|ಕೀರ್ತಿನಾರಾಯಣ ಸಿ.ಬೆಂಗಳೂರು
ಸೈಬರ್ ಕ್ರೖೆಂ, ಡ್ರಗ್ಸ್ ಪೂರೈಕೆ, ಮಾನವ ಕಳ್ಳ ಸಾಗಾಣಿಕೆ ಮತ್ತು ವೇಶ್ಯಾವಾಟಿಕೆಯಂತಹ ಪ್ರಮುಖ ಅಪರಾಧ ಕೃತ್ಯಗಳ ಮೂಲಕ ಸಮಾಜದ ಶಾಂತಿ ಕದಡುತ್ತಿರುವ ಅಕ್ರಮ ವಿದೇಶಿ ಪ್ರಜೆಗಳ ಪತ್ತೆಗೆ ರಾಜ್ಯದಲ್ಲಿ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಇದರ ಬೆನ್ನಲ್ಲೇ ಕರ್ನಾಟಕ ಸೇರಿ ದೇಶದ ಬೇರೆಬೇರೆ ಜೈಲುಗಳಲ್ಲಿ 4926 ವಿದೇಶಿ ಪ್ರಜೆಗಳಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.
ವಿಚಾರಣಾ ಕೈದಿಗಳು ಹಾಗೂ ಸಜಾಬಂಧಿಗಳಾಗಿ ಬಂಧಿಯಾಗಿರುವ ಇವರಲ್ಲಿ ಬಾಂಗ್ಲಾದೇಶ, ನೈಜೀರಿಯಾ, ಆಫ್ರಿಕಾ ಹಾಗೂ ನೇಪಾಳಿಗರೇ ಹೆಚ್ಚಿದ್ದಾರೆ ಎಂಬ ವಿಚಾರ ಬಯಲಾಗಿದೆ. ಕರ್ನಾಟಕ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ಜೈಲುಗಳಲ್ಲಿ ಹೆಚ್ಚು ವಿದೇಶಿ ಕ್ರಿಮಿನಲ್​ಗಳು ಬಂಧಿಯಾಗಿದ್ದಾರೆ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ 4926 ವಿದೇಶಿಗಳು ದೇಶದ ಜೈಲುಗಳಲ್ಲಿದ್ದಾರೆ. ಇದರಲ್ಲಿ 3477 ಮಂದಿ ವಿಚಾರಣಾ ಕೈದಿಗಳಾಗಿದ್ದು, ಉಳಿದ 1140 ಮಂದಿಗೆ ಜೈಲುಶಿಕ್ಷೆಯಾಗಿದೆ. ಅಂದರೆ ಪ್ರತಿ 10 ವಿದೇಶಿ ಆರೋಪಿಗಳ ಪೈಕಿ 7 ಮಂದಿ ಇನ್ನೂ ವಿಚಾರಣಾ ಕೈದಿಗಳಾಗಿದ್ದಾರೆ.
ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ, ನೈಜೀರಿಯಾ ದೇಶದ ಪ್ರಜೆಗಳು ಭಾರತದಲ್ಲಿ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಬಂಧಿತರಾಗಿದ್ದಾರೆ. ಅದರಲ್ಲೂ ಬಾಂಗ್ಲಾ, ನೇಪಾಳ ಮತ್ತು ನೈಜೀರಿಯಾದ 2708 ಮಂದಿ ಸೆರೆಸಿಕ್ಕಿದ್ದಾರೆ. ಕರ್ನಾಟಕದಲ್ಲಿ ಬಾಂಗ್ಲಾ ಹಾಗೂ ನೇಪಾಳಿ ಬಂಧಿತರ ಸಂಖ್ಯೆ ಹೆಚ್ಚಿದ್ದು, ಇವರ ವಿರುದ್ಧ ವೇಶ್ಯಾವಾಟಿಕೆ ಹಾಗೂ ಕಳ್ಳತನ ಪ್ರಕರಣಗಳು ಹೆಚ್ಚು ದಾಖಲಾಗಿವೆ. ಬಾಂಗ್ಲಾ ಪ್ರಜೆಗಳು ಸ್ಥಳೀಯರಂತೆ ಕಾಣುವುದರಿಂದ ಅವರನ್ನು ಪತ್ತೆಹಚ್ಚುವುದು ಕಷ್ಟ. ಸ್ಥಳೀಯ ಏಜೆಂಟ್​ಗಳ ಮೂಲಕ ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ರೇಷನ್ ಕಾರ್ಡ್​ಗಳನ್ನೂ ಮಾಡಿಸಿಕೊಂಡು ಇಲ್ಲಿನವರೇ ಆಗಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ 70 ಸಾವಿರಕ್ಕೂ ಅಧಿಕ ಬಾಂಗ್ಲಾ ಪ್ರಜೆಗಳಿದ್ದಾರೆ.
ಶೈಕ್ಷಣಿಕ, ಪ್ರವಾಸಿ, ಬಿಜಿನೆಸ್ ವೀಸಾಗಳಲ್ಲಿ ಆಗಮಿಸಿ, ಅವಧಿ ಮುಗಿದ ನಂತರವೂ ವಾಸ ಮಾಡುವವರೇ ಹೆಚ್ಚಾಗಿದ್ದಾರೆ. ಇನ್ನು ರಾಜ್ಯದಲ್ಲಿ ನೆಲೆಸಿರುವ ನೇಪಾಳಿಗಳ ಸಂಖ್ಯೆಯೂ ಲಕ್ಷ ದಾಟಿದೆ. ರಾಜ್ಯದಲ್ಲಿ 441 ವಿದೇಶಿ ಪ್ರಜೆಗಳ ವಿರುದ್ಧ 296 ಪ್ರಕರಣ ದಾಖಲಿಸಲಾಗಿದೆ. ಕೇಸ್ ಇತ್ಯರ್ಥವಾಗುವವರೆಗೆ ಅವರನ್ನು ಗಡಿಪಾರು ಮಾಡದೆ ಡಿಟೆನ್ಶನ್ ಕೇಂದ್ರದಲ್ಲಿ ಇರಿಸಲಾಗುತ್ತದೆ. 675 ಮಂದಿ ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಇತ್ತೀಚೆಗೆ ಗೃಹಸಚಿವ ಆರಗ ಜ್ಞಾನೇಂದ್ರ ಅಧೀವೇಶನದಲ್ಲಿ ಮಾಹಿತಿ ನೀಡಿದ್ದರು. ಆದರೆ, 10 ಸಾವಿರಕ್ಕೂ ಅಧಿಕ ಅಕ್ರಮವಾಗಿ ವಾಸವಿದ್ದಾರೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದಲ್ಲೇ ಅತಿಹೆಚ್ಚು ಸೈಬರ್ ಠಾಣೆ:ಸೈಬರ್ ಕ್ರೖೆಂ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಸೈಬರ್ ಅಪರಾಧ ಹತ್ತಿಕ್ಕಲು ಸೈಬರ್ ಠಾಣೆಗಳನ್ನು ಹೆಚ್ಚಿಸಲಾಗುತ್ತಿದೆ. ಇಡೀ ದೇಶಕ್ಕೆ ಹೋಲಿಸಿದರೆ ಕರ್ನಾಟಕದಲ್ಲೇ ಅತಿಹೆಚ್ಚು 51 ಠಾಣೆಗಳಿವೆ. ಮಹಾರಾಷ್ಟ್ರದಲ್ಲಿ 43 ಹಾಗೂ ಪಶ್ಚಿಮ ಬಂಗಾಳದಲ್ಲಿ 31 ಸೈಬರ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಉಳಿದೆಲ್ಲ ರಾಜ್ಯಗಳಲ್ಲಿ ಗರಿಷ್ಠ 2 ಹಾಗೂ 1 ಸೈಬರ್ ಠಾಣೆಗಳನ್ನು ಸ್ಥಾಪನೆ ಮಾಡಲಾಗಿದೆ.
ಯಾವ ದೇಶದವರು ಎಷ್ಟು?:ಆಫ್ರಿಕಾ (ನೈಜೀರಿಯಾ ಬಿಟ್ಟು)-114; ಬಾಂಗ್ಲಾದೇಶ-1630; ಮ್ಯಾನ್ಮಾರ್​-152; ನೇಪಾಳ-463; ನೈಜೀರಿಯಾ-615; ಪಾಕಿಸ್ತಾನ-107; ಸೌತ್-ಅಮೆರಿಕಾ-41; ಸೌತ್​ಈಸ್ಟ್-ಏಷ್ಯಾನ್-ಕಂಟ್ರಿ-16; ಶ್ರೀಲಂಕಾ-48; ಆಸ್ಟ್ರೇಲಿಯಾ-4; ಕೆನಡಾ-14; ಚೀನಾ-14; ರಷ್ಯಾನ್- ಫೆಡರೇಷನ್-12; ಜಪಾನ್-1; ಮಾಲ್ಡೀವ್ಸ್-4; ಮಾರಿಷಸ್-1; ಮಿಡ್ಲ್-ಈಸ್ಟ್- ಕಂಟ್ರೀಸ್-6; ನಾರ್ತ್-ಅಮೆರಿಕಾ-5; ಇತರ-ವಿದೇಶಿ-ಪ್ರಜೆಗಳು-220; ಒಟ್ಟು-3467; ಯಾವ-ರಾಜ್ಯದಲ್ಲಿ-ಎಷ್ಟು-ಬಂಧಿ?; ಜೈಲು–ವಿದೇಶಿ-ಕೈದಿಗಳು; ಆಂಧ್ರಪ್ರದೇಶ-10; ಅಸ್ಸಾಂ-45; ಬಿಹಾರ-74; ಚತ್ತೀಸ್​ಗಢ-11; ಗೋವಾ-57; ಗುಜರಾತ್-50; ಹರಿಯಾಣ-45; ಹಿಮಾಚಲ-ಪ್ರದೇಶ-119; ಜಾರ್ಖಂಡ್-3; ಕರ್ನಾಟಕ-155; ಕೇರಳ-51; ಮಧ್ಯಪ್ರದೇಶ-17; ಮಹಾರಾಷ್ಟ್ರ-380; ಮಣಿಪುರ-12; ಮೇಘಾಲಯ-33; ಮಿಜೋರಾಂ-9; ಒಡಿಶಾ-6; ಪಂಜಾಬ್-98; ರಾಜಸ್ಥಾನ-22; ತಮಿಳುನಾಡು-64; ತೆಲಂಗಾಣ-37; ತ್ರಿಪುರ-18; ಉತ್ತರಪ್ರದೇಶ-290; ಉತ್ತರಾಖಂಡ-49; ಪಶ್ಚಿಮಬಂಗಾಳ-1295; ಅಂಡಮಾನ್-ಐಲೆಂಡ್-66; ಚಂಡೀಗಢ-9; ದೆಹಲಿ-400; ಜ-ಕಾಶ್ಮೀರ-39; ಲಡಾಖ್-3; ಒಟ್ಟು-3467
ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಿ ರುವ ವಿದೇಶಿಗರನ್ನು ಪತ್ತೆ ಹಚ್ಚಲು ‘ರಿಜಿಸ್ಟ್ರೇಷನ್ ಆಪ್’ ಅಭಿವೃದ್ಧಿಪಡಿಸಲಾಗಿದೆ. ಇಂತಹ ವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವ ಕಾರ್ಯ ನಡೆಯುತ್ತಿದೆ.
|ಕಮಲ್ ಪಂತ್ಬೆಂಗಳೂರು ಪೊಲೀಸ್ ಆಯುಕ್ತ
ಶೇ.98 ಕೇಸ್​ಗಳಲ್ಲಿ ಚಾರ್ಜ್​ಶೀಟ್:2020-21ರಲ್ಲಿ ಕರ್ನಾಟಕದಲ್ಲಿ ಡ್ರಗ್ಸ್ ಪೂರೈಕೆ ಸಂಬಂಧ 106 ಪ್ರಕರಣ ದಾಖಲಾಗಿವೆ. ಉಳಿದಂತೆ ಒಟ್ಟಾರೆ 344 ಕೇಸ್ ವರದಿಯಾಗಿದ್ದು, ಶೇ.98 ಪ್ರಕರಣಗಳಲ್ಲಿ ಚಾರ್ಜ್​ಶೀಟ್ ಸಲ್ಲಿಕೆಯಾಗಿ, ಕೋರ್ಟ್ ವಿಚಾರಣೆ ನಡೆಯುತ್ತಿದೆ.
ಬೆಂಗಳೂರಲ್ಲಿ ಆಗಾಗ ವಿದೇಶಿ ಪ್ರಜೆಗಳ ಪುಂಡಾಟಿಕೆ ನಡೆಯುತ್ತಲೇ ಇರುತ್ತದೆ. ವೀಸಾ ಅವಧಿ ಮುಕ್ತಾಯಗೊಂಡಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದ ಮೂವರು ನೈಜೀರಿಯಾ ಪ್ರಜೆಗಳನ್ನು ಬೆಂಗಳೂರು ಉತ್ತರ ತಾಲೂಕು ಸೊಂಡೆಕೊಪ್ಪ ದಲ್ಲಿರುವ ಎಫ್.ಡಿ.ಸಿ ಸೆಂಟರ್​ನಲ್ಲಿ ಇರಿಸಲಾಗಿತ್ತು. ಆರೋಪಿ ಗಳು ಪುನರ್ವಸತಿ ಕೇಂದ್ರದ ಅಡುಗೆ ಮನೆ, ಅಧಿಕಾರಿಗಳ ಕಚೇರಿ, ಶೌಚಗೃಹಕ್ಕೆ ಬೀಗ ಹಾಕುವುದು, ಮಹಿಳಾ ಸಿಬ್ಬಂದಿ ಮುಂದೆ ಅರೆನಗ್ನ ಸ್ಥಿತಿಯಲ್ಲಿ ನಿಂತು ಅಸಭ್ಯ ವರ್ತನೆ, ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಳ್ಳಲು ಇತರರನ್ನ ಪ್ರೇರೇಪಿಸುವುದು, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪುಂಡಾಟಿಕೆ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 10 =
Remember me
