡೌನ್​ನಿಂದಾಗಿ ಕೆಲಸವೂ ಇಲ್ಲದೆ, ಇತ್ತ ಕೂಲಿಯೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರ ಗುಂಪು ದೆಹಲಿಯಿಂದ ತಮ್ಮೂರುಗಳಿಗೆ ನಡೆದುಕೊಂಡೇ ಹೋಗುತ್ತಿತ್ತು. ಈ ಗುಂಪಿನಲ್ಲಿ ಫತೇಪುರ ಜಿಲ್ಲೆ ಮೂಲದ ಸಹೋದರರಾದ ರಂಜಿತ್​ ಸಿಂಗ್​(44), ದಿನೇಶ್​(37) ಮತ್ತು ದಿನೇಶ್​ ಪತ್ನಿ ಸಂತಕುಮಾರಿ(32) ಕೂಡ ಇದ್ದರು. ಗುರುವಾರ ನಸುಕಿನಲ್ಲಿ ಮದ್ರಾಕ್ ಪ್ರದೇಶದಲ್ಲಿ ಟ್ರ್ಯಾಕ್ಟರ್​ ಮತ್ತು ಟ್ರಕ್​ ನಡುವೆ ಸಂಭವಿಸಿದ ಅಪಘಾತದಲ್ಲಿ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್​ ರಸ್ತೆಬದಿ ಹೋಗುತ್ತಿದ್ದ ದಿನಗೂಲಿ ಕಾರ್ಮಿಕರ ಮೇಲೂ ಹರಿದಿದೆ. ಸ್ಥಳದಲ್ಲೇ ರಂಜಿತ್​ ಸಿಂಗ್​ ಮತ್ತು ದಿನೇಶ್​ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ಸಂತಕುಮಾರಿಯನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದರಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು.
ಲಾಕ್​ಡೌನ್​ ಹಿನ್ನೆಲೆಯಲ್ಲಿ ಫತೇಪುರಕ್ಕೆ ಹೊರಟಿದ್ದ ದೆಹಲಿಯ ನರೇಲಾದಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದ ಈ ಕುಟುಂಬ 130 ಕಿ.ಮೀ. ದೂರ ಕ್ರಮಿಸಿತ್ತಷ್ಟೆ. ಟ್ರಕ್​ ಚಾಲಕನ ವಿರುದ್ಧ ಎಫ್​ಐಆರ್​ ದಾಖಲಾಗಿದೆ ಎಂದು ಅಲಿಗರ್ ನ ಸರ್ಕಲ್​ ಇನ್​ಸ್ಪೆಕ್ಟರ್​ ಪರಶುರಾಮ್​ ಸಿಂಗ್​ತಿಳಿಸಿದ್ದಾರೆ. (ಏಜೆನ್ಸೀಸ್​)
ದುಪ್ಪಟ್ಟು ಟಿಕೆಟ್​ ದರಕ್ಕೆ ಬ್ರೇಕ್​ ಹಾಕಿದ ಸರ್ಕಾರ: ನಿಗದಿತ ದರದಲ್ಲೇ ಕಾರ್ಮಿಕರನ್ನು ಕರೆದೊಯ್ಯಲು ತೀರ್ಮಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 17 =
Remember me
