ಕಾನ್ಪುರ:ಸರ್ಕಾರಿ ಆಶ್ರಯತಾಣದಲ್ಲಿ ವಾಸವಾಗಿದ್ದ 57 ಹೆಣ್ಣುಮಕ್ಕಳಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಉತ್ತರಪ್ರದೇಶದ ಕಾನ್ಪುರದಲ್ಲಿರುವ ಸರ್ಕಾರಿ ವಸತಿ ಗೃಹದಲ್ಲಿ ಕಳೆದವಾರ ಕರೊನಾ ಟೆಸ್ಟ್ ಮಾಡಿಸಲಾಗಿತ್ತು. ಅವರಲ್ಲಿ 57 ಹುಡುಗಿಯರು ಹಾಗೂ ಓರ್ವ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದೆ.
57 ಹೆಣ್ಣುಮಕ್ಕಳನ್ನೂ ಕೊವಿಡ್​​-19 ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಕರೊನಾ ಸೋಂಕಿಲ್ಲದ ಉಳಿದ ಹೆಣ್ಣುಮಕ್ಕಳನ್ನು ಮತ್ತು ವಸತಿಗೃಹದ ಸಿಬ್ಬಂದಿಯನ್ನು ಕ್ವಾರಂಟೈನ್​ ಮಾಡಲಾಗಿದೆ.
ಆದರೆ ಕರೊನಾ ಟೆಸ್ಟ್​ ವೇಳೆ ಇನ್ನೊಂದು ಆತಂಕಕಾರಿ ವಿಷಯ ಹೊರಬಿದ್ದಿದೆ. 57 ಹೆಣ್ಣುಮಕ್ಕಳಲ್ಲಿ ಒಟ್ಟು ಐವರು ಗರ್ಭಿಣಿಯರಾಗಿದ್ದು, ಅವರಲ್ಲೂ ಸೊಂಕು ಇದೆ ಎಂದು ವರದಿಯಾಗಿದೆ. ವಸತಿ ಗೃಹದಲ್ಲಿರುವ ಬಾಲಕಿಯರು ಗರ್ಭಿಣಿಯಾಗಿದ್ದಾರೆಂಬ ಸುದ್ದಿಯನ್ನು ಸ್ಥಳೀಯ ಮಾಧ್ಯಮಗಳು ಬಿಹಾರದ ಮುಜಾಫರ್​ಪುರ ಬಾಲಕಿಯರ ವಸತಿನಿಲಯದಲ್ಲಾದ ಘಟನೆಗೆ ಹೋಲಿಸಿ ವರದಿ ಮಾಡಿವೆ.
ವಸತಿ ನಿಲಯದಲ್ಲಿರುವ ಹೆಣ್ಣುಮಕ್ಕಳಲ್ಲಿ ಏಳು ಮಂದಿ ಗರ್ಭಿಣಿಯರು. ಅವರಲ್ಲಿ ಐವರಲ್ಲಿ ಕರೊನಾ ದೃಢಪಟ್ಟಿದೆ. ಇನ್ನಿಬ್ಬರ ವರದಿ ನೆಗೆಟಿವ್​ ಎಂದು ಬಂದಿದೆ ಎಂದು ಹೇಳಲಾಗಿದೆ. ಅದರಲ್ಲೂ ಒಂದು ಹುಡುಗಿಗೆ ಎಚ್​ಐವಿ ಇದೆ ಎನ್ನಲಾಗಿದೆ.ಇದನ್ನೂ ಓದಿ:VIDEO: ಟ್ರೆಂಡಿಂಗ್​ನಲ್ಲಿದೆ ಚಹಾ ಮಾಡುವ ಈ ವಿಧಾನ- ನೀವೂ ಟ್ರೈ ಮಾಡಿ 🙂
ಇಲ್ಲಿನ 57 ಹುಡುಗಿಯರಿಗೆ ಕರೊನಾ ದೃಢಪಟ್ಟ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಹಾಗೂ ಇನ್ನೂ ಮದುವೆಯಾಗದ, ಅಪ್ರಾಪ್ತ ಹುಡುಗಿಯರು ಗರ್ಭಿಣಿಯಾಗಿದ್ದಾರೆ ಎಂಬ ವಿವಾದ ಸೃಷ್ಟಿಯಾಗುತ್ತಿದ್ದಂತೆ ಅಲ್ಲಿನ ಜಿಲ್ಲಾಧಿಕಾರಿ ಡಾ. ಬ್ರಹ್ಮದೇವ್​ ರಾಮ್​ ಅವರು ಸುದ್ದಿಗೋಷ್ಠಿ ನಡೆಸಿ, ಸ್ಪಷ್ಟನೆ ನೀಡಿದ್ದಾರೆ.ಇದನ್ನೂ ಓದಿ:ಟ್ರೋಲ್​ಗೆ ಹೆದರಿದ ಸೋನಾಕ್ಷಿ ಸಿನ್ಹಾ…! ಟ್ವಿಟರ್ ಖಾತೆ ಡಿ- ಆ್ಯಕ್ಟಿವೇಟ್
ಸೋಂಕಿತರಾದ 57 ಹುಡುಗಿಯರಲ್ಲಿ ಐವರು ಗರ್ಭಿಣಿಯರು ಇದ್ದಾರೆ. ಉಳಿದ ಇಬ್ಬರು ಗರ್ಭಿಣಿಯರಿಗೆ ಕರೊನಾ ನೆಗೆಟಿವ್​ ಎಂದು ವರದಿ ಬಂದಿದೆ. ಇನ್ನು ಗರ್ಭಿಣಿಯರಾದ ಹುಡುಗಿಯರು ಯಾರೂ ಇಲ್ಲಿಗೆ ಬಂದ ನಂತರ ಆಗಿದ್ದಲ್ಲ. ಇವರೆಲ್ಲ ಬೇರೆಬೇರೆ ಜಿಲ್ಲೆಗಳಿಂದ ಕಳೆದ ವರ್ಷ ಡಿಸೆಂಬರ್​ನಲ್ಲಿ ಇಲ್ಲಿಗೆ ಬಂದವರು. ಆಯಾ ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಯವರು ಕಳಿಸಿದ್ದಾರೆ. ಇವೆಲ್ಲವೂ ಪೋಕ್ಸೋ ಕಾಯ್ದೆಯಡಿ ಇರುವ ಪ್ರಕರಣಗಳು. ನಮ್ಮ ಆಶ್ರಯತಾಣದಲ್ಲಿ ಎಲ್ಲರನ್ನೂ ರಕ್ಷಣೆ ಮಾಡಲಾಗುತ್ತಿದೆ ಎಂದಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 2 =
Remember me
