ನವದೆಹಲಿ: ಪ್ರಧಾನ ಮಂತ್ರಿ ಜನ್​ಧನ್​ ಯೋಜನೆಯಡಿಯಲ್ಲಿ ಮಹಿಳೆಯರು ತೆರೆದಿರುವ ಜನ್​ಧನ್​ ಖಾತೆಗಳಿಗೆ ತಲಾ 500 ರೂ.ಗಳನ್ನು ಪಾವತಿ ಪ್ರಕ್ರಿಯೆ ಆರಂಭಿಸುವಂತೆ ಎಲ್ಲ ಬ್ಯಾಂಕ್​ಗಳಿಗೆ ಇಂಡಿಯನ್​ ಬ್ಯಾಂಕ್ಸ್​ ಅಸೋಸಿಯೇಷನ್​ ಸೂಚಿಸಿದೆ.
ಪ್ರಧಾನಮಂತ್ರಿ ಗರೀಬ್​ ಕಲ್ಯಾಣ ಯೋಜನೆಯಡಿಯಲ್ಲಿ ಘೋಷಿಸಲಾಗಿರುವಂತೆ ಜನಧನ್​ ಖಾತೆಗಳಿಗೆ ಮಾಸಿಕ 500 ರೂ.ಗಳನ್ನು ಪಾವತಿಸುವ ಪ್ರಕ್ರಿಯೆ ಏಪ್ರಿಲ್​ 3ರಿಂದ 9ರವರೆಗೆ ನಡೆಯಲಿದೆ ಎಂದು ಐಬಿಎ ತಿಳಿಸಿದೆ. ಜನ್​​ಧನ್​ ಖಾತೆಗಳಿಗೆ ಮುಂದಿನ ಮೂರು ತಿಂಗಳ ಅವಧಿಗೆ ಅಂದರೆ ಏಪ್ರಿಲ್​, ಮೇ, ಜೂನ್​ವರೆಗೆ ನಗದು ವರ್ಗಾವಣೆ ಮಾಡಲಾಗುತ್ತದೆ.
ದೇಶಾದ್ಯಂತ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ಬಡಜನರಿಗೆ ನೆರವಾಗಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಈ ಘೋಷಣೆ ಪ್ರಕಟಿಸಿದ್ದರು.
ಮಹಿಳೆಯರ ಖಾತೆಗಳ ಕೊನೆಯ ಅಂಕಿ ಸಮ- ಬೆಸ ಸಂಖ್ಯೆಗಳ ಆಧಾರದಲ್ಲಿ ಹಣ ವರ್ಗಾವಣೆ ಮಾಡಲಾಗುತ್ತದೆ. ಏಪ್ರಿಲ್​ 3ರಿಂದಲೇ ಖಾತೆಯಲ್ಲಿರುವ ಹಣ ಪಡೆಯಬಹುದು.
ಖಾತೆಯ ಕೊನೆಯ ಸಂಖ್ಯೆ 0-1 ಆಗಿದ್ದರೆ ಏಪ್ರಿಲ್​ 3ರಂದು ಹಣ ಪಡೆಯಬಹುದು. ಖಾತೆಯ ಕೊನೆಯ ಸಂಖ್ಯೆ 2-3 ಆಗಿದ್ದರೆ ಏಪ್ರಿಲ್​ 4, 4-5 ಆಗಿದ್ದರೆ ಏಪ್ರಿಲ್​ ಏಪ್ರಿಲ್​ 7ರಂದು ಹಾಗೂ ಖಾತೆಯ ಕೊನೆಯ ಸಂಖ್ಯೆ 6-7 ಆಗಿದ್ದರೆ ಏಪ್ರಿಲ್​ 8 ಮತ್ತು ಖಾತೆಯ ಕೊನೆಯ ಸಂಖ್ಯೆ 8-9 ಆಗಿದ್ದರೆ ಏಪ್ರಿಲ್​ 9ರಂದು ಹಣ ಪಡೆದುಕೊಳ್ಳಬಹುದು. ಏಪ್ರಿಲ್​ 9ರ ನಂತರ ಅವರಿಗೆ ಅನುಕೂಲವಾದ ದಿನದಿಂದ ಹಣ ಪಡೆಯಬಹುದು. ಸಾಮಾಜಿಕ ಅಂತರವನ್ನು ಕಾಯ್ದುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಎಬಿಎ ತಿಳಿಸಿದೆ.
‘ನಾಳೆ ಬೆಳಗ್ಗೆ 9ಗಂಟೆಗೆ ದೇಶದ ಜನರಿಗೆ ಒಂದು ವಿಡಿಯೋ ಸಂದೇಶ ನೀಡಲಿದ್ದೇನೆ…’ : ಪ್ರಧಾನಿ ನರೇಂದ್ರ ಮೋದಿ ಟ್ವೀಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
