ದೇಶದಲ್ಲಿ ವಿಕೃತಿಕಾಮಿಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ಕಾಣಿಸಿಕೊಂಡಿರುವ 51 ವರ್ಷದ ವಿಕೃತಕಾಮಿ ಸ್ವಲ್ಪ ಭಿನ್ನ. ಏಕೆಂದರೆ, 14ರ ಬಾಲೆಗೆ ಈತ ಲೈಂಗಿಕ ಕಿರುಕುಳ ನೀಡಿದ್ದ. ಇದರಿಂದ ಬೇಸತ್ತ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದೆ ಅನುಮಾನಾಸ್ಪದವಾಗಿ ಸತ್ತ ಆಕೆಯ ಶವಸಂಸ್ಕಾರವನ್ನು ರಾತ್ರೋರಾತ್ರಿಯೇ ನೆರವೇರಿಸಿದ್ದರು.
ಬಾಲೆಯ ಶವ ಹೂತಿದ್ದ ಸ್ಥಳ ತಿಳಿದಿದ್ದ ಈತ ಮರುದಿನ ಮಧ್ಯಾಹ್ನ ಅಲ್ಲಿಗೆ ತೆರಳಿ ಬಾಲೆಯ ಶವವನ್ನು ಹೊರತೆಗೆದಿದ್ದ. ಬಳಿಕ ಶವದೊಂದಿಗೆ ಸಂಭೋಗ ನಡೆಸಲು ಯತ್ನಿಸುತ್ತಿದ್ದ. ಪಕ್ಕದಲ್ಲೇ ಹರಿಯುವ ನದಿಯಲ್ಲಿ ಮೀನು ಹಿಡಿಯುತ್ತಿದ್ದವರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ತೆರಳಿ ಆತನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಅಸ್ಸಾಂನ ಧೀಮಾಜಿ ಜಿಲ್ಲೆಯ ನಿವಾಸಿ ಅಕನ್​ ಸೈಕಿಯಾ (51) ಬಂಧಿತ. ಈತ ಮಾನಸಿಕ ಅಸ್ವಸ್ಥನಂತೆ ಕಾಣದಿದ್ದರೂ ವಿಕೃತಿಕಾಮಿ ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಅಕನ್​ ಸೈಕಿಯಾ ಮನೆಯ ಪಕ್ಕದಲ್ಲೇ ಬಾಲಕಿ ವಾಸವಾಗಿದ್ದಳು. ಬಹುಶಃ ಈತನ ಕಿರುಕುಳ ತಡೆಯಲಾರದೆ ಬಾಲಕಿ ಮೇ 17ರಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಅಂದೇ ರಾತ್ರಿ ಗ್ರಾಮದ ಪಕ್ಕದಲ್ಲೇ ಹರಿಯುವ ಸಿಮೆನ್​ ನದಿಯ ತಟದಲ್ಲಿ ಬಾಲಕಿಯ ಶವವನ್ನು ಹೂಳಲಾಗಿತ್ತು. ಈ ಸಂದರ್ಭದಲ್ಲಿ ಕೆಲ ಗ್ರಾಮಸ್ಥರು ಉಪಸ್ಥಿತರಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಕ್ವಾರಂಟೈನ್​ ಮುಗಿಯುತ್ತಿದ್ದಂತೆ ಗಂಡ, ಮಗುವನ್ನು ಬಿಟ್ಟು ಪ್ರಿಯಕರನೊಂದಿಗೆ ಮಹಿಳೆ ಪರಾರಿ!
ಆದರೆ, ಮೇ 18ರ ಮಧ್ಯಾಹ್ನ ಶವಸಂಸ್ಕಾರದ ಸ್ಥಳಕ್ಕೆ ತೆರಳಿದ್ದ ಅಕನ್​ ಸೈಕಿಯಾ, ಸಮಾಧಿಯನ್ನು ಅಗೆದು ಬಾಲಕಿಯ ಶವವನ್ನು ಹೊರತೆಗೆದಿದ್ದ. ಶವದೊಂದಿಗೆ ಸಂಭೋಗ ನಡೆಸುವ ಸಂದರ್ಭದಲ್ಲಿ ಸಿಮೆನ್​ ನದಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದವರು ಇದನ್ನು ಗಮನಿಸಿದ್ದರು. ತಕ್ಷಣವೇ ಸ್ಥಳಕ್ಕೆ ಧಾವಿಸಿ ಆತನನ್ನು ಹಿಡಿದುಕೊಂಡಿದ್ದರು. ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು ಎಂದು ಧೀಮಾಜಿಯ ಎಸ್​ಪಿ ಧನಂಜಯ್​ ಘಣಾವತ್​ ತಿಳಿಸಿದ್ದಾರೆ.
ಸೈಕಿಯಾ ಈ ಹಿಂದೆ ಎರಡು ಮದುವೆಯಾಗಿದ್ದ. ಈತನ ಎರಡನೇ ಪತ್ನಿ 2018ರಲ್ಲಿ ಈತನ ವಿರುದ್ಧ ಕೌಟುಂಬಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಳು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ, ಧೀಮಾಜಿ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು.ದೇಶಾದ್ಯಂತ ಕೋವಿಡ್​-19 ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್​ ಸೂಚಿಸಿತ್ತು. ಆ ಸೂಚನೆ ಮೇರೆಗೆ ಜೈಲು ಅಧಿಕಾರಿಗಳು ಸೈಕಿಯಾನನ್ನು ಪೆರೊಲ್​ ಮೇಲೆ ಬಿಡುಗಡೆ ಮಾಡಿದ್ದರು ಎಂದು ಎಸ್​ಪಿ ಧನಂಜಯ್​ ಘಣಾವತ್​ ಹೇಳಿದ್ದಾರೆ.
ಈತ ಲಂಪಟನಂತೆ ಕಾಣುತ್ತಾನೆ. ಇದೀಗ ಬಾಲೆಯ ಶವಪರೀಕ್ಷೆ ಮಾಡಿಸಿ, ಮತ್ತೆ ಹೂಳಲಾಗಿದೆ. ಈತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಅಸಹಜ ಲೈಂಗಿಕಕ್ರಿಯೆ ಹಾಗೂ ಪೋಕ್ಸೋ ಕಾಯ್ದೆಯಡಿ ಆತನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಮಕ್ಕಳ ಬೆನ್ನುಹತ್ತಿದೆ ಕರೊನಾ ಮಾರಿ: ಇದೀಗ ಸೌದಿಯೂ ನೀಡಿದೆ ದೊಡ್ಡ ಶಾಕ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − nine =
Remember me
