ಡೆಹ್ರಾಡೂನ್:ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ಸೇರಿ 51 ಪ್ರಮುಖ ದೇವಾಲಯಗಳನ್ನು ಉತ್ತರಾಖಂಡ ಸರ್ಕಾರ ತನ್ನ ಸುಪರ್ದಿನಿಂದ ಮುಕ್ತಗೊಳಿಸಿದೆ. ಚಾರ್​ಧಾಮ್ ದೇವಸ್ಥಾನಂ ಮಂಡಳಿ ರಚನೆ ಬಗ್ಗೆಯೂ ಮರುಪರಿಶೀಲನೆ ನಡೆಯಲಿದೆ ಎಂದು ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಹೇಳಿದ್ದಾರೆ.
ವಿಶ್ವ ಹಿಂದು ಪರಿಷ್ (ವಿಎಚ್​ಪಿ) ಕೇಂದ್ರೀಯ ಮಾರ್ಗದರ್ಶಕ ಮಂಡಲದ ಜತೆ ಹರಿದ್ವಾರದಲ್ಲಿ ಶುಕ್ರವಾರ ಸಭೆ ನಡೆಸಿದ ನಂತರ ತೀರಥ್ ಸಿಂಗ್ ರಾವತ್ 51 ದೇವಾಲಯಗಳನ್ನು ಸರ್ಕಾರದ ಸುಪರ್ದಿನಿಂದ ಕೈಬಿಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಚಾರ್​ಧಾಮ್ ದೇವಸ್ಥಾನ ನಿರ್ವಹಣಾ ಮಸೂದೆಯನ್ನು ಉತ್ತರಾಖಂಡ ವಿಧಾನಸಭೆ ಕಳೆದ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಿತ್ತು. ಇದರ ಅನ್ವಯ ಚಾರ್​ಧಾಮ್ ಮಂಡಳಿ ರಚನೆ ಆಗಲಿದ್ದು, ಧಾರ್ವಿುಕ ಸ್ಥಳಗಳ ಆಡಳಿತವು ವೃತ್ತಿಪರವಾಗಲಿದೆ ಎಂದು ಹಿಂದಿನ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡಿದ್ದರು. ಈ ಮಂಡಳಿಗೆ ಮುಖ್ಯಮಂತ್ರಿಯೇ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಹಿರಿಯ ಐಎಎಸ್ ಅಧಿಕಾರಿಯನ್ನು ಮಂಡಳಿಯ ಸಿಇಒ ಆಗಿ ನೇಮಿಸಲಾಗುತ್ತದೆ. ತಪ್ಪೆಸಗುವ ಅರ್ಚಕರನ್ನು ಸೇವೆಯಿಂದ ವಜಾ ಮಾಡಬಹುದು ಎಂಬ ಪ್ರಸ್ತಾಪಗಳಿದ್ದ ಈ ಮಸೂದೆಗೆ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಸಹಿ ಮಾಡಿದ ನಂತರ ಕಾಯ್ದೆ ಆಗಿತ್ತು. ಆದರೆ, ಪ್ರಮುಖ ದೇವಾಲಯಗಳ ಆಡಳಿತವನ್ನು ಸರ್ಕಾರವೇ ವಹಿಸಿಕೊಳ್ಳುವುದನ್ನು ವಿರೋಧಿಸಿ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಗಂಗೋತ್ರಿಯ ಮುಖ್ಯ ಅರ್ಚಕ ವಿಶ್ವ ಹಿಂದು ಪರಿಷದ್ ಮತ್ತು ಆರ್​ಎಸ್​ಎಸ್ ಮುಖಂಡನ್ನು ಭೇಟಿಯಾಗಿ ಈ ಮಸೂದೆಯನ್ನು ತೀವ್ರವಾಗಿ ಟೀಕಿಸಿದ್ದರು. ತಲೆತಲಾಂತರಗಳಿಂದ ದೇವಾಲಯಗಳನ್ನು ಅರ್ಚಕರ ಮನೆತನದವರು ನಡೆಸಿಕೊಂಡು ಬರುತ್ತಿದ್ದಾರೆ. ದೇವಾಲಯದ ಆಡಳಿತವನ್ನು ಈ ಕುಟುಂಬಗಳಿಗೆ ಬಿಟ್ಟಕೊಡಬೇಕು ಎಂದು ಆಗ್ರಹಿಸಿದ್ದರು.
51 ದೇಗುಲಗಳ ಆಡಳಿತವನ್ನು ಅವುಗಳಿಗೇ ಬಿಡುವ ಸರ್ಕಾರದ ನಿರ್ಧಾರವನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಶ್ಲಾಘಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಸ್ಪಂದಿಸುವ ಸರ್ಕಾರದ ಲಕ್ಷಣ ಎಂದಿದ್ದಾರೆ. ವಿಎಚ್​ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಉತ್ತರಾಖಂಡದಲ್ಲಿ ಪ್ರಮುಖ 51 ದೇವಾಲಯಗಳನ್ನು ರಾಜ್ಯ ಸರ್ಕಾರದ ನಿಯಂತ್ರಣದಿಂದ ಹೊರಗಿರಿಸಿರುವುದು ಸ್ವಾಗತಾರ್ಹ ಮತ್ತು ಮಹತ್ವದ ನಿರ್ಧಾರ. ಹಿಂದುಗಳ ಪೂಜಾ ಸ್ಥಳಗಳು ಸಮುದಾಯದ ಸುಪರ್ದಿನಲ್ಲಿ, ಭಕ್ತರ ನಿರ್ವಹಣೆಯಲ್ಲಿ ಇದ್ದರೆ ದೇವಾಲಯ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯ. ದೇಶದ ಉಳಿದ ರಾಜ್ಯಗಳೂ ಇದೇ ಮಾದರಿಯಲ್ಲಿ ಮುನ್ನಡೆಯಬೇಕು. ಉತ್ತರಾಖಂಡದಂತೆ ಬೇರೆ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಸರಳವಾಗಿ ಆಗದಿರಬಹುದು. ಆದರೆ, ಸರ್ಕಾರಗಳಿಗೆ ಮನಸ್ಸಿದ್ದರೆ ಪರಿಹಾರೋಪಾಯ ಕಷ್ಟವಲ್ಲ. ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರಲಿರುವ ಹೊಸ ಸರ್ಕಾರ ಈ ನಿಟ್ಟಿನಲ್ಲಿ ಮುಂದುವರಿಯಬೇಕು.
|ಸದ್ಗುರುಈಶ ಫೌಂಡೇಷನ್ ಸಂಸ್ಥಾಪಕ
ನಾಯಿಗಾಗಿ ಹುಡುಗ-ಹುಡುಗಿ ಮಧ್ಯೆ ಬೀದಿಜಗಳ; ಕೊನೆಗೆ ಹುಡುಗಿಯೊಂದಿಗೇ ಹೋದ ನಾಯಿ!

ಅಂಗಡಿಯಲ್ಲಿ ಗ್ಯಾಸ್​ ಸಿಲಿಂಡರ್​ ಸ್ಫೋಟ; ಬಾಲಕಿ ಸೇರಿ ಇಬ್ಬರು ಜೀವಂತ ದಹನಗೊಂಡು ಸ್ಥಳದಲ್ಲೇ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + nineteen =
Remember me
