ಮುಂಬೈ:ದೇಶದ ವಾಣಿಜ್ಯ ರಾಜಧಾನಿ ಎಂದೇ ಹೆಸರಾಗಿರುವ ಮುಂಬೈವೊಂದರಲ್ಲಿಯೇ ವಿವಿಧ ಮಾಧ್ಯಮ ಸಂಸ್ಥೆಗಳ 53 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ದೇಶದಲ್ಲಿ ಮಹಾರಾಷ್ಟ್ರದಲ್ಲಿ ಅತಿ ಕರೊನಾ ಸೋಂಕಿತರಿದ್ದಾರೆ. ಪ್ರಸ್ತುತ ಅವರ ಸಂಖ್ಯೆ 4,203ಕ್ಕೆ ತಲುಪಿದೆ. ಈಗಾಗಲೇ 223 ಜನರು ಮೃತಪಟ್ಟಿದ್ದಾರೆ.
ಮಾಧ್ಯಮದವರಿಗಾಗಿಯೇ ವಿಶೇಷ ಆರೋಗ್ಯ ತಪಾಸಣೆ ಶಿಬಿರವನ್ನು ಬೃಹನ್ಮುಂಬೈ ಪಾಲಿಕೆ ಆಯೋಜಿಸಲಾಗಿತ್ತು. ಇದರಲ್ಲಿ 167ಕ್ಕೂ ಅಧಿಕ ಜನರನ್ನು ತಪಾಸಣೆಗೆ ಒಳಪಡಿಸಿ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ 53 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಎಲ್ಲ ವರದಿಗಳ ಬಂದ ಬಳಿಕ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯ ಆಮೇ ಘೋಲೆ ಮಾಹಿತಿ ನೀಡಿದ್ದಾರೆ.ಸೋಂಕಿತರಲ್ಲಿ ಹೆಚ್ಚಿನವರು ಎಲೆಕ್ಟ್ರಾನಿಕ್​ ಮಾಧ್ಯಮಗಳ ವರದಿಗಾರರು ಹಾಗೂ ಕ್ಯಾಮರಾಮನ್​ಗಳು ಹಾಗೂ ಫೋಟೋಗ್ರಾಫರ್​ಗಳು ಸೇರಿದ್ದಾರೆ ಎಂದು ಮುಂಬೈ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಮಾಧ್ಯಮದವರ ಆರೋಗ್ಯ ತಪಾಸಣೆಗೆ ಇನ್ನೊಂದು ಶಿಬಿರವನ್ನು ಶೀಘ್ರದಲ್ಲಿ ಏರ್ಪಡಿಸುವಂತೆ ಸಿಎಂಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಘೋಲೆ ತಿಳಿಸಿದ್ದಾರೆ.
ಕರೊನಾದಿಂದ ಒಂದೇ ದಿನ 36 ಸಾವು, 1,553 ಜನರಿಗೆ ಸೋಂಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 16 =
Remember me
