ಕೋಲ್ಕತ:ಲಾಟರಿ ಹೊಡೆಯಲು ಆಕೆಯೇನು ಲಾಟರಿ ಕೊಂಡಿರಲಿಲ್ಲ ಅಥವಾ ಹಣಕ್ಕಾಗಿ ಬ್ಯಾಂಕ್​ ಲೂಟಿಯೂ ಮಾಡಿಲ್ಲ. ಆದರೂ ಪಶ್ಚಿಮ ಬಂಗಾಳದ ಹಿರಿಯ ಮಹಿಳೆಯೊಬ್ಬರು ರಾತ್ರೋರಾತ್ರಿ ಲಕ್ಷಾಧೀಶೆಯಾಗಿದ್ದಾರೆ. ಕಳೆದ ಶನಿವಾರ ಹಿಡಿದ ಭಾರಿ ಗಾತ್ರದ ಮೀನೊಂದು ಮಹಿಳೆಯ ಬದುಕನ್ನೇ ಬದಲಿಸಿದೆ.
ಅಜ್ಜಿಯ ಹೆಸರು ಪುಷ್ಪಕರ್. ಇವರು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸುಂದರ್​ಬನ್​ ಏರಿಯಾದ ಸಾಗರ ದ್ವೀಪದ ನಿವಾಸಿ. ಶನಿವಾರ ಮೀನು ಹಿಡಿಯುವ ವೇಳೆ ಅಕಸ್ಮಾತ್ತಾಗಿ ನದಿಯಿಂದ 52 ಕೆ.ಜಿ ಗಾತ್ರದ ಮೀನನ್ನು ಹಿಡಿದಿದ್ದರು. ಇದೇ ಮೀನು ಇದೀಗ ಅಜ್ಜಿಯ ಭಾಗ್ಯದ ಬಾಗಿಲನ್ನು ತೆರೆದಿದೆ.
ಕೆಜಿಗೆ 6,200 ರೂ.ನಂತೆ ಮಾರಾಟವಾಗಿದ್ದು, 52 ಕೆಜಿಗೆ ಬರೋಬ್ಬರಿ 3 ಲಕ್ಷ ರೂ. ಅಜ್ಜಿ ಪಾಲಿಗೆ ಒಲಿದು ಬಂದಿದೆ. ಇನ್ನು ಭಾರಿ ಗಾತ್ರದ ಮೀನು ಹಾದು ಹೋಗುವ ಹಡಗಿಗೆ ಡಿಕ್ಕಿ ಹೊಡೆದು ಗಾಯಗೊಂಡು ಸತ್ತಿರಬಹುದು ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಕೊಳೆಯಲು ಆರಂಭಿಸದೇ ಇದ್ದಿದ್ದಲ್ಲಿ ಇನ್ನು ಹೆಚ್ಚಿನ ಹಣ ಅಜ್ಜಿಗೆ ಸಿಗುತ್ತಿತ್ತು.
ಇದನ್ನೂ ಓದಿ:2 ವರ್ಷದ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಸಮುದ್ರದಲ್ಲಿ ಜೀವಂತ ಪತ್ತೆ: ಎದೆ ಝಲ್​ ಎನಿಸುವ ಘಟನೆ ಇದು!
ಅಂದಹಾಗೆ ಅಜ್ಜಿ ನದಿಯಲ್ಲಿ ತೇಲುತ್ತಿದ್ದ ಭಾರಿ ಗಾತ್ರದ ಮೀನನ್ನು ನೋಡಿದ ಕೂಡಲೇ ನದಿಗೆ ಹಾರಿದ್ದಾಳೆ. ಸಾಕಷ್ಟು ಶ್ರಮ ಹಾಕಿದ ಬಳಿಕ ಹೇಗೋ ನದಿಯ ದಡಕ್ಕೆ ಮೀನನ್ನು ಎಳೆ ತರುವಲ್ಲಿ ಯಶಸ್ವಿಯಾಗಿದ್ದಾಳೆ. ಬಳಿಕ ಆ ಮೀನನ್ನು ಮಾರುಕಟ್ಟೆಗೆ ಸಾಗಿಸಲು ಸ್ಥಳೀಯರು ನೆರವು ನೀಡಿದ್ದಾರೆ. ಆವಾಗಲೇ ಗೊತ್ತಾಗಿದ್ದು, ಅಜ್ಜಿ ಹಿಡಿದಿದ್ದು, ಭೋಲಾ ಮೀನು ಎಂದು.
ಇನ್ನು ಮೀನು ಕೊಳೆಯಲು ಆರಂಭಿಸಿದ್ದರಿಂದ ಹೊಟ್ಟೆ ಊದಲು ಪ್ರಾರಂಭವಾಗಿತ್ತು. ಹೀಗಾಗಿ ಮೀನು ತಿನ್ನಲು ಯೋಗ್ಯವಾಗದೇ ಇದ್ದುದ್ದರಿಂದ ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ. ಆಗ್ನೇಯ ಏಷ್ಯಾದ ದೇಶಗಳಿಗೆ ಬ್ಲಬ್ಬರ್‌ನಂತಹ ಮೀನಿನ ಅಂಗಗಳನ್ನು ರಫ್ತು ಮಾಡಲಾಗುತ್ತದೆ. ಒಣ ಬ್ಲಬ್ಬರ್​ ಅಥವಾ ಫಿಶ್​ ಮಾ ಕೆಜಿಗೆ 80 ಸಾವಿರ ರೂ. ಇದೆ. ಇದನ್ನು ವೈದ್ಯಕೀಯ ಉಪಯೋಗಕ್ಕೂ ಬಳಸಿಕೊಳ್ಳಲಾಗುತ್ತದೆ.
ಅಜ್ಜಿಗೆ ಇದೊಂದು ಎಂದು ಮರೆಯದ ಕ್ಷಣವಾಗಿದ್ದು, ತನ್ನೆಲ್ಲಾ ಆರ್ಥಿಕ ಸಂಕಷ್ಟಗಳು ಇದೀಗ ಭಾರಿ ಗಾತ್ರದ ಮೀನಿನಿಂದ ಬದಲಾಗಿದೆ.(ಏಜೆನ್ಸೀಸ್​)
ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳು ನಿರ್ದೋಷಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
